ಬೆಂಗಳೂರು,ಸೆ.21-
ಮಹಾನಗರ ಬೆಂಗಳೂರಿನಲ್ಲಿ ಪ್ರಸಕ್ತ ವರ್ಷ ಒನ್ ವೇ ಮತ್ತು ನೋ ಎಂಟ್ರಿ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾಯಿಸಿದ ಆರೋಪದಲ್ಲಿ 1 ಲಕ್ಷದ 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ದ್ವಿಚಕ್ರ ವಾಹನ ಸವಾರರ ಪಾಲೇ ಹೆಚ್ಚು.
ಬೆಂಗಳೂರು ನಗರದಲ್ಲಿ 354 ರಸ್ತೆಗಳಲ್ಲಿ ಒನ್ ವೇ ಸಂಚಾರ ನಿಯಮ ಇದೆ.ಸೆಪ್ಟೆಂಬರ್ 17 ರವರೆಗೆ, ಈ ರಸ್ತೆಗಳಲ್ಲಿ ತಪ್ಪು ದಿಕ್ಕಿನಲ್ಲಿ ಹೋಗುವ ವಾಹನಗಳ ವಿರುದ್ಧ ಪೊಲೀಸರು 40,093 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಅದೇ ರೀತಿಯಲ್ಲಿ ನೋ ಎಂಟ್ರಿ ವಲಯಗಳನ್ನು ಪ್ರವೇಶಿಸಿದ್ದಕ್ಕಾಗಿ ಒಟ್ಟು 79,863 ಪ್ರಕರಣಗಳನ್ನು ದಾಖಲಿಸಿರುವುದುಸಂಚಾರ ಪೊಲೀಸ್ ವಿಭಾಗದ ಅಂಕಿಅಂಶಗಳಿಂದ ತಿಳಿದುಬಂದಿದೆ.
ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 177 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ ಮತ್ತು 500 ರೂ. ದಂಡ ವಿಧಿಸಲಾಗುತ್ತದೆ.
ಸಂಚಾರಿ ನಿಯಮ ಉಲ್ಲಂಘನೆಯಲ್ಲಿ
ದ್ವಿ ಚಕ್ರ ವಾಹನಗಳು ಮತ್ತು ಆಟೋ ರಿಕ್ಷಾಗಳ ಪಾಲೇ ಹೆಚ್ಚು ಹೀಗಾಗಿ ಇವುಗಳ ವಿರುದ್ದವೇ ಹೆಚ್ಚು ಪ್ರಕರಣಗಳು ದಾಖಲಾಗಿವೆ
ಪ್ರಮುಖ ರಸ್ತೆಗಳಲ್ಲಿ ಅಳವಡಿಸಿರುವ ಟ್ರಾಫಿಕ್ ಕ್ಯಾಮರಾಗಳು ಈ ಉಲ್ಲಂಘನೆಗಳನ್ನು ಸೆರೆಹಿಡಿಯದ ಕಾರಣ, ಪೊಲೀಸ್ ಸಿಬ್ಬಂದಿ ವಿಶೇಷ ಕಾರ್ಯಾಚರಣೆ ನಡೆಸಿ ನಿಯಮ ಉಲ್ಲಂಘಿಸುವವರನ್ನು ಪತ್ತೆಹಚ್ಚಿ ದಂಡ ವಿಧಿಸುತ್ತಿದ್ದಾರೆ ಎಂದು ಸಂಚಾರ ಪೊಲೀಸ್ ಜಂಟಿ ಆಯುಕ್ತ ಎಂಎ ಅನುಚೇತ್ ತಿಳಿಸಿದ್ದಾರೆ.
ಸೂಚನಾ ಫಲಕಗಳಿದ್ದರೂ ಸಹ, ಸಮಯವನ್ನು ಉಳಿಸಲು ಜನರು ಸಾಮಾನ್ಯವಾಗಿ ಒನ್ ವೇ ನಿಯಮ ಉಲ್ಲಂಘಿಸಿ ಚಾಲನೆ ಮಾಡುತ್ತಾರೆ. ಯಾವುದೇ ವಿಭಜಕಗಳಿಲ್ಲದಿರುವಲ್ಲಿ, ಅವರು ರಸ್ತೆಯ ಮತ್ತೊಂದು ಲೇನ್ನಲ್ಲಿ ಅಪಾಯಕಾರಿಯಾಗಿ ದಾಟುತ್ತಾರೆ, ಜೀವಕ್ಕೆ ಅಪಾಯವನ್ನುಂಟುಮಾಡುತ್ತಾರೆ ಎಂದು ಡಿಸಿಪಿ (ಸಂಚಾರ, ಪೂರ್ವ) ಕುಲದೀಪ್ ಕುಮಾರ್ ಜೈನ್ ಹೇಳಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಮೋಟಾರು ಬೈಕ್‌ಗಳು, ಸ್ಕೂಟರ್‌ಗಳು ಮತ್ತು ಯುಲು ದ್ವಿಚಕ್ರ ವಾಹನಗಳು ಪೂರ್ವ ವಿಭಾಗದಲ್ಲಿ ಹೆಚ್ಚು ನಿಯಮ ಉಲ್ಲಂಘಿಸಿವೆ ಎಂದು ಅವರು ತಿಳಿಸಿದ್ದಾರೆ
ಸಂಗ್ರಹಗಳು
- ಮಾರ್ಚ್ 2026
- ಫೆಬ್ರವರಿ 2026
- ಜನವರಿ 2026
- ಡಿಸೆಂಬರ್ 2025
- ನವೆಂಬರ್ 2025
- ಅಕ್ಟೋಬರ್ 2025
- ಸೆಪ್ಟೆಂಬರ್ 2025
- ಆಗಷ್ಟ್ 2025
- ಜುಲೈ 2025
- ಜೂನ್ 2025
- ಮೇ 2025
- ಏಪ್ರಿಲ್ 2025
- ಮಾರ್ಚ್ 2025
- ಫೆಬ್ರವರಿ 2025
- ಜನವರಿ 2025
- ಡಿಸೆಂಬರ್ 2024
- ನವೆಂಬರ್ 2024
- ಅಕ್ಟೋಬರ್ 2024
- ಸೆಪ್ಟೆಂಬರ್ 2024
- ಆಗಷ್ಟ್ 2024
- ಜುಲೈ 2024
- ಜೂನ್ 2024
- ಮೇ 2024
- ಏಪ್ರಿಲ್ 2024
- ಮಾರ್ಚ್ 2024
- ಫೆಬ್ರವರಿ 2024
- ಜನವರಿ 2024
- ಡಿಸೆಂಬರ್ 2023
- ನವೆಂಬರ್ 2023
- ಅಕ್ಟೋಬರ್ 2023
- ಸೆಪ್ಟೆಂಬರ್ 2023
- ಆಗಷ್ಟ್ 2023
- ಜುಲೈ 2023
- ಜೂನ್ 2023
- ಮೇ 2023
- ಏಪ್ರಿಲ್ 2023
- ಮಾರ್ಚ್ 2023
- ಫೆಬ್ರವರಿ 2023
- ಜನವರಿ 2023
- ಡಿಸೆಂಬರ್ 2022
- ನವೆಂಬರ್ 2022
- ಅಕ್ಟೋಬರ್ 2022
- ಸೆಪ್ಟೆಂಬರ್ 2022
- ಆಗಷ್ಟ್ 2022
- ಜುಲೈ 2022
- ಜೂನ್ 2022
- ಮೇ 2022
- ಏಪ್ರಿಲ್ 2022


1 ಟಿಪ್ಪಣಿ
Registre-se agora no Mostbet e receba um boost de 125% + 250 rodadas – https://mostbetpt.pro/ , BГґnus 125% + 250 free spins: a oferta imperdГvel do Mostbet .