ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದು ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಗೆಲುವಿನ ಖಾತೆ ತೆರೆಯಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ (Priyanka Gandhi) ಚುನಾವಣಾ ಅಖಾಡದಲ್ಲಿ ಮಿಂಚುತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳ ಭರಾಟೆ ಪ್ರಚಾರದಲ್ಲಿ ತೊಡಗಿರುವ ಅವರು ಅವಕಾಶ ಸಿಕ್ಕಾಗ ಜನಸಾಮಾನ್ಯರೊಂದಿಗೆ ಬೆರತು ಅವರ ಕಷ್ಟ ಸುಖ ವಿಚಾರಿಸುವ ಮೂಲಕ ಅವರ ಭಾವನೆಗಳಿಗೆ ಸ್ಪಂದಿಸಲು ಹಿಂದೆ ಮುಂದೆ ನೋಡುವುದಿಲ್ಲ.
ಹಳೆ ಮೈಸೂರು ಪ್ರಾಂತ್ಯದ ಪ್ರಚಾರದ ವೇಳೆ ಮೈಸೂರಿನ ಅತ್ಯಂತ ಪ್ರಸಿದ್ಧ ಜನಸಾಮಾನ್ಯರ ದೋಸೆ ಹೋಟೆಲ್ ಮೈಲಾರಿ ಹೋಟೆಲ್ ಗೆ ತೆರಳಿ ತಿಂಡಿಯ ರುಚಿಯನ್ನು ಸವಿದರು ಅವರ ಜೊತೆಯಲ್ಲಿದ್ದ ಇತರೆ ಗ್ರಾಹಕರೊಂದಿಗೆ ಆತ್ಮೀಯತೆಯೊಂದಿಗೆ ಬೆರತ ಪ್ರಿಯಾಂಕ ಗಾಂಧಿ (Priyanka Gandhi) ಹೋಟೆಲ್ನ ಅಡುಗೆ ಕೋಣೆಗೆ ತೆರಳಿ ದೋಸೆ ಹಾಕುವ ಮೂಲಕ ಗಮನ ಸೆಳೆದರು.
ಇದೀಗ ಕಿತ್ತೂರು ಕರ್ನಾಟಕದ ಬೆಳಗಾವಿಯಲ್ಲಿ ಪ್ರವಾಸದಲ್ಲಿರುವ ಅವರು ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಸ್ಥಳೀಯ ಪೊಲೀಸರು ಗುಪ್ತದಳ ಸಿಬ್ಬಂದಿಯ ಗಮನಕ್ಕೂ ಬಾರದೆ ಮನೆಗೆ ತೆರಳಿ ಅಲ್ಲಿನ ಮಹಿಳೆಯ ಕುಶಲೋಪರಿ ವಿಚಾರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಪ್ರಿಯಾಂಕ ಗಾಂಧಿ (Priyanka Gandhi) ತಮ್ಮ ಪ್ರಚಾರದ ವೇಳೆ ಬೆಳಗಾವಿಯಲ್ಲಿಸಣ್ಣ ಟಿ ಅಂಗಡಿ ಇಟ್ಟುಕೊಂಡು ದೈನಂದಿನ ಬಂಡಿ ಸಾಧಿಸುತ್ತಿರುವ ಮಹಿಳೆಯನ್ನು ಗಮನಿಸಿ, ಆಕೆಯೊಂದಿಗೆ ಮಾತನಾಡಿ ಅವಳ ಮನೆಗೆ ತೆರಳಿದ್ದಾರೆ. ಯಾವುದೋ ದೂರದ ನೆಂಟರು ಎಂಬಂತೆ ಆ ಮನೆಯಲ್ಲಿ ಕುಳಿತು ಮಹಿಳೆಯ ಕಷ್ಟ ಸುಖ ವಿಚಾರಿಸಿದ್ದಾರೆ. ಜನಸಾಮಾನ್ಯರು ತಮ್ಮ ಮನೆಗೆ ಬಂದವರಿಗೆ ತಂಬಿಗೆಯಲ್ಲಿ ನೀರು ಕುಡಿಯಲು ಕೊಡುವುದು ವಾಡಿಕೆ. ಅದೇ ರೀತಿಯಲ್ಲಿ ಮಾತನಾಡುತ್ತಲೇ ತಂಬಿಗೆಯಲ್ಲಿ ಕುಡಿಯಲು ನೀರು ಕೊಟ್ಟಿದ್ದಾರೆ ಅದನ್ನು ಯಾವುದೇ ಎಗ್ಗಿಲ್ಲದೆ ಸ್ವೀಕರಿಸಿದ ಪ್ರಿಯಾಂಕ ಅದನ್ನು ಕುಡಿಯುತ್ತಲೇ ಕುಟುಂಬದ ಸ್ಥಿತಿಗತಿಗಳು, ಸಿಲಿಂಡರ್ ನ ಬೆಲೆ ಕೇಂದ್ರ ಸರ್ಕಾರದ ಸಾಧನೆಗಳು ಈ ಹಿಂದೆ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಕೊಟ್ಟ ಕೊಡುಗೆಗಳ ಬಗ್ಗೆ ಮಾತನಾಡಿದ್ದಾರೆ ಈ ಅಪರೂಪದ ದೃಶ್ಯಗಳು ಚುನಾವಣಾ ಅಖಾಡದಲ್ಲಿ ದೊಡ್ಡ ರೀತಿಯ ಸದ್ದು ಮಾಡುತ್ತಿದ್ದು ಜಾಲತಾಣದಲ್ಲಿ ವೈರಲ್ ಆಗಿದೆ.
Also read.