ಬೆಂಗಳೂರು.
ಮಹಾನಗರ ಬೆಂಗಳೂರಿನಲ್ಲಿ ವಾಹನ ನಿಲುಗಡೆ ಪ್ರದೇಶ ಹೊರತುಪಡಿಸಿ ಇತರೆ ಪ್ರದೇಶಗಳಲ್ಲಿ ವಾಹನ ನಿಲ್ಲಿಸಿದರೆ ಅವುಗಳನ್ನು ಟೋಯಿಂಗ್ ಮಾಡಿ ದಂಡ ವಿಧಿಸಲಾಗುತ್ತಿತ್ತು. ಈ ಟೋಯಿಂಗ್ ವಾಹನಗಳ ಉಸ್ತುವಾರಿ ವಹಿಸಿದವರು ವಾಹನಗಳ ಸವಾರರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಪದ್ಧತಿ ರದ್ದುಪಡಿಸಲಾಯಿತು.
ಆದರೆ ಇದೀಗ ಬೆಂಗಳೂರಿನ ಕೇಂದ್ರ ಪ್ರದೇಶವಾದ ಗಾಂಧಿನಗರ ಪ್ರದೇಶದಲ್ಲಿ ಮತ್ತೆ ಬೋಯಿಂಗ್ ಜಾರಿಗೆ ಬಂದಿದೆ.
ಇಲ್ಲಿ ವಾಹನಗಳನ್ನು ನಿಲುಗಡೆ ರಹಿತ ಪ್ರದೇಶದಲ್ಲಿ ನಿಲ್ಲಿಸಿದರೆ ಅಥವಾ ಇತರೆ ವಾಹನಗಳ ಚಾಲನೆಗೆ ಅಡ್ಡಿಯಾಗುವುದು ರೀತಿಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡಿದರೆ ಟೋಯಿಂಗ್ ಮಾಡಲಾಗುತ್ತದೆ.
ಇದಕ್ಕೆ ಕಾರಣವಿಷ್ಟೇ ಈ ಪ್ರದೇಶದಲ್ಲಿ ಮಹಾನಗರ ಪಾಲಿಕೆ ವಾಹನ ನಿಲುಗಡೆ ಸಮಸ್ಯೆಗೆ ಪರಿಹಾರ ರೂಪಿಸಿದೆ .ಫ್ರೀಡಂ ಪಾರ್ಕ್ ಸಮೀಪದಲ್ಲಿ ಅತ್ಯಂತ ವಿಶಾಲವಾದ ಪಾರ್ಕಿಂಗ್ ಪ್ರದೇಶವನ್ನು ನಿರ್ಮಾಣ ಮಾಡಿದೆ ಇಲ್ಲಿ ಎಲ್ಲ ರೀತಿಯ ವಾಹನ ನಿಲುವಡೆಗೆ ಅವಕಾಶ ಕಲ್ಪಿಸಲಾಗಿದೆ ಆದರೂ ಅನೇಕ ಮಂದಿ ವಾಹನ ಸವಾರರು ತಮ್ಮ ವಾಹನಗಳನ್ನು ಇಲ್ಲಿ ನಿಲುಗಡೆ ಮಾಡದ ರಸ್ತೆಗಳಲ್ಲಿ ಹೇಗಂದರೆ ಹಾಗೆ ನಿಲುಗಡೆ ಮಾಡುತ್ತಿದ್ದಾರೆ ಇದರಿಂದ ಈ ಪ್ರದೇಶದಲ್ಲಿ ಸಂಸಾರ ದಟ್ಟಣೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರ ಸೂಚನೆ ಮೇರೆಗೆ ಇದೀಗ ಈ ಪ್ರದೇಶದಲ್ಲಿ ನಿಲುಗಡೆ ಪ್ರದೇಶ ಹೊರತುಪಡಿಸಿ ಬೇರೆ ಕಡೆ ನಿಲ್ಲಿಸಲಾದ ವಾಹನಗಳನ್ನು ಟೋಯಿಂಗ್ ಮಾಡಲಾಗುತ್ತದೆ.
ಫ್ರೀಡಂ ಪಾರ್ಕಿನ ಪಾರ್ಕಿಂಗ್ ಪ್ರದೇಶವನ್ನು ನಿರ್ವಹಣೆ ಮಾಡಲು ಗುತ್ತಿಗೆ ಪಡೆದಿರುವ ಗುತ್ತಿಗೆದಾರರೇ ವಾಹನಗಳನ್ನು ಟೋಯಿಂಗ್ ಮಾಡಿ ಪಾರ್ಕಿಂಗ್ ಪ್ರದೇಶಕ್ಕೆ ಕೊಂಡೊಯ್ಯುತ್ತಾರೆ ಅಲ್ಲಿ ಪಾರ್ಕಿಂಗ್ ಶುಲ್ಕದ ಜೊತೆಗೆ ಟೋಯಿಂಗ್ ಶುಲ್ಕವನ್ನು ವಿಧಿಸಲಾಗುತ್ತದೆ ಹೀಗಾಗಿ ಗಾಂಧಿನಗರ ಪ್ರದೇಶದಲ್ಲಿ ನೀವು ನಿಮ್ಮ ವಾಹನವನ್ನು ನಿಲುಗಡೆ ಮಾಡುವಾಗ ಎಚ್ಚರ ವಹಿಸುವುದು ಸೂಕ್ತ
Previous Articleರಜನಿಕಾಂತ್ ಜೊತೆ ರಚಿತಾ ರಾಮ್ ನಟನೆ.
Next Article ಹಾಸನದಲ್ಲಿ ಬಾಂಗ್ಲಾ ವಲಸಿಗರು.