ಕೋಲಾರ. 28: ಚಿನ್ನದ ನಾಡು ಕೋಲಾರ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ .ಜನ ಪ್ರತಿನಿಧಿಗಳ ಕಣ್ಣೆದುರೇ ಕಾರ್ಯಕರ್ತರ ನಡುವೆ ಗಲಾಟೆ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.
ನಗರದ ಹೊರ ವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿಂದು ನಡೆದ ಸಭೆಯಲ್ಲಿ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ನಾರಾಯಣಸ್ವಾಮಿ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ˌ ಶಾಸಕರಾದ ಕೊತ್ತೂರು ಮಂಜುನಾಥ್ ನಂಜೇಗೌಡ ಹಿರಿಯ ನಾಯಕ ಸುದರ್ಶನ್ ಸಮ್ಮುಖದಲ್ಲೇ ಕಾರ್ಯಕರ್ತರು ಕೈ ಕೈ ಮಿಲಾಯಿಸಿದರು
ಸಭೆಯ ಪ್ರಾರಂಭದಲ್ಲೇ ವೇದಿಕೆಯ ಮುಂಭಾಗದಲ್ಲಿದ್ದ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ್ ಹಾಗೂ ಬ್ಲಾಕ್ ಅಧ್ಯಕ್ಷ ಪ್ರಸಾದ್ ಬಾಬು ಹಿರಿಯರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿ ಅವರನ್ನು ಸಭೆಯಿಂದ ಹೊರ ಹಾಕುವಂತೆ ಆಗ್ರಹಿಸಿದರು
ಈ ವೇಳೆ ಕೆಲವರು ಗಲಾಟೆ ಮಾಡುತ್ತಾ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ್ ರವರನ್ನ ಹೊರ ತಳ್ಳಲು ಮುಂದಾದರೆ ಅವರ ಮೇಲೆ ಹಲ್ಲೆ ನಡೆಸುವ ಯತ್ನವೂ ನಡೆಯಿತು ಎನ್ನಲಾಗಿದೆ
ಸಭೆ ನಂತರ ಗಲಾಟೆ ಹಾಗೂ ಗೊಂದಲಗಳ ಬಗ್ಗೆ ಮಾಹಿತಿ ಹಂಚಿಕೊಂಡ ಉಸ್ತುವಾರಿ ನಾರಾಯಣಸ್ವಾಮಿ ನಾನು ಮೊದಲನೇ ಬಾರಿ ಸಭೆಗೆ ಬಂದಿದ್ದೇನೆ. ಎಲ್ಲವನ್ನೂ ಗಮನಿಸಿದ್ದೇನೆ ಜಿಲ್ಲಾಧ್ಯಕ್ಷರ ಮೇಲೆ ನಡೆದಿರುವ ಹಲ್ಲೆ ನಡೆಯಬಾರದು ನಮ್ಮದೊಂದು ಕುಟುಂಬ ಹಾಗಾಗಿ ನಾನು ಇಲ್ಲೇ ಈಗಲೇ ನಾಯಕರುಗಳ ಅಭಿಪ್ರಾಯ ಪಡೆದು ಭಿನ್ನಮತ ಸ್ಫೋಟಕ್ಕೆ ಅಂತ್ಯ ಹಾಡುವುದಾಗಿ ತಿಳಿಸಿದರು.
Previous Articleಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್.
Next Article ಲಂಚ ಕೇಳಿದರೆ ಡಿಸಿಎಂ ಗೆ ಪತ್ರ ಬರೆಯಿರಿ.


2 ಪ್ರತಿಕ್ರಿಯೆಗಳು
Mostbet traz a emoГ§ГЈo dos grandes ganhos junto com as melhores ofertas – https://mostbetpt.pro/ , Descubra o Mostbet: bГґnus de 125% + 250 rodadas grГЎtis para novos jogadores .
Spin like the casino personally insulted your wallet – http://gketorolac.com/buffalo-slot-game-real-money-wins-expert-strategies-2026/ , Your winning era begins the second you join .