ಬೆಂಗಳೂರು, ಆ. 10:
ಉಪಮುಖ್ಯಮಂತ್ರಿಯ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಗಣಿ ಸಚಿವ ಕುಮಾರಸ್ವಾಮಿ ನಡುವಿನ ವಾಕ್ಸಮರ ತೀವ್ರಗೊಂಡಿದೆ.
ನಪುಂಸಕರು ಯಾರು ಗಂಡಸರು ಯಾರು ಎಂಬುದು ಗೊತ್ತಿದೆ ಮಿಲಿಟರಿ ಕರೆದುಕೊಂಡು ಬಂದು ನನ್ನನ್ನು ಜೈಲಿಗೆ ಕರೆದುಕೊಂಡು ಹೋಗುತ್ತಾರೆ ಎಂದು ಹೇಳಿದ ಕುಮಾರಸ್ವಾಮಿ ನಾನು ಜೈಲಿನಲ್ಲಿದ್ದಾಗ ಬಂದು ನೋಡಿದ್ದಾರೆ ಈಗಲೂ ಬರಲಿ ಎಂದು ಉಪಮುಖ್ಯಮಂತ್ರಿ, ಶಿವಕುಮಾರ್ ಸವಾಲು ಹಾಕಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುಮಾರಸ್ವಾಮಿಗೆ ಅವನ ತಮ್ಮನೇ ಬೇನಾಮಿ. ಅಧಿಕಾರದಲ್ಲಿದ್ದಾಗ ಇವರೆಲ್ಲ ಏನೆಲ್ಲ ಮಾಡಿದರು ಎಂಬುದು ಜನರಿಗೆ ಗೊತ್ತಿದೆ ಅದನ್ನು ಮತ್ತೊಂದು ಬಾರಿ ಬಹಿರಂಗ ಪಡಿಸುವ ಕಾಲ ಹತ್ತಿರ ಬಂದಿದೆ ಎಂದು ಹೇಳಿದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರ ದುರುಪಯೋಗ ಮಾಡಿಕೊಂಡು ನನ್ನ ಮೇಲೆ, ನನ್ನ ಸಹೋದರ, ತಂಗಿ, ಪತ್ನಿ ಮೇಲೆ ಅದಿರು ಕಳ್ಳತನದ ಸುಳ್ಳು ಕೇಸ್ ಹಾಕಿಸಿದ್ದರು. ಎಫ್ಐಆರ್ ದಾಖಲಿಸಿದ್ದರು. ಅದೆಲ್ಲವನ್ನು ಮರೆತು ನಾನು ಅವರು ಮುಖ್ಯಮಂತ್ರಿಯಾಗಲು ನೆರವಾಗಿದ್ದೆ. ಆನಂತರ ನಡೆದ ಬೆಳವಣಿಗೆ ಎಲ್ಲರಿಗೂ ಗೊತ್ತಿದೆ. ಅವರು ಸಿಎಂ ಆಗಿದ್ದಾಗ ಪ್ರಾಮಾಣಿಕವಾಗಿ, ನಿಷ್ಠೆಯಿಂದ ಕೆಲಸ ಮಾಡಿದ್ದೆ. ನಾನು ಅವರ ಸುದ್ದಿಗೆ ಹೋಗುತ್ತಿರಲಿಲ್ಲ” ಎಂದು ತಿಳಿಸಿದರು.
ಈಗ ಅವರು ಮತ್ತು ಅವರ ತಂದೆ ದೆಹಲಿಯಲ್ಲಿ ಯಾರಿಗೆ ಪತ್ರ ಕೊಟ್ಟಿದ್ದಾರೆ? ನಿಮ್ಮ ತಂದೆ ಮಾಜಿ ಪ್ರಧಾನಿ ಏನು ಮಾಡುತ್ತಿದ್ದಾರೆ ಎಂದು ಗೊತ್ತಿದೆ. ಇವರ ಅಣ್ಣ ಒಬ್ಬ ಇದಾನೆ, ವಿಚಾರಗಳು ಇದೆ ಎಂದು ಹೇಳಿದೆ, ದಾಖಲೆ ಇದೆ ಎಂದು ಹೇಳಿಲ್ಲ. ವಿಜಯೇಂದ್ರ ನನ್ನ ಮೇಲೆ ಹೇಳಿದ್ದ ಭ್ರಷ್ಟಾಚಾರದ ಪಿತಾಮಹ ಎಂದು. ನನ್ನ ಮೇಲೆ ಏಕೆ ಕೇಸ್ ಹಾಕಿದ್ದು ಅಂತಾ ವಿಜಯೇಂದ್ರಗೆ ಏನು ಗೊತ್ತಿದೆ? ನನ್ನ ಮೇಲಿನ ಕೇಸ್ ನ್ಯಾಯಾಲಯದಲ್ಲಿ ರದ್ದುಗೊಂಡಿದೆ ಎಂದು ಹೇಳಿದರು.
ನನ್ನ ವಿರುದ್ಧ ಅಕ್ರಮಗಳು ಇದ್ದರೆ ಹೋರ ತೆಗೆಯಲಿ
ಗೌಪ್ಯವಾಗಿ ಇಟ್ಟುಕೊಳ್ಳುವುದು ಬೇಡ. ನಾನು ಗನ್ ಪಾಯಿಂಟ್ ನಲ್ಲಿ ಬೆದರಿಸಿ ಆಸ್ತಿ ಬರೆಸಿಕೊಂಡಿದ್ದರೆ ಕಂಪ್ಲೆಂಟ್ ಕೊಡಿ ಎಫ್‌ಐಆರ್ ಹಾಕಿಸಿ, ಕೇಸ್ ರಿಜಿಸ್ಟರ್ ಮಾಡಿಸಿ, ನನಗೆ ದೇವರು ಶಕ್ತಿ ಕೊಟ್ಟರೆ ಖರೀದಿ ಮಾಡ್ತಿನಿ. ಇರೋ ಆಸ್ತಿ ಅಲ್ಲಂ ವೀರಭದ್ರಪ್ಪ ಹತ್ರ ನನ್ನ ಮಗಳು ಖರೀದಿ ಮಾಡಿದ್ದು. ಮುಂದೆಯೂ ನಾನು ಆಸ್ತಿ ಖರೀದಿ ಮಾಡುವೆ ಎಂದು ಗುಡುಗಿದರು.
ಕಳೆದ ಎರಡು ಮೂರು ವರ್ಷಗಳಿಂದ ಕುಮಾರಸ್ವಾಮಿ ಅವರ ಟೀಕೆಗಳನ್ನು ಸಹಿಸಿಕೊಂಡಿದ್ದೆ. ಮಗನ ಸೋಲಿನ ನಂತರ ಅವರ ಮಾತು ಮಿತಿ ಮೀರಿದೆ. ನಾನು ಎಷ್ಟು ದಿನ ಸಹಿಸಲಿ. ಅವರ ಹೇಳಿಕೆಗಳಿಗೆ ನಾನು ಉತ್ತರ ನೀಡಿದ್ದೇನೆ. ನನ್ನ ವಿರುದ್ಧ ಇರುವ ದಾಖಲೆಗಳನ್ನು ಬಿಡುಗಡೆ ಮಾಡಲಿ. ಅವರ ಬೆದರಿಕೆಗೆ ಹೆದರುವ ರಕ್ತ ನನ್ನದಲ್ಲ” ಎಂದು ಸವಾಲೆಸೆದರು.
ನಾನು ಕೇವಲ ವ್ಯವಸಾಯದಲ್ಲಿ ಆಸ್ತಿ ಮಾಡಿದ್ದೇನೆ ಎಂದು ಹೇಳುವುದಿಲ್ಲ. ನಾನು ಎಷ್ಟು ರಾಜಕಾರಣಿಯೋ, ಅಷ್ಟೇ ಉದ್ಯಮಿಯೂ ಹೌದು.
ನಾನು ಪ್ರಧಾನಮಂತ್ರಿ, ಮುಖ್ಯಮಂತ್ರಿಯ ಮಗನಾಗಿ ರಾಜಕೀಯಕ್ಕೆ ಬಂದಿಲ್ಲ. ನಾನು ಬಡವನಲ್ಲದಿದ್ದರೂ ಮಧ್ಯಮ ವರ್ಗದ ರೈತ ಕುಟುಂಬದಿಂದ ಬಂದವನು. ನನ್ನ ಆಸ್ತಿ ಮಾಹಿತಿ ತೆರೆದ ಪುಸ್ತಕದಂತೆ. ನಾನು ಬದುಕಲು ಸಾಧ್ಯವಾಗದಂತಹ ದಾಖಲೆ ಏನಿದೆಯೋ ಅದನ್ನು ಬಿಚ್ಚಿಡಲಿ. ನಾನು ಅಂತಹ ಮಾಡಬಾರದ ತಪ್ಪು ಏನು ಮಾಡಿದ್ದೇನೆ ತಿಳಿಯಲಿ. ದಾಖಲೆ ಬಿಚ್ಚಿಡಲು ನಿಮ್ಮನ್ನು ತಡೆದಿರುವವರು ಯಾರು? ದಾಖಲೆ ಸಮೇತ ಸದನದಲ್ಲಿ ಚರ್ಚೆಗೆ ಬನ್ನಿ ಎಂದು ನೀವು ಶಾಸಕರಾಗಿದ್ದಾಗಲೆ ನಾನು ಎರಡು ಬಾರಿ ಆಹ್ವಾನ ಕೊಟ್ಟಿದ್ದೇನೆ. ನೀನು ಯಾಕೆ ಬರಲಿಲ್ಲ? ಚರ್ಚೆ ಮಾಡಲಿಲ್ಲ? ಈಗಲೂ ನಿಮ್ಮ ಶಾಸಕರ ಕೈಗೆ ದಾಖಲೆ ಕೊಟ್ಟು ಚರ್ಚೆಗೆ ಕಳಿಸು. ನಾನು ಚರ್ಚೆಗೆ ಸಿದ್ಧನಿದ್ದೇನೆ” ಎಂದು ತಿರುಗೇಟು ನೀಡಿದರು.
“ಸಿಎಂ ರಾಜೀನಾಮೆ ಕೊಡುವ ಪ್ರಶ್ನೆ, ಪರಿಸ್ಥಿತಿ ಇಲ್ಲ. ಇದು ರಾಜಕೀಯ ಷಡ್ಯಂತ್ರ. ಕುಮಾರಸ್ವಾಮಿ, ಯಡಿಯೂರಪ್ಪನವರಿಗೆ ಅಶೋಕ್, ವಿಜಯೇಂದ್ರ ಅವರಿಗೆ ಭ್ರಮೆ, ಹಗಲುಗನಸು ಕಾಣುತ್ತಿದ್ದಾರೆ. ಇದು ಸಾಧ್ಯವಿಲ್ಲ” ಎಂದು ತಿಳಿಸಿದರು.
Previous Articleಕಾಫಿ ಡೇ ಸಿದ್ದಾರ್ಥ ಸಾವಿನ ರಹಸ್ಯ ಬಯಲು.?
Next Article ವಿಜಯೇಂದ್ರ ಬದಲಾವಣೆಗೆ ಹೆಚ್ಚಿದ ಒತ್ತಡ.

