ಯಾದಗಿರಿ:
ಯಾದಗಿರಿ ಜಿಲ್ಲೆಯ ಹಲವು ಕಡೆ ಬಿರುಗಾಳಿ ಮಳೆಯ ಆರ್ಭಟಿಸಿದೆ.ಬಿರುಗಾಳಿಯಿಂದಾಗಿ ಉಂಟಾದ ಭಾರಿ ಅಗ್ನಿ ಅವಘಡದಿಂದ ಜಾಲಿಬೆಂಚಿ ಗ್ರಾಮದ ಜನರು ಬೆಚ್ಚಿ ಬಿದ್ದಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ಅತ್ಯಂತ ವೇಗವಾಗಿ ಬೀಸಿದ ಬಿರುಗಾಳಿಗೆ ಮುಖ್ಯ ವಿದ್ಯುತ್ ಲೈನ್ ತಂತಿಗಳ ನಡುವೆ ಘರ್ಷಣೆ ಉಂಟಾಗಿದೆ.ಇದರಿಂದ ವಿದ್ಯುತ್ ಕಂಬಗಳಲ್ಲಿ ಜೋರಾದ ಸದ್ದಿನೊಂದಿಗೆ ಬೆಂಕಿ ಹೊತ್ತಿಕೊಂಡಿದೆ.
ಸಂಜೆ ವೇಳೆ ಏಕಾಏಕಿ ಉಂಟಾದ ಭಾರಿ ಪ್ರಮಾಣದ ಗಾಳಿಯಿಂದ ಇಡೀ ಗ್ರಾಮದಲ್ಲಿ ಸಂಪರ್ಕಿಸುವ ವಿದ್ಯುತ್ ತಂತಿಗಳಲ್ಲಿ ಕಾಣಿಸಿಕೊಂಡ ಬೆಂಕಿಯಿಂದ
ಮನೆ ಮೇಲೆ ವಿದ್ಯುತ್ ತಂತಿ ಬಿದ್ದಿವೆ.
ಇದರಿಂದ ಬೆಚ್ಚಿದ ಜನರು ಎದ್ನೋ ಬಿದ್ನೋ ಎನ್ನುವ ಹಾಗೆ ಮನೆಯಿಂದ ಓಡಿ ಹೊರಗೆ ಬಂದಿದ್ದಾರೆ
ಸ್ಥಳಕ್ಕೆ ಅಗ್ನಿಶಾಮಕ ದಳ ಸುರಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Previous Articleಹೊಸ ವಿಮಾನ ನಿಲ್ದಾಣಕ್ಕೆ ತಕರಾರು
Next Article ಅಮೇರಿಕಾದ ವೇಶ್ಯಾವಾಟಿಕಯಲ್ಲಿ ಸಿಕ್ಕಿ ಬಿದ್ದ ಭಾರತೀಯ