ಬೆಂಗಳೂರು.
ದೇಶದ ಅರ್ಥ ವ್ಯವಸ್ಥೆಯಲ್ಲಿ ಯುಪಿಐ ವ್ಯವಸ್ಥೆ ದೊಡ್ಡ ಕ್ರಾಂತಿಕಾರಿಯಾದ ಬದಲಾವಣೆ ತಂದಿದೆ. ಆನ್ ಲೈನ್ ಮೂಲಕ ಆರ್ಥಿಕ ವ್ಯವಹಾರಗಳು ನಡೆಯುತ್ತಿರುವ ಪರಿಣಾಮ ನಗದು ಚಲಾವಣೆ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಈ ಡಿಜಿಟಲ್ ಕರೆನ್ಸಿಯಿಂದಾಗಿ ಹಲವಡೆ ಪಾರದರ್ಶಕ ಪಾವತಿ ವ್ಯವಸ್ಥೆ ಜಾರಿಗೆ ಬಂದಿದೆ. ಚಿಲ್ಲರೆ ಸಮಸ್ಯೆಯನ್ನು ದೊಡ್ಡ ಪ್ರಮಾಣದಲ್ಲಿ ನೀಗಿಸಿದೆ. ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ಇದನ್ನು ಅಳವಡಿಸಿಕೊಂಡ ಪರಿಣಾಮ ಭ್ರಷ್ಟಾಚಾರವು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿದೆ ಇದರಿಂದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಾಕಷ್ಟು ಲಾಭ ಮಾಡುವಂತಾಗಿದೆ
ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ನೀಗಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ದಿನವೊಂದಕ್ಕೆ ಯುಪಿಐ ಮೂಲಕ ಒಂದು ಕೋಟಿ ರೂಪಾಯಿಗೂ ಅಧಿಕ ಹಣವನ್ನು ಸಂಗ್ರಹಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.
ಬಿಎಂಟಿಸಿಯ ಎಲ್ಲಾ ಬಸ್ಗಳಲ್ಲೂ UPI ಕೋಡ್ ಅಳವಡಿಸಲಾಗಿದೆ. ಇದರಿಂದ ಪ್ರಯಾಣಿಕರು ಕಿರಿಕಿರಿ ಇಲ್ಲದೆ ತಾವು ಹೋಗಬೇಕಾದಲ್ಲಿಗೆ ಡಿಜಿಟಲ್ ಪಾವತಿ ಮೂಲಕ ಹಣ ನೀಡಿ ಟಿಕೆಟ್ ಪಡೆದುಕೊಂಡು ಪ್ರಯಾಣ ಬೆಳೆಸುತ್ತಿದ್ದಾರೆ ಇದರಿಂದ ಟಿಕೆಟ್ ರಹಿತ ಪ್ರಯಾಣದ ದೂರು ಕೂಡ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿದೆ, ಚಿಲ್ಲರೆಗಾಗಿ ಕಂಡಕ್ಟರ್ ಗಳು ನಡೆಸುತ್ತಿದ್ದ ಪರದಾಟ ಕೂಡ ಇಲ್ಲದಂತಾಗಿದೆ.
ಬಿಎಂಟಿಸಿಯಲ್ಲಿ 6500 ಬಸ್ಗಳಿವೆ, ಆ ಬಸ್ಗಳಿಂದ ಪ್ರತಿದಿನ 5 ರಿಂದ 6 ಕೋಟಿ ರೂಪಾಯಿ ಟಿಕೆಟ್ ಮೂಲಕ ಆದಾಯ ಹರಿದು ಬರುತ್ತದೆ. ಇದರಲ್ಲಿ ಒಂದು ಕೋಟಿ ರೂಪಾಯಿ ಯುಪಿಐ ಮೂಲಕ ಸಂಗ್ರಹವಾಗುತ್ತಿದೆ .ಈ ಪ್ರಮಾಣ ಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನುತ್ತವೆ ಬಿಎಂಟಿಸಿ ಯ ಮೂಲಗಳು. ಪ್ರಯಾಣಿಕರ ಟಿಕೆಟ್ ನಿಂದ ಬಿಎಂಟಿಸಿ ಯಲ್ಲಿ ತಿಂಗಳಿಗೆ 180 ಕೋಟಿಯಷ್ಟು ಸಂಗ್ರಹವಾದರೆ, ಅದರಲ್ಲಿ 90 ಕೋಟಿಯಷ್ಟು ಶಕ್ತಿ ಯೋಜನೆ ಟಿಕೆಟ್ ಕಲೆಕ್ಷನ್ ಆಗುತ್ತಿದೆ.
Previous Articleನಟ ಸೋನು ಸೂದ್ ನನ್ನು ಬಂಧಿಸಿ
Next Article ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್.