ರಾಮನಗರ : ಜಿಲ್ಲಾದ್ಯಂತ ಗುಡುಗು ಸಹಿತ ಧಾರಕಾರ ಮಳೆಗೆ ಜನತೆ ತತ್ತರಗೊಂಡಿದ್ದಾರೆ. ಬಿರು ಬಿಸಿಲಿನ ಧಗೆಗೆ ಹೈರಾಣಾಗಿದ್ದ ಜನರಿಗೆ ಸುರಿದ ಧಾರಾಕಾರ ಗುಡುಗು ಮಿಂಚು ಬಿರುಗಾಳಿ ಸಹಿತ ಮಳೆಗೆ ಜಿಲ್ಲೆಯ ಜನರು ಹೈರಾಣಾಗಿದ್ದಾರೆ.
ವರುಣನ ಆರ್ಭಟಕ್ಕೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಹೊಲ, ರಸ್ತೆಗುಂಡಿಗಳಲ್ಲೂ ತುಂಬಿದ ಮಳೆ ನೀರು ತುಂಬಿಕೊಂಡಿದೆ. ಸುಮಾರು ಎರಡು ತಾಸಿಗೂ ಅಧಿಕ ಸುರಿದ ಮಳೆಯು ಬಿಡದಿಯ ನಾರಾಯಣ, ಕುಮಾರ್ ಹಾಗು ವೆಂಕಟರಮಣಪ್ಪ ಎಂಬುವರ ಕುರಿ ಹಾಗು ಮೇಕೆ ವರುಣನ ಅಬ್ಬರಕ್ಕೆ ಸಿಲುಕಿ ಸಾವನ್ನಪ್ಪಿವೆ .
ಸುಮಾರು 15 ಕ್ಕೂ ಕುರಿ ಹಾಗು 6 ಮೇಕೆ ಸಾವನ್ನಪ್ಪಿದ್ದು, ಇದಲ್ಲದೆಯೇ ಗಾಳಿ ಮಳೆಗೆ ಅರಳಿಮರ ಬಿದ್ದು 10ಕ್ಕೂ ಹೆಚ್ಷು ವಿದ್ಯುತ್ ಕಂಬಗಳು ಧರೆಗೆ ಉರುಳಿದೆ. ರಾಮನಗರ – ಮಾಗಡಿ ರಸ್ತೆ ಬಳಿ ಇರುವ ಕೋನಮುದನಹಳ್ಳಿ ಗ್ರಾಮದಲ್ಲಿ ರಾತ್ರಿಯಲ್ಲಾ ವಿದ್ಯುತ್ ಇಲ್ಲದೆ ಜನತೆ ಪರದಾಡುತ್ತಿದ್ದರು.