ಮುಂಬೈ.
ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಖ್ಫ್ ಸಚಿವ ಜಮೀರ್ ಅಹಮದ್ ಖಾನ್ ಅವರು ಗುರುವಾರ ಮುಂಬೈನ ಬಾಂದ್ರಾ ದಲ್ಲಿ
ಇತ್ತೀಚಿಗೆ ಹತ್ಯೆಗೀಡಾದ ಹಿರಿಯ ರಾಜಕೀಯ ಮುಖಂಡ ಬಾಬಾ ಸಿದ್ದಿಕ್ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ತಮ್ಮ ಹಾಗೂ ಬಾಬಾ ಸಿದ್ದಿಕ್ ನಡುವಿನ ಸ್ನೇಹ -ಸಂಬಂಧ ಬಗ್ಗೆ ಮೆಲುಕು ಹಾಕಿದರು.
ಇದೇ ಸಂದರ್ಭದಲ್ಲಿ ಬಾಬಾ ಸಿದ್ದಿಕ್ ಸಹೋದರರಾದ ರಿಯಾಜ್ ಸಿದ್ದಿಕ್ ಮತ್ತು ಅಬ್ದುಲ್ ಅಜೀಜ್ ಸಿದ್ದಿಕ್ ಅವರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊಬೈಲ್ ದೂರವಾಣಿ ಮೂಲಕ ಮಾತನಾಡಿ ಸಾಂತ್ವನ ಹೇಳಿ ಧೈರ್ಯ ತುಂಬಿದರು.