ಲಖನೌ: ದೇಶದ ಸಮಾಜವಾದದ ಮತ್ತೊಂದು ಕೊಂಡಿ ಕಳಚಿದೆ.ಕಾಂಗ್ರೆಸ್ -ಬಿಜೆಪಿ ವಿರೋಧಿ ರಾಜಕಾರಣದಲ್ಲಿ ಪ್ರಮುಖವಾಗಿದ್ದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ (82) ನಿಧನರಾಗಿದ್ದಾರೆ.
ಕಿಡ್ನಿ ಸಂಭವಿಸಿದ ಖಾಯಿಲೆ ಸೇರಿದಂತೆ ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ದೇಶದ ರಾಜಕೀಯ ಚರಿತ್ರೆಯಲ್ಲಿ ಸುದೀರ್ಘ ಐವತ್ತು ವರ್ಷಗಳ ಕಾಲ ತಮ್ಮದೆ ಛಾಪು ಮೂಡಿಸಿದ ಮುಲಯಂ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯದ ಧ್ವನಿಯಾಗಿದ್ದರು.ಉತ್ತರ ಪ್ರದೇಶದ ರಾಜಕೀಯದಲ್ಲಿ ಮೌಲಾನಾ ಮುಲಯಂ ಎಂದೇ ಖ್ಯಾತರಾದ ಇವರು ಸಂಘ ಪರಿವಾರದ ಕಡು ವಿರೋಧಿಯಾಗಿದ್ದರು.
ರಾಮ್ ಮನೋಹರ ಲೋಹಿಯಾ ಅವರ ಅನುಯಾಯಿಯಾಗಿ ಜನತಾ ಪರಿವಾರದ ಪ್ರಮುಖ ನಾಯಕರಾಗಿದ್ದ ಮುಲಯಂ ಆ ನಾಯಕರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಪಕ್ಷ ತೊರೆದು ತಮ್ಮದೇ ಆದ ಸಮಾಜವಾದಿ ಪಕ್ಷವನ್ನು ಸಂಘಟಿಸಿದ್ದರು ಮುಲಯಂ ಅವರ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ.
Previous Articleದೇವಲೋಕ ವಾಸಿಯಾದ ದೈವಸ್ವರೂಪಿ ಮೊಸಳೆ
Next Article ದೀಪಾವಳಿಯಲ್ಲಿ ಗ್ರಹಣ..ಹುಷಾರ್!