ಟೊಕಿಯೊ: ಎರಡು ದಿನಗಳ ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಟೋಕಿಯೋದಲ್ಲಿ ಹಿಂದಿ ಮಾತನಾಡಿದ ಜಪಾನಿ ಬಾಲಕನನ್ನು ಕಂಡು ಖುಷಿಪಟ್ಟರು.
ಜಪಾನಿ ಬಾಲಕ ವಿಝುಕಿ ಭಾರತದ ತ್ರಿವರ್ಣ ಧ್ವಜದ ಪ್ಲೆಕಾರ್ಡ್ ಹಿಡಿದು, ಮೋದಿ ಅವರೊಂದಿಗೆ ಹಿಂದಿಯಲ್ಲಿ ಮೂರು ವಾಕ್ಯ ಮಾತನಾಡಿದ. ಇದನ್ನು ಕೇಳಿ ಮೋದಿ ಖುಷಿಯಿಂದ ಹಸ್ತಾಕ್ಷರ ಹಾಕಿ ಬಾಲಕನ ತಲೆ ನೇವರಿಸಿದರು.
‘ವಾವ್, ನೀನು ಹಿಂದಿ ಎಲ್ಲಿ ಕಲಿತೆ? ನಿನಗೆ ಹಿಂದೆ ಚೆನ್ನಾಗಿ ಬರುತ್ತಾ?’ ಎಂದು ಮೋದಿ ಪ್ರಶ್ನಿಸಿದರು.
‘ನನಗೆ ಹಿಂದಿ ಹೆಚ್ಚು ಮಾತನಾಡೋಕೆ ಬರುವುದಿಲ್ಲ. ಆದರೆ ಅರ್ಥವಾಗುತ್ತೆ. ಮುಂದೆ ಇನ್ನೂ ಚೆನ್ನಾಗಿ ಕಲೀತೀನಿ. ಮೋದಿ ಅವರೊಂದಿಗೆ ಮಾತನಾಡೋಕೆ ಅಂತ ಮೂರು ವಾಕ್ಯ ಅಭ್ಯಾಸ ಮಾಡಿಕೊಂಡು ಬಂದಿದ್ದೆ’ ಎಂದು ಮೋದಿ ಅವರ ಮೆಚ್ಚುಗೆಗೆ ಪಾತ್ರನಾದ ಜಪಾನಿ ಬಾಲಕ ವಿಝುಕಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ.
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಮುಂಜಾನೆ ಜಪಾನ್ಗೆ ಬಂದಿಳಿದಿದ್ದು, ಕ್ವಾಡ್ ಸಮಾವೇಶ ಮತ್ತು ಹಲವು ದ್ವಿಪಕ್ಷೀಯ ಮಾತುಕತೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಮುಖ ಉದ್ಯಮಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಸೋಮವಾರ ಬೆಳಗ್ಗೆ ಟೋಕಿಯೊದಲ್ಲಿ ಲ್ಯಾಂಡ್ ಆದೆ. ಕ್ವಾಡ್ ಸಮಾವೇಶವೂ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೇನೆ. ಕ್ವಾಡ್ ದೇಶಗಳ ನಾಯಕರನ್ನು ಭೇಟಿಯಾಗುವುದರೊಂದಿಗೆ ಜಪಾನ್ ಪ್ರಧಾನಿ, ಉದ್ಯಮಿಗಳು ಮತ್ತು ಜಪಾನ್ನಲ್ಲಿ ನೆಲೆಸಿರುವ ಭಾರತೀಯರೊಂದಿಗೂ ಮಾತನಾಡುತ್ತೇನೆ’ ಎಂದು ಮೋದಿ ಜಪಾನೀಸ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಟ್ವೀಟ್ ಮಾಡಿದ್ದಾರೆ.
ಹಿಂದಿ ಮಾತನಾಡಿದ ಜಪಾನ್ ಬಾಲಕ: ವಾವ್ ಎಂದ ಮೋದಿ
Previous ArticleSDM ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಡಾ.ಯಶೋವರ್ಮ ನಿಧನ
Next Article ಲಷ್ಕರ್ ಉಗ್ರರ ಸೆರೆ