ಬೆಂಗಳೂರು,ಆ.1:
ಧೂಮಪಾನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಅದರ ಕಡಿಮೆ ಮಾಡಲು ಪ್ರಯತ್ನಿಸುತ್ತಿರುವ ಸರ್ಕಾರ ಇದೀಗ ಧೂಮಪಾನಿಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ನಿರ್ಮಿಸಲು ತೀರ್ಮಾನಿಸಿದೆ.
ಧೂಮಪಾನಿಗಳಿಗಿಂತ ಅವರು ಸೇದಿ ಬಿಡುವ ಹೊಗೆಯಿಂದ ಅವರ ಅಕ್ಕ ಪಕ್ಕದವರ ಮೇಲೆ ಗಂಭೀರ ರೀತಿಯ ಪರಿಣಾಮಗಳು ಉಂಟಾಗುತ್ತಿದೆ ಹೀಗಾಗಿ ಜನನಿ ಬಿಡ ಪ್ರದೇಶಗಳಲ್ಲಿ ಧೂಮಪಾನ ಕಾನೂನು ಬಾಹಿರ ಕೃತ್ಯ ಎಂದು ಘೋಷಿಸಿರುವ ಸರ್ಕಾರ ಇದೀಗ ಧೂಮಪಾನಿಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ನಿರ್ಮಿಸಲು ಸೂಚಿಸಿದೆ.
ಪ್ರಮುಖವಾಗಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಧೂಮಪಾನ ನಡೆಯುವ ಬಾರ್ ಅಂಡ್ ರೆಸ್ಟೋರೆಂಟ್,ಪಬ್ ಮತ್ತು ವಸತಿ ಸಹಿತ ಹೋಟೆಲ್ ಗಳಲ್ಲಿ ಧೂಮಪಾನಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ವ್ಯಸನಿಗಳು ಅಲ್ಲಿಯೇ ಕಡ್ಡಾಯವಾಗಿ ಧೂಮಪಾನ ಮಾಡಬೇಕು. ಈ ಮೂಲಕ ಧೂಮಪಾನಿಗಳಿಂದ ಬೇರೆಯವರಿಗೆ ಆಗುವ ಹಾನಿ ತಡೆಗಟ್ಟಬಹುದು ಎಂದು ಕೋರ್ಟ್ ಆದೇಶ ಆಧರಿಸಿ ಸರ್ಕಾರ ನಿಯಮಾವಳಿಗಳನ್ನು ರೂಪಿಸಿದೆ.
ಈ ನಿಯಮಗಳನ್ನು ಪಾಲಿಸದ ಹೋಟೆಲ್, ಬಾರ್ ಮತ್ತು ಪಬ್ ಗಳ ಪರವಾನಗಿ ರದ್ದು ಸೇರಿದಂತೆ ಕಾನೂನು ಕ್ರಮದ ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರಿನ ಹಲವು ಕಡೆಗಳಲ್ಲಿ ಈ ನಿಯಮ ಪಾಲಿಸಲಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು ನಿಯಮ ಪಾಲಿಸದ ಹೋಟೆಲ್ ಮತ್ತು ಪಬ್ಬುಗಳ ಪಟ್ಟಿ ತಯಾರಿಸಿದ್ದಾರೆ.
ಇದನ್ನು ಆಧರಿಸಿ ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿರುವ 200ಕ್ಕೂ ಅಧಿಕ ಬಾರ್, ಪಬ್ ಹಾಗೂ ಹೊಟೇಲ್‌ಗಳಿಗೆ ನೋಟಿಸ್ ನೀಡಲಾಗಿದ್ದು ತಕ್ಷಣವೇ ಸ್ಮೋಕಿಂಗ್ ಜೋನ್ ನಿರ್ಮಾಣ ಮಾಡಬೇಕು ಇಲ್ಲವಾದರೆ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಸಲಾಗಿದೆ.
ಈ ಮೂಲಕ 20ಕ್ಕಿಂತ ಹೆಚ್ಚು ಆಸನಗಳಿರುವ ಎಲ್ಲಾ ಹೋಟೆಲ್‌ಗಳಲ್ಲಿ ಸ್ಮೋಕಿಂಗ್ ಝೋನ್‌ನ್ನು ನಿರ್ಮಿಸಬೇಕು ಎಂದು ಸೂಚಿಸಲಾಗಿದೆ
ಬೆಂಗಳೂರಿನ PUB ಮತ್ತು Bar ಗಳ ಲೈಸೆನ್ಸ್ ರದ್ದಾಗಲಿದೆಯಾ.?
Previous Articleಬೆಂಗಳೂರಿನಲ್ಲಿ ಅಡಗಿದ್ದ ಆಲ್ ಖೈದಾ ನಾಯಕಿ
Next Article C.M.ಭಯೋತ್ಪಾದಕ ಕೃತ್ಯ ಎಂದ ಘಟನೆ ಯಾವುದು ಗೊತ್ತಾ ?