ಬೆಳಗಾವಿ: ಗುತ್ತಿಗೇದಾರ ಸಂತೋಷ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗಾವಿ ತಾಲೂಕಿನ ಬಡಸ ಗ್ರಾಮದಲ್ಲಿನ ಸಂತೋಪ್ ಮನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿ ನೀಡಿದರು. ಇದರ ಬೆನ್ನಲ್ಲೆ ಇಂದು ಸಾವಿನ ಕುರಿತ ತನಿಖೆ ಕೂಡ ಚುರುಕುಗೊಂಡಿದೆ. ನಾಲ್ಕನೇ ದಿನಕ್ಕೆ ತನಿಖೆ ಕಾಲಿಟ್ಟಿದ್ದು, ನಿನ್ನೆ ಇಡೀ ದಿನ ಹಿಂಡಲಗಾ ಗ್ರಾಮ ಪಂಚಾಯತಿಯಲ್ಲಿ ತನಿಖೆ ನಡೆಸಿದ್ದಾರೆ. ಪ್ರಸ್ತುತ ಪಿಡಿಒ ವಂತಕುಮಾರಿ, ಹಿಂದಿನ ಪಿಡಿಒ ಗಂಗಾಧರ ನಾಯಕ ಅವರನ್ನ ತೀವ್ರ ವಿಚಾರಣೆಗೊಳಪಡಿಸಲಾಯಿತು. ಪಂಚಾಯತಿ ಕಡತಗಳನ್ನು ಜಾಲಾಡಿದ ಪೊಲೀಸರು, ಇಂದು ಸಹ ಹಿಂಡಲಗಾ ಗ್ರಾಮ ಪಂಚಾಯತಿಯಲ್ಲಿ ತನಿಖೆ ಮುಂದುವರೆಸಿದರು.
ಇನ್ನು ಮತ್ತೊಂದೆಡೆ ಹಿಂಡಲಗಾದ ಲಕ್ಷ್ಮೀ ನಗರದ ಸಮರ್ಥ ಕಾಲೋನಿಯಲ್ಲಿರುವ ನಾಗೇಶ್ ಮನ್ನೋಳಕರ್ ನಿವಾಸಕ್ಕೆ ಭೇಟಿ ನೀಡಿದ ಉಡುಪಿ ಪೊಲೀಸರು
ಗ್ರಾಮ ಪಂಚಾಯತಿ ಅಧ್ಯಕ್ಷ ನಾಗೇಶ ಮನ್ನೋಳಕರ ಅವರನ್ನು ವಿಚಾರಣೆಗೊಳಪಡಿಸಿದ. ಇನ್ಸ್‌ಪೆಕ್ಟರ್ ಶರಣಗೌಡ ಪಾಟೀಲ್, ನಾಗೇಶ ಮನ್ನೋಳಕರ್, ಮಾಜಿ ಸಚಿವ ರಮೇಶ ಜಾರಕಿಹೊಳಿ ಆಪ್ತನಾಗಿದ್ದು,
ಸಂತೋಷ ಪಾಟೀಲ್ ಮಾಡಿದ್ದಾರೆ ಎನ್ನಲಾದ 108ಕಾಮಗಾರಿಗಳ ಮಾಹಿತಿಯನ್ನು ಪೊಲೀಸರು ಪಡೆದರು.
ನಿನ್ನೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರನ್ನ ಗೌಪ್ಯವಾಗಿ ನಾಗೇಶ ಭೇಟಿಯಾಗಿದ್ದು ಕೂಡ ಕುತೂಹಲಕ್ಕೀಡು ಮಾಡಿದೆ.
Previous Articleಸರಗಳ್ಳನಿಗೆ ಬಿತ್ತು ಗೂಸ
Next Article ಯುವಕರೇ ಎಚ್ಚರ ತಪ್ಪದಿರಿ! ಧರ್ಮ ಹಿಂಸೆಯನ್ನು ಪ್ರಚೋದಿಸಲ್ಲ