ದಕ್ಷಿಣಕನ್ನಡ,ಮೇ.15-ಬಂಟ್ವಾಳ ತಾಲೂಕಿನ ವಾಮದಪದವು ಸಮೀಪದ ಕುದ್ಕೊಳಿ ಬಳಿ ಇಂದು ಬೆಳಿಗ್ಗೆ ಅಕ್ರಮ ಗೋವು ಸಾಗಣೆ ತಡೆಯಲು ಹೋದ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ) ಮೇಲೆ ದುಷ್ಕರ್ಮಿಗಳು ವಾಹನ ನುಗ್ಗಿಸಲು ಯತ್ನಿಸಿ ಪರಾರಿಯಾಗಿದ್ದಾರೆ.
ಅದೃಷ್ಟವಶಾತ್ ಅಪಾಯದಿಂದ ಎಸ್ಐ ಪಾರಾಗಿದ್ದು, ಪರಾರಿಯಾಗಿರುವ ದುಷ್ಕರ್ಮಿಗಳಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ವಾಮದಪದವು ಸಮೀಪದ ಕುದ್ಕೊಳಿ ಬಳಿ ಪುಂಜಾಲಕಟ್ಟೆ ಎಸ್ಐ ಸುತೇಶ್ ಎಂಬವರ ಮೇಲೆ ದನ ಸಾಗಾಟ ಮಾಡುತ್ತಿದ್ದ ಆರೋಪಿಗಳು ವಾಹನ ನುಗ್ಗಿಸಲು ಪ್ರಯತ್ನಿಸಿದ್ದಾರೆ.
ರಾತ್ರಿ ವೇಳೆ ಗಸ್ತಿನಲ್ಲಿದ್ದ ಸುತೇಶ್ ಅವರು ಕುದ್ಕೊಳಿ ಎಂಬಲ್ಲಿ ಸಂಶಯಾಸ್ಪದ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದ್ದರು. ಆಗ ಚಾಲಕ ವಾಹನ ನಿಲ್ಲಿಸದೆ ಎಸ್ಐ ಮೇಲೆ ನುಗ್ಗಿಸಿದ್ದಾನೆ. ಆ ಬಳಿಕ ವಾಹನ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.ವಾಹನದಲ್ಲಿ ಇಬ್ಬರು ಆರೋಪಿಗಳು ಮೂರು ಗೋವುಗಳನ್ನು ಸಾಗಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ರಾತ್ರಿ ವೇಳೆ ಹಟ್ಟಿಯಿಂದ ಕಳ್ಳತನ ಮಾಡಿ ತಂದಿರುವ ಗೋವುಗಳಾಗಿರಬೇಕು ಎಂದು ಪೊಲೀಸರು ಶಂಕಿಸಿ ತನಿಖೆಯನ್ನು ಕೈಗೊಂಡಿದ್ದಾರೆ.
ಸಂಗ್ರಹಗಳು
- ಮಾರ್ಚ್ 2026
- ಫೆಬ್ರವರಿ 2026
- ಜನವರಿ 2026
- ಡಿಸೆಂಬರ್ 2025
- ನವೆಂಬರ್ 2025
- ಅಕ್ಟೋಬರ್ 2025
- ಸೆಪ್ಟೆಂಬರ್ 2025
- ಆಗಷ್ಟ್ 2025
- ಜುಲೈ 2025
- ಜೂನ್ 2025
- ಮೇ 2025
- ಏಪ್ರಿಲ್ 2025
- ಮಾರ್ಚ್ 2025
- ಫೆಬ್ರವರಿ 2025
- ಜನವರಿ 2025
- ಡಿಸೆಂಬರ್ 2024
- ನವೆಂಬರ್ 2024
- ಅಕ್ಟೋಬರ್ 2024
- ಸೆಪ್ಟೆಂಬರ್ 2024
- ಆಗಷ್ಟ್ 2024
- ಜುಲೈ 2024
- ಜೂನ್ 2024
- ಮೇ 2024
- ಏಪ್ರಿಲ್ 2024
- ಮಾರ್ಚ್ 2024
- ಫೆಬ್ರವರಿ 2024
- ಜನವರಿ 2024
- ಡಿಸೆಂಬರ್ 2023
- ನವೆಂಬರ್ 2023
- ಅಕ್ಟೋಬರ್ 2023
- ಸೆಪ್ಟೆಂಬರ್ 2023
- ಆಗಷ್ಟ್ 2023
- ಜುಲೈ 2023
- ಜೂನ್ 2023
- ಮೇ 2023
- ಏಪ್ರಿಲ್ 2023
- ಮಾರ್ಚ್ 2023
- ಫೆಬ್ರವರಿ 2023
- ಜನವರಿ 2023
- ಡಿಸೆಂಬರ್ 2022
- ನವೆಂಬರ್ 2022
- ಅಕ್ಟೋಬರ್ 2022
- ಸೆಪ್ಟೆಂಬರ್ 2022
- ಆಗಷ್ಟ್ 2022
- ಜುಲೈ 2022
- ಜೂನ್ 2022
- ಮೇ 2022
- ಏಪ್ರಿಲ್ 2022
