ಬೆಂಗಳೂರು,ನ.14-
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೈಗೆತ್ತಿಕೊಂಡಿರುವ ವೈಟ್ ಟಾಪಿಂಗ್ ಕಾಮಗಾರಿ ಹಿನ್ನಲೆಯಲ್ಲಿ ದೇವರಬೀಸನಹಳ್ಳಿ ಸಕ್ರಾ ಆಸ್ಪತ್ರೆ ಮುಖ್ಯರಸ್ತೆಯಲ್ಲಿ ಎರಡು ತಿಂಗಳು ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಹೀಗಾಗಿ ಯಮಲೂರು ಕಡೆಯಿಂದ ದೇವರಬೀಸನಹಳ್ಳಿ ಮತ್ತು ಬೆಳ್ಳಂದೂರು ಕಡೆಗೆ ಸಂಚರಿಸುವವರು ಹಳೆ ವಿಮಾನ ನಿಲ್ದಾಣ ರಸ್ತೆ – ಯಮಲೂರು ಜಂಕ್ಷನ್ – ಮಾರತ್ತಹಳ್ಳಿ ಬ್ರಿಡ್ಜ್ – ಕಾಡುಬೀಸನಹಳ್ಳಿ ಬ್ರಿಡ್ಜ್ – ಹೊರವರ್ತುಲ ರಸ್ತೆ ಮಾರ್ಗವಾಗಿ ದೇವರಬೀಸನಹಳ್ಳಿ ಮತ್ತು ಬೆಳ್ಳಂದೂರು ಕಡೆಗೆ ಸಂಚರಿಸಬಹುದಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ
ಯಮಲೂರು ಕಡೆಯಿಂದ ಕಾಡುಬೀಸನಹಳ್ಳಿ ಮತ್ತು ದೇವರಬೀಸನಹಳ್ಳಿ ಕಡೆಗೆ ಸಂಚರಿಸುವವರು ಹಳೆ ವಿಮಾನ ನಿಲ್ದಾಣ ರಸ್ತೆ ಮಾರ್ಗವಾಗಿ ಯಮಲೂರು ಜಂಕ್ಷನ್ – ಯಮಲೂರು ವಿಲೇಜ್ ಮಾರ್ಗವಾಗಿ ಯಮಲೂರು ಕೋಡಿಯಲ್ಲಿ ಎಡ ತಿರುವು ಪಡೆದು ಕರಿಯಮ್ಮನ ಅಗ್ರಹಾರ ಮೂಲಕ ಕಾಡುಬೀಸನಹಳ್ಳಿ ಮತ್ತು ದೇವರಬೀಸನಹಳ್ಳಿ ಕಡೆಗೆ ಸಂಚರಿಸಬಹುದಾಗಿದೆ.
ಯಮಲೂರು ಕಡೆಯಿಂದ ಹೊರವರ್ತುಲ ರಸ್ತೆ ಕಡೆಗೆ ಸಂಚರಿಸುವವರು ಹಳೆ ವಿಮಾನ ನಿಲ್ದಾಣ ರಸ್ತೆ – ಯಮಲೂರು ಜಂಕ್ಷನ್ – ಯಮಲೂರು ವಿಲೇಜ್ ಮೂಲಕ ಯಮಲೂರು ಕೋಡಿ – ಬೆಳ್ಳಂದೂರು ಕೋಡಿ ಬಲ ತಿರುವು ಪಡೆದು ಬೆಳ್ಳಂದೂರು ವಿಲೇಜ್ ಮಾರ್ಗವಾಗಿ ಹೊರವರ್ತುಲ ರಸ್ತೆ ಕಡೆಗೆ ಸಂಚರಿಸಬಹುದಾಗಿದೆ.
ದೇವರಬೀಸನಹಳ್ಳಿ ಮತ್ತು ಬೆಳ್ಳಂದೂರು ಕಡೆಯಿಂದ ನಗರದ ಕಡೆಗೆ ಸಂಚರಿಸುವವರು ಹೊರವರ್ತುಲ ರಸ್ತೆ ಕಾಡುಬೀಸನಹಳ್ಳಿ ಬ್ರಿಡ್ಜ್ ಮಾರತ್ತಹಳ್ಳಿ ಬ್ರಿಡ್ಜ್ ಮೇಲೆ ಎಡ ತಿರುವು ಪಡೆದು ಯಮಲೂರು ಜಂಕ್ಷನ್ ಹಳೆ ವಿಮಾನ ನಿಲ್ದಾಣ ರಸ್ತೆ ಮೂಲಕ ನಗರದ ಕಡೆಗೆ ಸಂಚರಿಸಬಹುದಾಗಿದೆ.
ಕಾಡುಬೀಸನಹಳ್ಳಿ ಮತ್ತು ದೇವರಬೀಸನಹಳ್ಳಿ ಕಡೆಯಿಂದ ನಗರದ ಕಡೆಗೆ ಸಂಚರಿಸುವವರು ಕರಿಯಮ್ಮನ ಅಗ್ರಹಾರ – ಯಮಲೂರು ಕೋಡಿಯಲ್ಲಿ ಬಲ ತಿರುವು ಪಡೆದು ಯಮಲೂರು ವಿಲೇಜ್ ಮಾರ್ಗವಾಗಿ ಯಮಲೂರು ಜಂಕ್ಷನ್ ಹಳೆ ವಿಮಾನ ನಿಲ್ದಾಣ ರಸ್ತೆ ಮಾರ್ಗವಾಗಿ ನಗರದ ಕಡೆಗೆ ಸಂಚರಿಸಬಹುದಾಗಿದೆ.
ಬೆಂಗಳೂರಿನ ಈ ರಸ್ತೆಯಲ್ಲಿ ಎರಡು ತಿಂಗಳು ವಾಹನ ಸಂಚಾರ ಇಲ್ಲ.
Previous Articleಮಹಾರಾಷ್ಟ್ರದಲ್ಲಿ ಕಮಾಲ್ ಮಾಡುತ್ತಾರಾ ಸಿಎಂ, ಡಿಸಿಎಂ.
Next Article ಮುಡಾದಲ್ಲಿ ಭಾರಿ ಕರ್ಮಕಾಂಡ.