ಕೆಜಿಎಫ್ 2 ಗೆವಿಶ್ವಾದ್ಯಂತ ಸಖತ್ ರೆಸ್ಪಾನ್ಸ್ ಸಿಗ್ತಿರೋದು ಗೊತ್ತು ಅದೇ ರೀತಿ ತಮಿಳುನಾಡಿನಲ್ಲೂ ಕೂಡ ಪ್ರಶಾಂತ್ ನೀಲ್ ಚಿತ್ರ ಬಾಕ್ಸ್ ಆಫೀಸಲ್ಲಿ ಭಾರಿ ಸದ್ದು ಮಾಡುತ್ತಿದೆ.
ತಮಿಳು ಭಾಷಿಗರು ಅಷ್ಟು ಸುಲಭವಾಗಿ ಯಾವ ಪರಭಾಷಾ ಚಿತ್ರಗಳನ್ನು ಒಪ್ಪಿಕೊಳ್ಳಲ್ಲ ಆದ್ರೆ ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾ ಏಪ್ರಿಲ್ 13ರಂದು ರಿಲೀಸ್ ಆಗಿತ್ತು. ಅದರ ಮರುದಿನ (ಏಪ್ರಿಲ್ 14) ‘ತೆರೆಗೆ ಬಂತು. ‘ಬೀಸ್ಟ್’ ಚಿತ್ರಕ್ಕೆ ನೆಗೆಟಿವ್ ವಿಮರ್ಶೆಗಳೇ ಹೆಚ್ಚು ಬಂದು ಕಾರಣ ಕೆಜೆಎಫ್ ಗೆ ಇದೇ ವರದಾನವಾಯ್ತು ಈ ಕಾರಣಕ್ಕೆ ಸಿನಿಮಾದ ಕಲೆಕ್ಷನ್ ಹೆಚ್ಚುತ್ತಿದೆ. ಐದು ದಿನಕ್ಕೆ ಈ ಸಿನಿಮಾ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ತಮಿಳುನಾಡಿನಲ್ಲಿ ಮೊದಲ ದಿನ (ಏಪ್ರಿಲ್ 14) ಈ ಚಿತ್ರ 8.24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಅಭಿಮಾನಿಗಳು ಚಿತ್ರಮಂದಿರದತ್ತ ಹೆಚ್ಚೆಚ್ಚು ಹೆಜ್ಜೆ ಹಾಕಿದ್ದಾರೆ. ಹೀಗಾಗಿ, ಎರಡನೇ ದಿನ 10.61 ಕೋಟಿ ರೂಪಾಯಿ, ಮೂರನೇ ದಿನ 11.50 ಕೋಟಿ ರೂಪಾಯಿ ಹಾಗೂ ನಾಲ್ಕನೇ ದಿನವಾದ ಭಾನುವಾರ ಈ ಸಿನಿಮಾ 12.38 ಕೋಟಿ ರೂಪಾಯಿ ಗಳಿಕೆ ಮಾಡಿದೆ.ಐದನೇ ದಿನ (ಏಪ್ರಿಲ್ 18) 7.54 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಈ ಮೂಲಕ ತಮಿಳುನಾಡಿನಲ್ಲಿ 50 ಕೋಟಿ ರೂಪಾಯಿ ಕ್ಲಬ್ ಸೇರಿದೆ. ತಮಿಳಿನಲ್ಲಿ ಅರ್ಧ ಶತಕ ಬಾರಿಸಿದ ಮೊದಲ ಕನ್ನಡ ಸಿನಿಮಾ ಎಂಬ ಖ್ಯಾತಿ ‘ಕೆಜಿಎಫ್ 2’ಗೆ ಸಿಕ್ಕಿದೆ. ಇದೇ ವೇಳೆ ‘ಬೀಸ್ಟ್ ಒಟ್ಟೂ ಗಳಿಕೆ 57.15 ಆಗಿದೆ. ಎರಡೂ ಸಿನಿಮಾಗಳ ನಡುವೆ ಸುಮಾರು 7 ಕೋಟಿ ರೂಪಾಯಿ ಅಂತರ ಇದೆ.