ಬೆಂಗಳೂರು,ಆ.28- ಬುಡುಬುಡಿಕೆ ಹೇಳಿದ್ದನ್ನು ನಂಬಿ ಹೆದರಿ ಎರಡು ಲಕ್ಷ ಮೌಲ್ಯದ ಚಿನ್ನಾಭರಣ ಕಳೆದುಕೊಂಡ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜ್ಞಾನ ಭಾರತಿ ಬಳಿಯ ಕೆಪಿಎಸ್ ಸಿ ಲೇಔಟ್ ನ ವರದರಾಜು ಎಂಬುವವರ ತಂದೆ ಇತ್ತೀಚೆಗೆ ಸಾವನ್ನಪ್ಪಿದ್ದು ಸಂಪ್ರದಾಯದ ಪ್ರಕಾರ 11 ದಿನ ಮನೆಯಲ್ಲಿ ದೀಪ ಹಚ್ಚಬೇಕು. ಹೀಗಾಗಿ ಮನೆಯಲ್ಲಿ ದೀಪ ಹಚ್ಚಿದ್ದನ್ನ ನೋಡಿ ಮನೆಗೆ ಬಂದಿದ್ದ ಬುಡುಬುಡುಕೆ ದಾಸ ಈ ಮನೆಯಲ್ಲಿ ಮತ್ತೆ ಮೂರು ಸಾವಾಗುತ್ತೆ ಎಂದು ರಾತ್ರಿ ವೇಳೆ ಹೇಳಿ ಹೋಗಿದ್ದ.
ಇದನ್ನು ಕೇಳಿ ದಂಪತಿ ಹೆದರಿದ್ದರು. ನಂತರ ಮಾರನೇ ದಿನವೂ ಬಂದಿದ್ದ ಬುಡುಬುಡುಕೆಯವನು, ಮನೆಯಲ್ಲಿ ವರದರಾಜು ಪತ್ನಿ ಒಬ್ಬರೇ ಇರುವುದನ್ನು ನೋಡಿ ಮತ್ತೆ ಮೂರು ಸಾವಗುತ್ತೆ ಎಚ್ಚರ ಮತ್ತೆ ಬೆದರಿಸಿದ್ದ. ಎರಡನೇ ಬಾರಿ ಸಾವಿನ ವಿಚಾರ ಕೇಳಿದಾಗ ಭಯಗೊಂಡ ವರದರಾಜು ಪತ್ನಿ, ಬುಡುಬುಡಕೆಯವನನ್ನ ಮನೆಯೊಳಗೆ ಕರೆಸಿ ಮಾತನಾಡಿಸಿದ್ದಳು.
ಈ ವೇಳೆ ಪೂಜೆ ಮಾಡಬೇಕು ಐದು ಸಾವಿರ ಆಗಲಿದೆ ಎಂದಿದ್ದ ಬುಡುಬುಡುಕೆಯವನು. ಐದು ಸಾವಿರ ಕೊಟ್ಟ ಬಳಿಕ ವರದರಾಜು ಪತ್ನಿಗೆ ಕಪ್ಪು ಇರುವ ಬೊಟ್ಟನ್ನು ಹಣೆಗೆ ಹಚ್ಚಿದ್ದ. ಈ ಸಂಧರ್ಭದಲ್ಲಿ ಮೈಮೇಲಿದ್ದ ಒಡವೆಗಳ ಬುಡುಬುಡಕೆ ದಾಸ ಕೇಳಿದ್ದ. ಆಕೆಗೆ ಅರಿವಿಲ್ಲದಂತೆ ಅದನ್ನ ತೆಗೆದುಕೊಟ್ಟಿದ್ದರು.ಒಂದು ಚೈನ್ ಹಾಗೂ ಎರಡು ಉಂಗುರವನ್ನ ಬಿಚ್ಚಿ ಕೊಟ್ಟಿದ್ದು, ಇದೇ 12 ಗಂಟೆಯೊಳಗೆ ಪೂಜೆ ಮಾಡಿ ಕೊಡ್ತೀನಿ ಎಂದು ಹೇಳಿ ತನ್ನ ಹೆಸರು ಕೃಷ್ಣಪ್ಪ ಎಂದು ಹೇಳಿ ಫೋನ್ ನಂಬರ್ ಇಟ್ಟು ಹೋಗಿದ್ದ. ಪತಿ ವರದರಾಜು ಬಂದ ಬಳಿಕ ಅಸಲಿ ಸಂಗತಿ ತಿಳಿದು ಕೃಷ್ಣಪ್ಪನ ನಂಬರ್ ಗೆ ಕರೆ ಮಾಡಿದರೆ ಅದು ಸ್ವಿಚ್ ಆಫ್ ಆಗಿತ್ತು. ಮೋಸ ಹೋಗಿರೋ ವಿಚಾರ ತಿಳಿಯುತ್ತಿದ್ದಂತೆ ಜ್ಞಾನಭಾರತಿ ಪೊಲೀಸರಿಗೆ ದೂರು ನೀಡಿದ್ರು. ದೂರು ಪಡೆದ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ