ರಾಯಚೂರು,ಮಾ.20- ಹೋಟೆಲ್‌ನಲ್ಲಿ ಬಿರಿಯಾನಿ ತಿಂದು 500 ರೂ ನೋಟು ಕೊಟ್ಟು ಬಿಲ್ ಪಾವತಿ ಮಾಡಿದ್ದ ಇಬ್ಬರನ್ನು ರಾಯಚೂರು ಪೊಲೀಸರು ಬಂಧಿಸಿದ್ದಾರೆ.
ಅದು ಯಾಕೆ ಅಂತೀರಾ..
ಮಂಜುನಾಥ ಹಾಗೂ ರಮೇಶ್ ಎಂಬುವರು ಹೋಟೆಲ್ ಗೆ ಹೋಗಿ
ಚಿಕನ್ ಬಿರಿಯಾನಿ ತಿಂದಿದ್ದಾರೆ.ಇದಕ್ಕೆ ನೀಡಿದ ಬಿಲ್ ಗೆ 500 ರೂಪಾಯಿ ನೋಟು ನೀಡಿ ಚಿಲ್ಲರೆ ಪಡೆದು ಹೋಗಿದ್ದಾರೆ.ಸ್ವಲ್ಪ ಹೊತ್ತಿನ ಬಳಿಕ ಹೋಟೆಲ್ ಮಾಲೀಕರಿಗೆ ಇವರು ನೀಡಿದ 500 ರೂಪಾಯಿ ನೋಟಿನ ಬಗ್ಗೆ ಅನುಮಾನ ಬಂದು,ಆ ನೋಟು ಪರಿಶೀಲಿಸಿದ್ದಾರೆ. ಆಗ ನೋಟಿನ ಅಸಲಿಯತ್ತು ಬಯಲಾಗಿದೆ.
ಮನೋರಂಜನೆಗಾಗಿ ಬಳಸುವ ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ ಎಂದು ನಮೂದಿಸಿದ್ದ ನಕಲಿ ನೋಟನ್ನು ಆರೋಪಿಗಳು ಬಿಲ್ ಪಾವತಿಗೆ ಬಳಸಿದ್ದರು. ತಕ್ಷಣವೇ ಹೋಟೆಲ್ ಮಾಲೀಕ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ . ಕಾರ್ಯಾಚರಣೆಗಿಳಿದ ಪೊಲೀಸರು ಈ ಇಬ್ಬರನ್ನೂ ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ.ಕೋರ್ಟ್ ಇಬ್ಬರಿಗೂ
ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ
Previous Articleಲಂಚ ಕೇಳುತ್ತಾರೆ ಎಂದ ಯತೀಂದ್ರ ಸಿದ್ದರಾಮಯ್ಯ
Next Article ವಿಧಾನಸಭೆಯಲ್ಲಿ ಯತ್ನಾಳ್ ಕೋಲಾಹಲ