ಜೆಡಿಎಸ್ ಪಕ್ಷದ ಮಹತ್ವಾಕಾಂಕ್ಷೆ ಯೋಜನೆಯಲ್ಲೊಂದಾದ ಜನತಾ ಜಲಧಾರೆ ಕಾರ್ಯಕ್ರಮ ರಾಜ್ಯದಾದ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಇಂದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಇಗ್ಗಲೂರು ಜಲಾಶಯದಲ್ಲಿ ಜಲ ಸಂಗ್ರಹ ಮಾಡಲಿದೆ. ಇದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರ ಕ್ಷೇತ್ರವಾಗಿದ್ದು, ಇಗ್ಗಲೂರು ಜಲಾಶಯದಲ್ಲಿ ಪುಣ್ಯಜಲವನ್ನ ಜಲಧಾರೆ ರಥ ನೀರನ್ನ ಸಂಗ್ರಹಿಸಿದೆ.
ಇತ್ತೀಚಿಗೆ ಕನಕಪುರ ತಾಲೂಕಿನ ಮೇಕೆದಾಟು ಸಂಗಮದಿಂದ ಹೊರಟಿದ್ದ ಜನತಾ ಜಲಧಾರೆ ಇಂದು ಇಗ್ಗಲೂರು ಜಲಾಶಯಕ್ಕೆ ಆಗಮಿಸಿ ಪವಿತ್ರ ಜಲ ಸಂಗ್ರಹ ಮಾಡಲಾಯಿತು.
ರಾಜ್ಯದ ಸಮಗ್ರ ನೀರಾವರಿ ಯೋಜನೆಯ ಸಂಕಲ್ಪ ಯಾತ್ರೆ ಇದ್ದಾಗಿದ್ದು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕೊಡುಗೆಯಾಗಿರುವ ಇಗ್ಗಲೂರು ಬ್ಯಾರೇಜ್ ನಲ್ಲಿ ನೀರು ಸಂಗ್ರಹವಾಗಲಿದೆ.
ಇನ್ನುಳಿದಂತೆ ರಾಜ್ಯದ 184 ತಾಲೂಕುಗಳಲ್ಲಿ ಸಂಚರಿಸಲಿತ್ತಿರುವ ಜಲಧಾರೆ ರಥಕ್ಕೆ ಈಗಾಗಲೆ ಏಕಕಾಲದಲ್ಲಿ ಚಾಲನೆ ದೊರೆತಿದ್ದ 15 ಜನತಾ ಜಲಧಾರೆ ರಥಗಳು 94 ನದಿ, ಉಪನದಿಗಳ ಜಲ ಸಂಗ್ರಹ ಮಾಡಿವೆ. ಇಂದು ಮಾಜಿ ಪ್ರಧಾನಿ ಹೆಚ್‌ಡಿಡಿ ಬ್ಯಾರೇಜ್ ನಿಂದ ಕಾವೇರಿ ನದಿ ಜಲ ಸಂಗ್ರಹವಾಗಿದ್ದು, ಮಾಗಡಿ ಕ್ಷೇತ್ರದ ಶಾಸಕ ಹಾಗೂ ರಾಮನಗರ ಜಿಲ್ಲಾಧ್ಯಕ್ಷ ಎ.ಮಂಜುನಾಥ್ ನೇತೃತ್ವದಲ್ಲಿ ಗಂಗಾ ಪೂಜೆ ಸಲ್ಲಿಸಿ ಪವಿತ್ರ ಜಲ ಸಂಗ್ರಹ ಮಾಡಲಾಯಿತು.
ಜಯಯಾತ್ರೆಯು ಇಗ್ಗಲೂರು ಜಲಾಶಯದಿಂದ ಹೊರಟು ಪ್ರಮುಖ ಹಳ್ಳಿಗಳ ಮೂಲಕ ಸಾಗಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ತಲುಪಲಿದೆ.