ಸಂಗ್ರಹಗಳು
    • ಏಪ್ರಿಲ್ 2026
    • ಮಾರ್ಚ್ 2026
    • ಫೆಬ್ರವರಿ 2026
    • ಜನವರಿ 2026
    • ಡಿಸೆಂಬರ್ 2025
    • ನವೆಂಬರ್ 2025
    • ಅಕ್ಟೋಬರ್ 2025
    • ಸೆಪ್ಟೆಂಬರ್ 2025
    • ಆಗಷ್ಟ್ 2025
    • ಜುಲೈ 2025
    • ಜೂನ್ 2025
    • ಮೇ 2025
    • ಏಪ್ರಿಲ್ 2025
    • ಮಾರ್ಚ್ 2025
    • ಫೆಬ್ರವರಿ 2025
    • ಜನವರಿ 2025
    • ಡಿಸೆಂಬರ್ 2024
    • ನವೆಂಬರ್ 2024
    • ಅಕ್ಟೋಬರ್ 2024
    • ಸೆಪ್ಟೆಂಬರ್ 2024
    • ಆಗಷ್ಟ್ 2024
    • ಜುಲೈ 2024
    • ಜೂನ್ 2024
    • ಮೇ 2024
    • ಏಪ್ರಿಲ್ 2024
    • ಮಾರ್ಚ್ 2024
    • ಫೆಬ್ರವರಿ 2024
    • ಜನವರಿ 2024
    • ಡಿಸೆಂಬರ್ 2023
    • ನವೆಂಬರ್ 2023
    • ಅಕ್ಟೋಬರ್ 2023
    • ಸೆಪ್ಟೆಂಬರ್ 2023
    • ಆಗಷ್ಟ್ 2023
    • ಜುಲೈ 2023
    • ಜೂನ್ 2023
    • ಮೇ 2023
    • ಏಪ್ರಿಲ್ 2023
    • ಮಾರ್ಚ್ 2023
    • ಫೆಬ್ರವರಿ 2023
    • ಜನವರಿ 2023
    • ಡಿಸೆಂಬರ್ 2022
    • ನವೆಂಬರ್ 2022
    • ಅಕ್ಟೋಬರ್ 2022
    • ಸೆಪ್ಟೆಂಬರ್ 2022
    • ಆಗಷ್ಟ್ 2022
    • ಜುಲೈ 2022
    • ಜೂನ್ 2022
    • ಮೇ 2022
    • ಏಪ್ರಿಲ್ 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ಗರುಡಾಚಾರ್ ಅಸ್ತಂಗತ
    Viral

    ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ಗರುಡಾಚಾರ್ ಅಸ್ತಂಗತ

    vartha chakraBy vartha chakraಮಾರ್ಚ್ 28, 20251 ಟಿಪ್ಪಣಿ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು,ಮಾ.28-
    ಮಹಾ ನಗರ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ದೃಷ್ಟಿಯಿಂದ ಟ್ರಾಫಿಕ್ ಸಿಗ್ನಲ್
    ಪರಿಚಯಿಸುವ ಮೂಲಕ ರಾಜ್ಯದ ಜನರ ಗಮನ ಸೆಳೆದಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಎನ್. ಗರುಡಾಚಾರ್ ನಿಧನ ಹೊಂದಿದ್ದಾರೆ.
    ಪೊಲೀಸ್ ಇಲಾಖೆಯಲ್ಲಿ ಎಸ್ ಪಿ ಯಿಂದ ಹಿಡಿದ ರಾಜ್ಯ ಪೊಲೀಸ್ ಮುಖ್ಯಸ್ಥರವರೆಗೆ ಸುದೀರ್ಘ ಸೇವೆ ಸಲ್ಲಿಸಿದ ದಕ್ಷತೆ ಪ್ರಾಮಾಣಿಕತೆಗೆ ಹೆಸರಾಗಿದ್ದ ಗರುಡಾಚಾರ್ ಅವರಿಗೆ 96 ವರ್ಷ ವಯಸ್ಸಾಗಿತ್ತು.
    ಬಸವನಗುಡಿಯ ಮನೆಯಲ್ಲಿ ಮುಂಜಾನೆ 3ರ ವೇಳೆ ವಯೋ ಸಹಜ ಸಾವು ಕಂಡಿರುವ ಗರುಡಾಚಾರ್ ಅಂತ್ಯಕ್ರಿಯೆಯು ನಾಳೆ ಸಂಜೆ 4 ಗಂಟೆಗೆ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ನೆರವೇರಿಸಲು ಕುಟುಂಬ ವರ್ಗದವರು ತೀರ್ಮಾನಿಸಿದ್ದಾರೆ.
    ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಂಡಿಗನವಿಲೆಯ ಕೃಷಿ ಕುಟುಂಬದಲ್ಲಿ 1929ರಲ್ಲಿ ಹುಟ್ಟಿದ ಬಿ.ಎನ್. ಗರುಡಾಚಾರ್, ಬಾಲ್ಯದಿಂದಲೂ ಅತ್ಯಂತ ಕಷ್ಟದಲ್ಲಿಯೇ ಜೀವನ ಸಾಗಿಸಿದರು ಹಳ್ಳಿಯ ಕೂಲಿ ಮಠದಲ್ಲಿ ವಿದ್ಯಾಭ್ಯಾಸ ಆರಂಭಿಸಿದ ಬಾಲಕ ಗರುಡಾಚಾರ್, ಗೊರೂರು, ಹಾಸನ, ಮೈಸೂರುಗಳಲ್ಲಿ ಅಲೆದಾಡಿ, ಅವರಿವರ ಮನೆಯಲ್ಲಿ ಆಶ್ರಯ ಪಡೆದು, ವಾರಾನ್ನ ಉಂಡು ಎಂ.ಎ. ಸ್ನಾತಕೋತ್ತರ ಪದವಿ ಪಡೆದರು.
    ಮೊದಲಿಗೆ ಸರ್ವೇಯರ್, ನಂತರ ಅಬಕಾರಿ ಇನ್ಸ್‌ಪೆಕ್ಟರ್ ಕೆಲಸಕ್ಕೆ ಸೇರಿ 1953ರಲ್ಲಿ ಐಪಿಎಸ್ ಪಾಸ್ ಮಾಡಿ  ಮೊದಲಿಗರೆನಿಸಿಕೊಂಡು ತಿರುವನ್ವೇಲಿಯಲ್ಲಿ ಅಸಿಸ್ಟೆಂಟ್ ಪೊಲೀಸ್ ಕಮಿಷನರ್ ಹುದ್ದೆ ಅಲಂಕರಿಸಿದರು. ನಂತರ ರಾಜ್ಯದ ಸೇವೆಗೆ ಬಂದ ಗುರುಡಾಚಾರ್‌ಗೆ, ಬಿಂಡಿಗನವಿಲೆಯ ಬಡತನ, ಹಸಿವು, ಅವಮಾನ, ಹಿಂಜರಿಕೆ, ಮುಗ್ಧತೆ, ಪ್ರಾಮಾಣಿಕತೆ ಎಲ್ಲವೂ ಬೆನ್ನಿಗಿದ್ದವು. ಅವುಗಳ ಅಗಾಧ ಅನುಭವ ಅವರನ್ನು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರುವಲ್ಲಿ ಪ್ರಶಸ್ತಿ, ಪುರಸ್ಕಾರ, ಪ್ರಶಂಸೆ ಪಡೆಯುವಲ್ಲಿ ಉದ್ದಕ್ಕೂ ಸಹಕರಿಸಿದ್ದವು.
    ಪೊಲೀಸ್ ವೃತ್ತಿಯಲ್ಲಿ ಶಿಸ್ತು ಮತ್ತು ದಕ್ಷತೆಯಿಂದ ಕಾರ್ಯ ನಿರ್ವಹಿಸಿದ ಗರುಡಾಚಾರ್ ಬಹಳ ಬೇಗ ಉನ್ನತ ಸ್ಥಾನಗಳನ್ನು ಅಲಂಕರಿಸಿ, ಅಧಿಕಾರಸ್ಥ ರಾಜಕಾರಣಿಗಳ ಕಣ್ಣಿಗೆ ಬಿದ್ದಿದ್ದರು. ಕೊಪ್ಪಳ, ಹುಮ್ನಾಬಾದ್, ತುಮಕೂರು, ಬಳ್ಳಾರಿ, ಬೆಂಗಳೂರು ಜಿಲ್ಲಾ ಎಸ್ಪಿಯಾಗಿ ಉತ್ತಮ ಸೇವೆ ಸಲ್ಲಿಸಿ ಹೆಸರಾಗಿದ್ದರು.
    ಬಿ.ಎನ್ ಗರುಡಾಚಾರ್ ಅವರು 1963ರಲ್ಲಿ  ನಗರದ ಸಂಚಾರ ಪೊಲೀಸ್ ಉಪ ಆಯುಕ್ತರಾಗಿದ್ದರು, ಆ ಸಮಯದಲ್ಲಿ ಕಾರ್ಪೊರೇಷನ್ ವೃತ್ತದಲ್ಲಿ ನಗರದ ಮೊದಲ ಟ್ರಾಫಿಕ್ ಸಿಗ್ನಲ್ ಪ್ರಾರಂಭಿಸಿದ್ದರು. ಈ ಐತಿಹಾಸಿಕ ಘಟನೆಯ ಸವಿನೆನಪಿಗಾಗಿ, ಈ ಘಟನೆಯನ್ನು ಹೆಸರಿಸುವ ಕಲ್ಲನ್ನು 2021ರ ಮಾರ್ಚ್ ನಲ್ಲಿ ಖುದ್ದು ಗರುಡಾಚಾರ್ ಅವರೇ ಅನಾವರಣಗೊಳಿಸಿದರು.
    ಖಡಕ್ ಅಧಿಕಾರಿ ಎಂದೇ ಹೆಸರು ಪಡೆದ ಗರುಡಾಚಾರ್ ವೀರೇಂದ್ರ ಪಾಟೀಲ್, ದೇವರಾಜ ಅರಸು, ಗುಂಡೂರಾವ್, ಹೆಗಡೆಯವರೊಂದಿಗೆ ನಿಕಟಸಂಪರ್ಕವನ್ನಿಟ್ಟುಕೊಂಡಿದ್ದರು.
    1975ರ ತುರ್ತು ಪರಿಸ್ಥಿತಿಯಲ್ಲಿ ಇಂಟಲಿಜೆನ್ಸ್ ಐಜಿಯಾಗಿ, ರಾಷ್ಟ್ರಮಟ್ಟದ ರಾಜಕೀಯ ನಾಯಕರನ್ನು ಬಂಧಿಸಿ, ಜೈಲಿಗೆ ಹಾಕುವ ಮೂಲಕ ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದರು.
    ದೇವರಾಜ ಅರಸರನ್ನು 1962ರಿಂದ ಬಲ್ಲವರಾಗಿದ್ದು, ಅವರು ಮುಖ್ಯಮಂತ್ರಿಯಾಗಿದ್ದಾಗ, ನಗರ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡು, ನಾಲ್ಕು ವರ್ಷಗಳ ಕಾಲ ಕಮಿಷನರ್ ಹುದ್ದೆಯಲ್ಲಿದ್ದು, ಪ್ರತಿದಿನ ಅರಸು ಅವರೊಂದಿಗೆ ಮುಖಾಮುಖಿಯಾಗುತ್ತಿದ್ದರು.
    ನಗರ ಪೊಲೀಸ್ ಕಮಿಷನರ್ ಆಗಿ (4 ವರ್ಷ 2 ತಿಂಗಳು), ಪೊಲೀಸ್ ಡಿಜಿ/ಐಜಿಪಿಯಾಗಿ (3 ವರ್ಷ 8 ತಿಂಗಳು) ಸೇವೆ ಸಲ್ಲಿಸಿದ ಕೀರ್ತಿ ಗರುಡಾಚಾರ್ ಅವರಿಗೆ ಸಲ್ಲುತ್ತದೆ.
    ಪೊಲೀಸ್ ಇಲಾಖೆಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿದ ಇವರ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ವಿವಿಧ ಪುರಸ್ಕಾರಗಳನ್ನು ನೀಡಿ ಗೌರವಿಸಿದೆ.
    90ರ ಹರೆಯದಲ್ಲೂ ಗುರುಡಾಚಾರ್, ಪುತ್ರ ಶಾಸಕ ಉದಯ್ ಗರುಡಾಚಾರ್ ಅವರ ಪ್ರತಿಷ್ಠಿತ ಗರುಡಾ ಮಾಲ್‌ನಲ್ಲಿ, ಏಳನೆ ಮಹಡಿಯಲ್ಲಿ ಯುವಕರನ್ನೂ ನಾಚಿಸುವ ಲವಲವಿಕೆಯಿಂದ ಕಾರ್ಯ ನಿರ್ವಹಿಸುತ್ತಿದ್ದರು.

    Verbattle
    Verbattle
    Verbattle
    ತುಮಕೂರು ಬೆಂಗಳೂರು ಮೈ ಮೈಸೂರು ರಾಜಕೀಯ ವಿದ್ಯಾ ಸರ್ಕಾರ ಸುದ್ದಿ ಹಾಸನ
    Share. Facebook Twitter Pinterest LinkedIn Tumblr Email WhatsApp
    Previous Articleಸಿಕ್ಕಿಬಿದ್ದ ಚಿನ್ನದ ವ್ಯಾಪಾರಿ
    Next Article ಶಾಸಕನ ಹತ್ಯೆಗೆ 70 ಲಕ್ಷ ಸುಫಾರಿ
    vartha chakra
    • Website

    Related Posts

    ಸಿನಿಮಾ ಪ್ರಮೋಷನ್ ಮಾಡುತ್ತಾರಂತೆ ಪ್ರಧಾನಿ!

    ಏಪ್ರಿಲ್ 7, 2026

    ಕೇರಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ

    ಏಪ್ರಿಲ್ 6, 2026

    ರಾಜ್ಯಪಾಲರ ನಡೆಗೆ ರಕ್ಷಣಾ ವೇದಿಕೆ ಕೆಂಡ

    ಏಪ್ರಿಲ್ 5, 2026

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸಿನಿಮಾ ಪ್ರಮೋಷನ್ ಮಾಡುತ್ತಾರಂತೆ ಪ್ರಧಾನಿ!

    ಕೇರಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ

    ರಾಜ್ಯಪಾಲರ ನಡೆಗೆ ರಕ್ಷಣಾ ವೇದಿಕೆ ಕೆಂಡ

    ದಿನಗೂಲಿ ನೌಕರರಿಗೆ ಬಂಪರ್!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Remont zdaniya_xfEn ರಲ್ಲಿ ಹಿಂದೂ ಧರ್ಮ ಸಂಸ್ಥಾಪಕರು ಯಾರು? | Hinduism
    • 1xbet giris_zjma ರಲ್ಲಿ ಹೈದರಾಬಾದ್ ನಲ್ಲಿ ಭೀಕರ ದುರಂತ.
    • EugeneLom ರಲ್ಲಿ ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ | Belagavi
    Latest Kannada News

    ಸಿನಿಮಾ ಪ್ರಮೋಷನ್ ಮಾಡುತ್ತಾರಂತೆ ಪ್ರಧಾನಿ!

    ಏಪ್ರಿಲ್ 7, 2026

    ಕೇರಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ

    ಏಪ್ರಿಲ್ 6, 2026

    ರಾಜ್ಯಪಾಲರ ನಡೆಗೆ ರಕ್ಷಣಾ ವೇದಿಕೆ ಕೆಂಡ

    ಏಪ್ರಿಲ್ 5, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.