ಬೆಂಗಳೂರು.
ಲೋಕಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ವಿಶ್ಲೇಷಣೆ ಮಾಡಿರುವ ಗೃಹ ಸಚಿವ ಪರಮೇಶ್ವರ್, ಮತ ಗಳಿಕೆಯಲ್ಲೂ ಗಣನೀಯ ಏರಿಕೆಯಾಗಿದೆ. ಫಲಿತಾಂಶ ಸಮಾಧಾನ ತಂದಿದೆ.ಆದರೆ ಸಂತೋಷ ತಂದಿಲ್ಲ ಎಂದು ಹೇಳಿದರು.
ಕಾಂಗ್ರೆಸ್‌ಗೆ ನಿರೀಕ್ಷಿತ ಫಲಿತಾಂಶ ಬಂದಿಲ್ಲ. 20 ಸ್ಥಾನಗಳನ್ನು ಗೆಲ್ಲುವ ಲೆಕ್ಕಾಚಾರ ಈಡೇರಿಲ್ಲ. ಆದರೆ ಒಂದು ಸ್ಥಾನದಲ್ಲಿದ್ದ ಕಾಂಗ್ರೆಸ್ 09 ಕ್ಕೆ ಏರಿಕೆಯಾಗಿದೆ ಅದೊಂದೇ ಸಮಾಧಾನ ಎಂದು ತಿಳಿಸಿದರು.
ಆಡಳಿತಾರೂಢ ಪಕ್ಷ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಬೇಕಿತ್ತು. ಆದರೆ ಜನ ನಮಗೂ ಎಚ್ಚರಿಕೆ ನೀಡಿದ್ದಾರೆ. ಒಂದು ವರ್ಷದ ಆಡಳಿತ ಜನಸಾಮಾನ್ಯರಿಗೆ ಸಮಾಧಾನ ತಂದಿಲ್ಲ ಎಂಬುದನ್ನು ತೋರಿಸುತ್ತದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಒಳ್ಳೆಯ ಆಡಳಿತ ನೀಡುವತ್ತ ಮುಖ್ಯಮಂತ್ರಿ, ಅಧ್ಯಕ್ಷರು ಸೇರಿ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಜನರ ತೀರ್ಪನ್ನು ಸ್ವಾಗತಿಸುತ್ತೇವೆ.ಸರ್ಕಾರ ಗ್ಯಾರಂಟಿ ನೀಡಿದ ಹೊರತಾಗಿಯೂ ಜನರ ತೀರ್ಪು ಬೇರೆಯದೇ ಆಗಿದೆ ಎಂದು ಹೇಳಿದರು.
2019 ರ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಫಲ ನೀಡಲಿಲ್ಲ. ಈ ಬಾರಿಯ ಜೆಡಿಎಸ್-ಬಿಜೆಪಿ ಮೈತ್ರಿ ಪರಿಣಾಮ ಬೀರಿದೆ. ಬಹುಶಃ ಅದು ಪರಿಣಾಮ ಬೀರುವುದಿಲ್ಲ ಎಂಬ ಅಂದಾಜಿನಲ್ಲಿ ಕಾಂಗ್ರೆಸಿಗರಿದ್ದೆವು. ಆದರೆ ಅದು ಹುಸಿಯಾಗಿದೆ ಎಂದರು.
ತುಮಕೂರಿನಲ್ಲಿ ನಮ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ 100 ಕ್ಕೆ 100 ಗೆಲ್ಲುತ್ತಾರೆ ಎಂಬ ವಿಶ್ವಾಸವಿತ್ತು. ಫಲಿತಾಂಶ ಏರುಪೇರಾಗಿದೆ. ಹೀಗಾಗಿ ತಾವು ಮತ್ತು ಸಚಿವ ಕೆ.ಎನ್.ರಾಜಣ್ಣ ಪಕ್ಷದ ವರಿಷ್ಠರಿಗೆ ವಿವರಣೆ ಕೊಡುತ್ತೇವೆ ಎಂದು ಹೇಳಿದರು.
Previous Articleಒಳ ಜಗಳವೇ ಸೋಲಿಗೆ ಕಾರಣವಂತೆ.
Next Article ಉದ್ಯೋಗ ಸೃಷ್ಟಿಯಲ್ಲಿ ಕ್ರೆಡೆಲ್ ಮಹತ್ವದ ಪಾತ್ರ.

