ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪರೀಕ್ಷಾ ಅಕ್ರಮದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ ಅಧಿಕಾರಿಗಳಿಗೆ
ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದ 172 ಅಭ್ಯರ್ಥಿಗಳಲ್ಲಿ 22 ಅಭ್ಯರ್ಥಿಗಳ ಒಎಂಆರ್ ಪ್ರತಿ ಅನುಮಾನಾಸ್ಪದವಾಗಿರುವುದು ಪತ್ತೆಯಾಗಿದೆ.
ಇದರಿಂದ ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದ ಕೇಂದ್ರವು ಕೇಂದ್ರ ಗುಲ್ಬರ್ಗ ಅಲ್ಲ ಬೆಂಗಳೂರು ಎನ್ನುವ ಸಂಶಯ ಉಂಟಾಗಿದ್ದು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ನಗರದ ಒಟ್ಟು ಏಳು ಕೇಂದ್ರಗಳಲ್ಲಿ ನಡೆದಿದ್ದ ಪಿಎಸ್ಐ ನೇಮಕಾತಿ ಪರೀಕ್ಷೆಯ ಪೈಕಿ ಕೇಂಬ್ರಿಡ್ಜ್ ವಿದ್ಯಾಲಯ ಪರೀಕ್ಷಾ ಕೇಂದ್ರದಲ್ಲೇ ಹೆಚ್ಚು ಅಕ್ರಮ ಪತ್ತೆಯಾಗಿದ್ದು, 22 ಅಭ್ಯರ್ಥಿಗಳ ವಿರುದ್ಧ ಸಿಐಡಿ ಡಿವೈಎಸ್ಪಿ ನರಸಿಂಹಮೂರ್ತಿ ನೀಡಿರುವ ದೂರಿನನ್ವಯ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಗರದ ಏಳು ಪರೀಕ್ಷಾ ಕೇಂದ್ರಗಳಲ್ಲಿ 172 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಅವರಲ್ಲಿ 22 ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಸಂಶಯ ಮೂಡಿದೆ ಇವೆರೆಲ್ಲರ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ
ಜಾಗೃತ್ ಎಸ್., ಗಜೇಂದ್ರ ಬಿ., ಸೋಮನಾಥ್ ಮಲ್ಲಿಕಾರ್ಜುನಯ್ಯ, ರಘುವೀರ್ ಎಚ್.ಯು., ಚೇತನ್ ಕುಮಾರ್ ಎಂ.ಸಿ., ವೆಂಕಟೇಶ್ ಗೌಡ ಬಿ.ಸಿ, ಮನೋಜ್ ಎ.ಪಿ., ಮನುಕುಮಾರ್ ಜಿ.ಆರ್., ಸಿದ್ದಲಿಂಗಪ್ಪ ಪಡಶವಗಿ, ಮಮ್ತೇಶ್ ಗೌಡ ಎಸ್., ಯಶ್ವಂತ್ ಗೌಡ ಎಚ್., ನಾರಾಯಣ ಸಿ.ಎಂ., ನಾಗೇಶ್ ಗೌಡ ಸಿ.ಎಸ್., ಮಧು ಆರ್., ಯಶವಂತ್ ದೀಪ್ ಸಿ., ದಿಲೀಪ್ ಕುಮಾರ್ ಸಿ.ಕೆ., ರಚನಾ ಹಣಮಂತ್, ಶಿವರಾಜ್ ಜಿ., ಪ್ರವೀಣ್ ಕುಮಾರ್ ಎಚ್.ಆರ್., ಸೂರಿನಾರಾಯಣ್ ಕೆ., ನಾಗರಾಜ ಸಿ., ರಾಘವೇಂದ್ರ ಜಿ.ಸಿ. ಮೇಲೆ ಎಫ್ಐಆರ್ ದಾಖಲಿಸಿ ವಿಚಾರಣೆ ನಡೆಸಲಾಗಿದೆ.
ಸಿಐಡಿ ಡಿವೈಎಸ್ಪಿ ನರಸಿಂಹಮೂರ್ತಿ ನೀಡಿರುವ ದೂರಿಗೆ ಸಂಬಂಧಿಸಿದಂತೆ 12 ಜನರ ಬಂಧನವಾಗಿದ್ದು, ಉಳಿದ 10 ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಸೂಚಿಸಿದೆ.