ಬೆಂಗಳೂರು.
ಅಚ್ಚರಿಯ ಅನಿರೀಕ್ಷಿತ ವಿದ್ಯಮಾನವೊಂದರಲ್ಲಿ ಉಪರಾಷ್ಟ್ರಪತಿ ಜಗದೀಪ ಧನಕರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಉಪರಾಷ್ಟ್ರಪತಿ ಆಯ್ಕೆಗೆ ಚುನಾವಣೆ ಪ್ರಕ್ರಿಯೆಗಳು ಆರಂಭಗೊಂಡಿದೆ.
ಜಗದೀಪ ಧನಕರ್ ಅವರಿಂದ ತೆರವಾಗಿರುವ ಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಗೃಹ ಮಂತ್ರಿ ಅಮಿತ್ ಶಾ ಜೋಡಿ ಯಾರನ್ನು ಆಯ್ಕೆ ಮಾಡಲಿದೆ ಎನ್ನುವುದು ಇದೀಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಸೆಪ್ಟೆಂಬರ್ 9 ರಂದು ನಡೆಯಲಿರುವ ಈ ಚುನಾವಣೆಗೆ ಕರ್ನಾಟಕದವರೇ ಆದ ಆಂಧ್ರಪ್ರದೇಶ ರಾಜ್ಯಪಾಲ ಅಬ್ದುಲ್ ನಜೀರ್ ಅವರು ಎನ್ ಡಿ ಎ ಬೆಂಬಲಿತ ಅಭ್ಯರ್ಥಿಯಾಗಿ ಉಪ ರಾಷ್ಟ್ರಪತಿ ಚುನಾವಣೆ ಯ ಅಖಾಡಕ್ಕೆ ಧುಮುಕಲಿದ್ದಾರೆ ಎಂದು ಹೇಳಲಾಗುತ್ತಿದೆ.
ಎನ್ ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ಅತ್ಯಂತ ಪ್ರಮುಖವಾಗಿದ್ದು ಇದು ಯಾವುದೇ ಉನ್ನತ ಹುದ್ದೆಗಳನ್ನು ಮುಸ್ಲಿಮರಿಗೆ ನೀಡುತ್ತಿಲ್ಲ ಈ ಕೊರಗನ್ನು ನಿವಾರಿಸುವ ದೃಷ್ಟಿಯಿಂದ ಇದೀಗ ಅಬ್ದುಲ್ ನಜೀರ್ ಅವರ ಹೆಸರನ್ನು ಪರಿಗಣಿಸಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮೈಸೂರಿನವರಾದ ಅಬ್ದುಲ್ ನಜೀರ್ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಆನಂತರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಹಲವು ತೀರ್ಪುಗಳ ಮೂಲಕ ಗಮನ ಸೆಳೆದಿದ್ದಾರೆ ಪ್ರಮುಖವಾಗಿ ತ್ರಿವಳಿ ತಲಾಕ್ ಸೇರಿದಂತೆ ಹಲವು ತೀರ್ಪುಗಳು ಗಮನ ಸೆಳೆದಿವೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾದ ನಂತರ ಅಬ್ದುಲ್ ನಜೀರ್ ಅವರನ್ನು ಉಪರಾಷ್ಟ್ರಪತಿ ಸ್ಥಾನಕ್ಕೆ ನೇಮಕ ಮಾಡಲು ಚರ್ಚೆ ನಡೆದಿತ್ತು ಆದರೆ ಅಂದಿನ ವಿದ್ಯಮಾನಗಳು ಅದಕ್ಕೆ ಪೂರಕವಾಗದ ಹಿನ್ನೆಲೆಯಲ್ಲಿ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದ್ದು ಇದೀಗ ಉಪರಾಷ್ಟ್ರಪತಿ ಸ್ಥಾನಕ್ಕೆ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
ಇವರೊಂದಿಗೆ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೆನಾ ಮತ್ತು ಬಿಹಾರ ರಾಜ್ಯಪಾಲ ಅರಿಫ್ ಮೊಹಮ್ಮದ್ ಖಾನ್ಗುಜರಾತ್ ರಾಜ್ಯಪಾಲ ಅಚಾರ್ಯ ದೇವವ್ರತ್, ಸಿಕ್ಕಿಂ ರಾಜ್ಯಪಾಲ ಓಂ ಮಥೂರ್ ಮತ್ತು ಜಮ್ಮು- ಕಾಶ್ಮೀರ ಮನೋಜ್ ಸಿನ್ಹಾ ಕೂಡಾ ಸಂಭಾವ್ಯ ಅಭ್ಯರ್ಥಿಗಳಾಗಿದ್ದಾರೆ.
ಆರ್ ಎಸ್ ಎಸ್ ವಿಚಾರವಾದಿ ಶೇಷಾದ್ರಿ ಚಾರಿ ಹೆಸರು ಕೂಡಾ ಕೇಳಿಬರುತ್ತಿದೆ
Previous Articleಶಿವಗಂಗಾ ಬಸವರಾಜ್ ಗೆ ಶೋಕಾಸ್ ನೋಟಿಸ್
Next Article ಅಕ್ಟೋಬರ್ ಕ್ರಾಂತಿಗೆ ಸಜ್ಜಾಗುತ್ತಿದೆ ವೇದಿಕೆ