ಬೆಂಗಳೂರು,ಆ.15- ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಸೇರಿರುವ ನಟ ದರ್ಶನ್ ಹಾಗೂ ಪವಿತ್ರಾಗೌಡಗೆ ಇಂದು ಪರಪ್ಪನ ಅಗ್ರಹಾರದಲ್ಲಿ ಜೈಲಿನ ಜೈಲಾಧಿಕಾರಿಗಳು ಖೈದಿ ನಂಬರ್ ನೀಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಹಾಗೂ ಪವಿತ್ರಾಗೌಡ ಇಂದು ಜೈಲಿನ ಜೈಲಾಧಿಕಾರಿಗಳು ಖೈದಿ ನಂಬರ್ ನೀಡಿದ್ದಾರೆ. ಎ1 ಆರೋಪಿ ಪವಿತ್ರಾಗೌಡಗೆ ವಿಚಾರಣಾಧೀನ ಸಂಖ್ಯೆ 7313, ನಟ ದರ್ಶನ್ ಗೆ ಖೈದಿ ನಂ.7314 ನೀಡಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ & ಗ್ಯಾಂಗ್ ಗೆ ಇಂದು ಖೈದಿ ಸಂಖ್ಯೆ ನೀಡಲಾಗಿದೆ. ಐವರು ಆರೋಪಿಗಳಿಗೆ ವಿಚಾರಣಾಧೀನ ಕೈದಿ ನಂಬರ್ ಅನ್ನು ಸಿಬ್ಬಂದಿಗಳು ನೀಡಿದ್ದಾರೆ. ಕೊಲೆ ಕೇಸ್ ನ ಎ.1 ಆರೋಪಿ ಪವಿತ್ರಾಗೌಡ 7313 , ಪ್ರದೋಶ್ 7317, ನಾಗರಾಜ್ ಗೆ 7315 ಹಾಗೂ ಲಕ್ಷ್ಮಣ್ ಗೆ 7316 ಕೈದಿ ಸಂಖ್ಯೆ ನೀಡಲಾಗಿದೆ.
ಕಳೆದ ಬಾರಿ ದರ್ಶನ್ ಅವರು ಬಂಧನಕ್ಕೆ ಒಳಗಾಗಾದ ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗಿತ್ತು. ಅನೇಕ ಅಭಿಮಾನಿಗಳು ಆಗ ಈ ಸಂಖ್ಯೆಯನ್ನು ಹಚ್ಚೆ ಹಾಕಿಸಿಕೊಂಡಿದ್ದರು. ಈಗ ದರ್ಶನ್ಗೆ ಬೇರೆ ಸಂಖ್ಯೆ ಸಿಕ್ಕಿದೆ. ಈ ಬಾರಿಯೂ ಫ್ಯಾನ್ಸ್ ಕೈದಿ ನಂಬರ್ನ ಹಚ್ಚೆ ಹಾಕಿಸಿಕೊಳ್ಳುತ್ತಾರಾ ಎನ್ನುವ ಕುತೂಹಲ ಮೂಡಿದೆ.
ನಾಳೆ ಕುಟುಂಬದವರ ಭೇಟಿ:
ಆರೋಪಿಗಳಾದ ದರ್ಶನ್ ಮತ್ತು ಪವಿತ್ರ ಕುಟುಂಬದವರು ಜೈಲಿಗೆ ಭೇಟಿ ನೀಡುವ ಸಾಧ್ಯತೆ ಇದೆ. ದರ್ಶನ್ ಹಾಗೂ ಇತರ ಮೂವರನ್ನು ಒಂದೇ ಬ್ಯಾರಕ್ನಲ್ಲಿ ಇಡಲಾಗಿದೆ. ಅವರು ಕ್ವಾರಂಟೈನ್ನಲ್ಲಿ ಇದ್ದಾರೆ. ನಂತರ ಅವರನ್ನು ಮುಖ್ಯ ಬ್ಯಾರಕ್ಗೆ ವರ್ಗಾವಣೆ ಮಾಡುವ ಸಾಧ್ಯತೆ ಇದೆ.
Previous Articleಸಿಎಂ ಗೆ ದೇವನೂರು ಮಹಾದೇವ ಪತ್ರ
Next Article ಶಿವಕುಮಾರ್ ಕಾಂಗ್ರೆಸ್ಸಿಗರಿಗೆ ಕೊಟ್ಟ ಕರೆ