ಬೆಂಗಳೂರು,ಮೇ.28-
ಮಹಾನಗರ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗುತ್ತಿದೆ.ಇದನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಪೊಲೀಸರು ಮತ್ತೆ ಟೋಯಿಂಗ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದ್ದಾರೆ.
ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಬೆಂಗಳೂರು
ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಟೋಯಿಂಗ್ ಗೆ ಇಲಾಖೆಯ ವಾಹನ ಮತ್ತು ಸಿಬ್ಬಂದಿ ಬಳಸಲಾಗುತ್ತದೆ ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.
ಮೊದಲಿಗೆ ಹೆಚ್ಚು ಸಂಚಾರ ದಟ್ಟಣೆಯಿರುವ ರಸ್ತೆಗಳಲ್ಲಿ ಅಡ್ಡಾದಿಡ್ಡಿ ನಿಲ್ಲಿಸುವ ವಾಹನಗಳನ್ನು ಟೋಯಿಂಗ್ ಮಾಡಲು ಕ್ರಮಕೈಗೊಳ್ಳಲಾಗುವುದು,
ಅತಿ ಹೆಚ್ಚು ದಟ್ಟಣೆಯಿರುವ ರಸ್ತೆಗಳಲ್ಲಿ ವ್ಯವಸ್ಥೆ ಜಾರಿಗೆ ಬರಲಿದೆ ಇದಕ್ಕೆ ಪೊಲೀಸರು ಹಾಗೂ ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದುಹೇಳಿದರು
ಮೊದಲು ಟೋಯಿಂಗ್‌ಗೆ ಬಾಡಿಗೆ ವಾಹನಗಳನ್ನು ಬಳಸಲಾಗುತ್ತಿತ್ತು. ಈಗ ಇಲಾಖೆಯ ವಾಹನಗಳನ್ನು ಬಳಸಿ ಯಾವುದೇ ಸಮಸ್ಯೆಗಳಿಗೆ ಎಡೆಮಾಡಿಕೊಟದೇ ಟೋಯಿಂಗ್ ನಿರ್ವಹಣೆ ಮಾಡಲಿದ್ದೇವೆ ಎಂದು ತಿಳಿಸಿದರು.
ಮನೆ ಮನೆಗೆ ಪೊಲೀಸ್ :
ಬಹಳಷ್ಟು ಜನ ಪೊಲೀಸ್ ಠಾಣೆಗಳಿಗೆ ತೆರಳಲು ಹಿಂದೇಟು ಹಾಕುತ್ತಾರೆ. ಆದ್ದರಿಂದ ಪೊಲೀಸ್ ಸಿಬ್ಬಂದಿಗಳೇ ನಿಗಧಿತವಾಗಿ ಮನೆ ಮನೆಗೆ ತೆರಳಿ ಜನರ ಬಳಿ ಮಾತನಾಡಿ, ಸಹಾಯದ ಅಗತ್ಯತೆಯ ತಿಳಿದು ಅಗತ್ಯವಿದ್ದರೆ ದೂರು ದಾಖಲಿಸಿಕೊಳ್ಳಲು ಮನೆ ಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ತರಲಾಗುವುದು ಎಂದು ಹೇಳಿದರು.
ಮನೆಗಳವು ವಾಹನಗಳವು, ಮಾದಕ ಪದಾರ್ಥಗಳ ದುಷ್ಪರಿಣಾಮಗಳು, ಸಂಚಾರ ನಿಯಮಗಳ ಕುರಿತು ಕೂಡ ಮನೆ ಮನೆಗೆ ತೆರಳುವ ಪೊಲೀಸರು ಅರಿವು ಮೂಡಿಸಲಿದ್ದಾರೆ ಎಂದು ತಿಳಿಸಿದರು.
Previous Articleಯೋಧರಿಗೆ DCM ಬಂಪರ್ ಕೊಡುಗೆ .
Next Article ಬಟ್ಟೆ ವ್ಯಾಪಾರದ ಹೆಸರಿನಲ್ಲಿ ಡ್ರಗ್ಸ್ ಮಾರಾಟ.