ಮಂಡ್ಯ,ಸೆ.4- ಆಸ್ತಿಗಾಗಿ ಮಗನಿಂದಲೇ ತಂದೆಗೆ ಬ್ಲ್ಯಾಕ್ಮೇಲ್ ಮಾಡಿರುವ ಘಟನೆ ಮದ್ದೂರಿನಲ್ಲಿ ನಡೆದಿದೆ.
ಮಗನ ವಿರುದ್ದ ಆಕ್ರೋಶಗೊಂಡ ತಂದೆ ಪೊಲೀಸರಿಗೆ ದೂರು ನೀಡಿದ್ದು, ಬೆದರಿಕೆ ಹಾಕಿದ ಆರೋಪಿ ಮಗನನ್ನು ಮದ್ದೂರು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ರಾಜ್ಯದ ಹಲವೆಡೆ ರಾಣಿ ಐಶ್ವರ್ಯ ಡೆವಲಪರ್ಸ್ ಹೆಸರಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುವ ಸತೀಶ್ ಅವರ ಪುತ್ರ ಪ್ರಣವ್ (25) ತಂದೆಯ ಕೋಟ್ಯಾಂತರ ರೂ. ಕಳೆದು ಮತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದನು,
ಆದರೆ ಯಾವಾಗ ತಂದೆ ಹಣ ಕೊಡಲಿಲ್ಲವೋ ಬುದ್ದಿ ಕಲಿಸಲು ಮುಂದಾಗಿ ಕೆಲವರ ಜೊತೆ ಸೇರಿ ಅಪ್ಪನಿಗೆ ಖೆಡ್ಡಾ ತೋಡಿ ತಂದೆಯ ಭಾವಚಿತ್ರಕ್ಕೆ ಅಶ್ಲೀಲ ಚಿತ್ರ ಹಾಗೂ ವಾಯ್ಸ್ ಎಡಿಟ್ ಮಾಡಿ ವಾಟ್ಸಾಪ್ ಗ್ರೂಪ್ಗೆ ಹಾಕಿ, ಹಣಕ್ಕೆ ಬೇಡಿಕೆ ಇಟ್ಟಿದ್ದ. ಇದನ್ನು ತಿಳಿದ ತಂದೆ ಮಗನ ವಿರುದ್ಧ ತಂದೆ ಬ್ಲ್ಯಾಕ್ಮೇಲ್ ಆರೋಪ ಮಾಡಿದ್ದಾರೆ.
ಮಗನಿಗೆ ಪ್ರಚೋದಿಸಿದವರು ಸೇರಿ ಮಗನ ವಿರುದ್ಧ ಮದ್ದೂರು ಪೊಲೀಸರಿಗೆ ತಂದೆ ದೂರು ನೀಡಿದ್ದು, ಅವರ ದೂರಿನ ಮೇರೆಗೆ ಆರೋಪಿಗಳಾದ ಮಗ ಪ್ರಣವ್, ಮಹೇಶ್, ಈಶ್ವರ್, ಪ್ರೀತಮ್ ನನ್ನು ಬಂಧಿಸಿದ್ದಾರೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
Previous Articleಇವರಿಗೆಲ್ಲಾ ಅನ್ನಭಾಗ್ಯದ ಅಕ್ಕಿ ಸಿಗುವುದಿಲ್ಲ !
Next Article ಬೆಂಗಳೂರಿನ ಮನೆ ಮಾಲೀಕರೇ ಎಚ್ಚರ !

