ಬೆಂಗಳೂರು,ಆ.15- ರಾಜಧಾನಿ ಬೆಂಗಳೂರಿಗೆ ಪ್ರತಿದಿನ ಒಂದು ಲಕ್ಷ ವಾಹನಗಳು ಬಂದು ಹೋಗುತ್ತಿದ್ದು,ಪ್ರತಿದಿನ
ಎರಡು ಸಾವಿರ ಹೊಸ ವಾಹನಗಳು ಸೇರ್ಪಡೆಯಾಗುತ್ತಿರುವುದರಿಂದ ಕಳೆದೆರಡು ತಿಂಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಶೇ 20 ರಷ್ಟು ಏರಿಕೆ ಆಗಿದೆ.
ಇದೇ ರೀತಿಯಲ್ಲಿ ವಾಹನಗಳ ಸಂಖ್ಯೆ ಏರಿಕೆಯಾಗಿ ರಸ್ತೆಗಳ ಸಾಮರ್ಥ್ಯಕ್ಕೂ ಮೀರಿ ವಾಹನಗಳ ಸಂಖ್ಯೆ ಹೆಚ್ಚಳವಾದರೆ, ನಗರದ ಚಿಕ್ಕ ಸಿಗ್ನಲ್ ದಾಟಲು 15 ನಿಮಿಷ ಬೇಕಾಗಬಹುದು. ದೊಡ್ಡ ಸಿಗ್ನಲ್ ದಾಟಲು 22 ನಿಮಿಷಗಳು ಬೇಕಾಗುತ್ತದೆ ಎಂದು ಐಐಎಸ್ಸಿ ತಜ್ಞರ ವರದಿ ತಿಳಿಸಿದೆ.
ಬೆಂಗಳೂರು ದೇಶದ 2ನೇ ಅತಿದೊಡ್ಡ ವಾಹನ ದಟ್ಟಣೆ ಇರುವ ನಗರವಾಗಿದೆ, ವಾಹನಗಳ ಸಂಖ್ಯೆ ಇನ್ನಷ್ಟು ಹೆಚ್ಚಾದರೆ ದೆಹಲಿಯಂತೆ ಬೆಂಗಳೂರು ಕೂಡ ವಾಯುಮಾಲಿನ್ಯ ನಗರವಾಗಲಿದೆ. ಬೆಂಗಳೂರಿನ ಈಗಿನ ರಸ್ತೆಗಳು ಕೇವಲ 50 ಲಕ್ಷ ವಾಹನಗಳ ಓಡಾಟಕ್ಕೆ ಯೋಗ್ಯವಾಗಿವೆ. ಆದರೆ ಈಗ ರಾಜಧಾನಿಯಲ್ಲಿ ವಾಹನಗಳ ಸಂಖ್ಯೆ ಮಿತಿ ಮೀರಿದೆ. ಮುಂದಿನ ನಾಲ್ಕು ತಿಂಗಳಲ್ಲಿ 2 ಲಕ್ಷ ಹೊಸ ವಾಹನಗಳು ನಗರಕ್ಕೆ ಸೇರ್ಪಡೆಯಾಗಲಿವೆ.
ಬೆಂಗಳೂರಲ್ಲಿ 31-03-24 ರ ವರೆಗೆ 25,13,294 ಲಕ್ಷ ಕಾರುಗಳು, 78,33,390 ಲಕ್ಷ ಬೈಕ್ಗಳು ರೋಡಿಗಿಳಿದರೆ, ಒಟ್ಟು 1,03,46,684 ಕೋಟಿ ಕಾರುಗಳು ನೊಂದಣಿ ಆಗಿವೆ. 01-04-23 ರಿಂದ 31-03-24 ರ ವರೆಗೆ ರೋಡಿಗಿಳಿದ ಹೊಸ ಕಾರುಗಳ ಸಂಖ್ಯೆ 1,59,239 ಲಕ್ಷ. 47,80,98 ಲಕ್ಷ ಬೈಕ್ಗಳು ಹೊಸದಾಗಿ ರಿಜಿಸ್ಟ್ರೇಷನ್ ಆಗಿವೆ. ಒಟ್ಟು ಕಳೆದ ಆರ್ಥಿಕ ವರ್ಷದಲ್ಲಿ 6,37,337 ಲಕ್ಷ ಹೊಸ ಕಾರುಗಳು, ಬೈಕ್ಗಳು ನೋಂದಣಿ ಆಗಿದೆ ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ ತಿಳಿಸಿದ್ದಾರೆ.
ದೆಹಲಿಯಲ್ಲಿ 31-03-24 ರ ವರೆಗೆ ಕಾರುಗಳ ಸಂಖ್ಯೆ 41,82,834 ಲಕ್ಷ ಇದ್ದರೆ, ಬೈಕ್ಗಳ ಸಂಖ್ಯೆ- 94,96,069 ಲಕ್ಷವಿದೆ. ಒಟ್ಟು 1,36,78,903 ಕೋಟಿ ಕಾರು ಹಾಗೂ ಬೈಕ್ಗಳಿವೆ. 01-04-23 ರಿಂದ 31-04-24 ರಲ್ಲಿ 1,93,548 ಲಕ್ಷ ಕಾರುಗಳು 4,02,610 ಲಕ್ಷ ಹೊಸ ಬೈಕ್ ಗಳು ರೋಡಿಗಿಳಿದಿವೆ. ಒಟ್ಟು ಕಳೆದ ಆರ್ಥಿಕ ವರ್ಷದಲ್ಲಿ 5,96,158 ಲಕ್ಷ ಹೊಸ ಕಾರು, ಬೈಕ್ಗಳು ನೊಂದಣಿಯಾಗಿವೆ.
Previous ArticleHoney trap ಗ್ಯಾಂಗ್ ಬೆಲೆಗೆ ಬಿತ್ತು
Next Article ಮಗುವಿನ ರಕ್ಷಣೆಗೆ ಬಂದವರು ಹೈರಾಣ.