ಕಾಸರಗೋಡು,ಮಾ.27-ಮರ್ಮಾಂಗದಲ್ಲಿ ನಟ್ ಸಿಲುಕಿಕೊಂಡು ಮಾರಣಾಂತಿಕ ನೋವು ಅನುಭವಿಸುತ್ತಿದ್ದ 46 ವರ್ಷದ ವ್ಯಕ್ತಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ನಡೆದಿದೆ.
ಸುಮಾರು ಒಂದೂವರೆ ಇಂಚು ವ್ಯಾಸದ ಮತ್ತು ವಾಶರ್‌ಗೆ ಬಳಸುವ ನಟ್ ಮರ್ಮಾಂಗದಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಕಾಸರಗೋಡಿನ ಜಿಲ್ಲಾ ಆಸ್ಪತ್ರೆಗೆ ತಲುಪಿದ್ದರು.
ಈ ವೇಳೆ ವೈದ್ಯರು ನಟ್ ತೆಗೆಯಲು ಪ್ರಯತ್ನಿಸಿದರು ಆದರೆ ವಿಫಲರಾದರು. ಬಳಿಕ ಆಸ್ಪತ್ರೆ ಅಧಿಕಾರಿಗಳು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.
ಸುಮಾರು ಒಂದೂವರೆ ಗಂಟೆಗಳ ಪ್ರಯತ್ನದ ನಂತರ, ಅಗ್ನಿಶಾಮಕ ದಳದವರು ಮಧ್ಯರಾತ್ರಿಯಲ್ಲಿ ನಟ್ ಅನ್ನು ಕತ್ತರಿಸಿದರು. ನಟ್ ಸಿಲುಕಿಕೊಂಡು ಎರಡು ದಿನಗಳಾಗಿರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮದ್ಯದ ಅಮಲಿನಲ್ಲಿ ಪ್ರಜ್ಞೆ ತಪ್ಪಿದ್ದಾಗ ಯಾರೋ ದುಷ್ಕರ್ಮಿಗಳು ನನ್ನ ಮರ್ಮಾಂಗಕ್ಕೆ ನಟ್ ಸೇರಿಸಿದ್ದಾರೆ ಎಂದು ಆತ ಹೇಳಿದ್ದಾನೆ. ಮೂತ್ರ ವಿಸರ್ಜಿಸಲು ಸಹ ಕಷ್ಟವಾಯಿತು. ಮರ್ಮಾಂಗದಲ್ಲಿ ಸಿಲುಕಿಕೊಂಡಿದ್ದ ನಟ್ ತೆಗೆಯಲು ಎರಡು ದಿನಗಳ ಕಾಲ ಪ್ರಯತ್ನಿಸಿದ ನಂತರ ಆಸ್ಪತ್ರೆಗೆ ಹೋದೆ. ಆದರೆ, ಅಲ್ಲೂ ಸಾಧ್ಯವಾಗಲಿಲ್ಲ ಎಂದು ಆ ವ್ಯಕ್ತಿ ಹೇಳಿದ್ದಾನೆ.
Previous Articleಸತೀಶ್ ಜಾರಕಿಹೊಳಿಗೆ ದೇವೇಗೌಡರು ಹೇಳಿದ ಗುಟ್ಟೇನು ಗೊತ್ತಾ
Next Article ಬೇಸಿಗೆಯಲ್ಲಿ ಎಷ್ಟು ವಿದ್ಯುತ್ ಬೇಕು ಗೊತ್ತಾ