ಬೆಂಗಳೂರು,ಫೆ.6-ಹಣಕಾಸಿನ ವಿಚಾರಕ್ಕಾಗಿ ಪತ್ನಿಗೆ ನಿದ್ರೆ ಮಾತ್ರೆ ನೀಡಿ ಪ್ರಜ್ಞೆ ತಪ್ಪಿಸಿ ಕತ್ತು ಹಿಸುಕಿ ಕೊಲೆಗೈದು ಸಹಜ ಸಾವೆಂದು ಬಿಂಬಿಸಿದ್ದ ಖತರ್ನಾಕ್ ಪತಿಯನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ.
ಮಲ್ಲೇಶ್ವರದ 18ನೇ ಅಡ್ಡರಸ್ತೆಯ ಪತ್ನಿ ಚೇತನಾ (42)ರನ್ನು ಕೊಲೆಗೈದ ಪತಿ ಶರತ್ ಉತ್ತಂಗಿ (43) ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮೃತಳ ಸಂಬಂಧಿ ಅಕ್ಷಯ್ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಶೇಖರ್ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ಮೂಲದ ಶರತ್, ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಪತ್ನಿ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. 15 ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದ ದಂಪತಿಗೆ ಹೆಣ್ಣುಮಗುವಿದೆ. ಕಳೆದೊಂದು ವರ್ಷದಲ್ಲಿ ಮಲ್ಲೇಶ್ವರದ 18ನೇ ಅಡ್ಡರಸ್ತೆಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಇಬ್ಬರಿಗೂ ಕೈತುಂಬಾ ಸಂಬಳ ಬರುತಿತ್ತು. ಏತನ್ಮಧ್ಯೆ ಹಣಕಾಸಿನ ವಿಚಾರಕ್ಕಾಗಿ ಇಬ್ಬರ ನಡುವೆ ವೈಮನಸ್ಸು ಮೂಡಿತ್ತು. ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಆಗಾಗ ಜಗಳವಾಗುತಿತ್ತು.
ಕಳೆದ ಫೆ.3ರಂದು ದಂಪತಿ ನಡುವೆ ಗಲಾಟೆಯಾಗಿದೆ. ಜ್ವರದ ಮಾತ್ರೆಯ ಸೋಗಿನಲ್ಲಿ ಪತ್ನಿಗೆ ನಿದ್ರೆ ಮಾತ್ರೆ ನೀಡಿದ್ದ. ಬಳಿಕ ಗಾಢ ನಿದ್ರೆಯಲ್ಲಿದ್ದ ಪತ್ನಿಯನ್ನು ಕತ್ತುಹಿಸುಕಿ ಪತಿ ಸಾಯಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ತಿಳಿಸಿದರು. ಪೊಲೀಸರು ಮಾಹಿತಿ ನೀಡಿದ್ದಾರೆ.
ಸುಳ್ಳು ಕಥೆ ಕಟ್ಟಿದ್ದ:
ಫೆ.3ರಂದು ಸುಸ್ತು, ತಲೆ ಸುತ್ತು ಬಂದಿದೆ ಎಂದು ಪತ್ನಿ ಚೇತನಾ ತನ್ನ ಬಳಿ ಹೇಳಿಕೊಂಡಿದ್ದಳು. ಹೀಗಾಗಿ ಜ್ವರದ ಮಾತ್ರೆ ನೀಡಿದೆ. ರಾತ್ರಿ ಎಂದಿನಂತೆ ಮಲಗಿದ್ದಳು. ಮಧ್ಯರಾತ್ರಿ 2.30ಕ್ಕೆ ಪಕ್ಕದಲ್ಲಿ ಮಲಗಿದ್ದ ಪತಿಯು ಮಂಚದಿಂದ ಕೆಳಗೆ ಬಿದ್ದಿದ್ದಳು. ಕೂಡಲೇ ಮಗಳನ್ನು ಎಬ್ಬಿಸಿ, ನೆಲಮಹಡಿಯಲ್ಲಿ ವಾಸವಿದ್ದವರ ಸಹಾಯದಿಂದ ಕೂಡಲೇ ಖಾಸಗಿ ಆಸ್ಪತ್ರೆ ಸೇರಿಸಿದರೂ ಮಾರ್ಗಮಧ್ಯೆದಲ್ಲಿ ಪತ್ನಿ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿರುವುದಾಗಿ ಸಂಬಂಧಿಕರ ಮುಂದೆ ಸುಳ್ಳು ಹೇಳಿದ್ದ.
ಮೃತದೇಹವನ್ನು ಪರಿಶೀಲಿಸಿದಾಗ ಕುತ್ತಿಗೆ ಹಾಗೂ ಕೆನ್ನೆಯಲ್ಲಿ ತರಚಿದ ಗಾಯವಿರುವುದನ್ನು ಗಮನಿಸಿದ್ದರು. ಚೇತನಾಳನ್ನು ಕುತ್ತಿಗೆ ಹಿಸುಕಿ ಹತ್ಯೆ ಮಾಡಿರುವುದಾಗಿ ಶಂಕೆ ವ್ಯಕ್ತಪಡಿಸಿ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಿಚಾರಣೆ ನಡೆಸಿದಾಗ ಹತ್ಯೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ ಎಂದು ತಿಳಿಸಿದ್ದಾರೆ.
Previous Article99 ರೂಪಾಯಿ ಸಾಲಕ್ಕೆ 58 ಸಾವಿರ ಕೊಡಬೇಕಂತೆ.?
Next Article ಪ್ರಧಾನಿ ಮೋದಿ ಹೆಗಲೇರಿದ ಜವಾಬ್ದಾರಿ.


1 ಟಿಪ್ಪಣಿ
Betano https://betanogame.org/el/ ОєО±О»П‰ПѓОїПЃОЇО¶ОµО№ ОЅО№ОєО·П„ОП‚. О›О¬ОІОµ 100% ОП‰П‚ €500 + ОґП‰ПЃОµО¬ОЅ ПЂОµПЃО№ПѓП„ПЃОїП†ОП‚ ПѓП„О·ОЅ ПЂПЃПЋП„О· ПѓОїП… ОєО±П„О¬ОёОµПѓО·. О‘ПЂПЊО»О±П…ПѓОµ П„О·ОЅ ПЂО№Ої ОїОјО±О»О® ОµОјПЂОµО№ПЃОЇО± ОєО±О¶ОЇОЅОї ОјОµ ОєОїПЃП…П†О±ОЇО± О±ПѓП†О¬О»ОµО№О± ОєО±О№ ОіПЃО®ОіОїПЃО· П…ПЂОїПѓП„О®ПЃО№ОѕО·. О О±ОЇОѕОµ П„ПЋПЃО±.