ಸಂಗ್ರಹಗಳು
    • ಮಾರ್ಚ್ 2026
    • ಫೆಬ್ರವರಿ 2026
    • ಜನವರಿ 2026
    • ಡಿಸೆಂಬರ್ 2025
    • ನವೆಂಬರ್ 2025
    • ಅಕ್ಟೋಬರ್ 2025
    • ಸೆಪ್ಟೆಂಬರ್ 2025
    • ಆಗಷ್ಟ್ 2025
    • ಜುಲೈ 2025
    • ಜೂನ್ 2025
    • ಮೇ 2025
    • ಏಪ್ರಿಲ್ 2025
    • ಮಾರ್ಚ್ 2025
    • ಫೆಬ್ರವರಿ 2025
    • ಜನವರಿ 2025
    • ಡಿಸೆಂಬರ್ 2024
    • ನವೆಂಬರ್ 2024
    • ಅಕ್ಟೋಬರ್ 2024
    • ಸೆಪ್ಟೆಂಬರ್ 2024
    • ಆಗಷ್ಟ್ 2024
    • ಜುಲೈ 2024
    • ಜೂನ್ 2024
    • ಮೇ 2024
    • ಏಪ್ರಿಲ್ 2024
    • ಮಾರ್ಚ್ 2024
    • ಫೆಬ್ರವರಿ 2024
    • ಜನವರಿ 2024
    • ಡಿಸೆಂಬರ್ 2023
    • ನವೆಂಬರ್ 2023
    • ಅಕ್ಟೋಬರ್ 2023
    • ಸೆಪ್ಟೆಂಬರ್ 2023
    • ಆಗಷ್ಟ್ 2023
    • ಜುಲೈ 2023
    • ಜೂನ್ 2023
    • ಮೇ 2023
    • ಏಪ್ರಿಲ್ 2023
    • ಮಾರ್ಚ್ 2023
    • ಫೆಬ್ರವರಿ 2023
    • ಜನವರಿ 2023
    • ಡಿಸೆಂಬರ್ 2022
    • ನವೆಂಬರ್ 2022
    • ಅಕ್ಟೋಬರ್ 2022
    • ಸೆಪ್ಟೆಂಬರ್ 2022
    • ಆಗಷ್ಟ್ 2022
    • ಜುಲೈ 2022
    • ಜೂನ್ 2022
    • ಮೇ 2022
    • ಏಪ್ರಿಲ್ 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮಾಂಸಹಾರದಿಂದ ಕ್ಯಾನ್ಸರ್ ಉಲ್ಬಣ !
    ಸುದ್ದಿ

    ಮಾಂಸಹಾರದಿಂದ ಕ್ಯಾನ್ಸರ್ ಉಲ್ಬಣ !

    vartha chakraBy vartha chakraಏಪ್ರಿಲ್ 16, 2022Updated:ಏಪ್ರಿಲ್ 16, 2022ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಜೀವನ ಶೈಲಿಗೆ ತಕ್ಕಂತೆ ಮನುಷ್ಯನ ಆಹಾರ ಪದ್ಧತಿಗಳು ಬದಲಾಗುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಯಾವ ರೀತಿಯ ಆಹಾರ ಸೇವನೆ ಉತ್ತಮ ಎಂಬ ವಿಚಾರ ಜಾಗತಿಕ ಚರ್ಚೆಗಳಿಗೂ ಗ್ರಾಸವಾಗಿದೆ. ಈ ನಡುವೆ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯವು ಮಾಂಸಹಾರ ಸೇವನೆಯೂ ಕ್ಯಾನ್ಸರ್ ಉಲ್ಬಗೊಳಿಸುವಲ್ಲಿ ಹೆಚ್ಚಿನ ಪಾತ್ರವಹಿಸುತ್ತದೆ ಎಂಬ ಆತಂಕಕಾರಿ ಸಂಶೋಧನೆಯನ್ನು ಬಹಿರಂಗಪಡಿಸಿದ್ದು, ಈಗ ಮತ್ತೆ ಮಾಂಸಹಾರ ಸೇವನೆ ಉತ್ತಮವೋ ಅಥವ ಸಸ್ಯಹಾರವೋ ಎಂಬ ಚರ್ಚೆಗೆ ಇಂಬು ನೀಡಿದಂತಾಗಿದೆ. ಸಂಶೋಧನೆ ಹೇಳುವುದೇನು? ಯಾವ ಆಹಾರ ಪದ್ಧತಿ ಉತ್ತಮ? ಎಂಬುದರ ವಿವರ ಇಲ್ಲಿದೆ.

    ಸಂಶೋಧನೆಯ ಉದ್ದೇಶವೇನು ?

    ವರ್ಲ್ಡ್ ಕ್ಯಾನ್ಸರ್ ರಿಸರ್ಚ್ ಫಂಡ್ ಮತ್ತು ಕ್ಯಾನ್ಸರ್ ರಿಸರ್ಚ್ ಬ್ರಿಟನ್‌ನ ಧನ ಸಹಾಯದೊಂದಿಗೆ ನಡೆಸಿದ ಅತಿದೊಡ್ಡ ಸಂಶೋಧನೆ ಇದಾಗಿದ್ದು, ಕರುಳಿನ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಸೇರಿದಂತೆ ಕ್ಯಾನ್ಸರ್‌ಗಳ ಉಲ್ಬಣದಲ್ಲಿ ಮಾಂಸಹಾರ ಹಾಗೂ ಸಸ್ಯಹಾರದ ಪಾತ್ರವನ್ನು ನಿರ್ಣಯಿಸಲು ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಕ್ಯಾನ್ಸರ್‌ ಸಾಂಕ್ರಾಮಿಕ ಘಟಕದ ಸಂಶೋಧಕರು ಈ ಅಧ್ಯಯನ ಕೈಗೆತ್ತಿಕೊಂಡಿದ್ದರು.

    ಪ್ರಕ್ರಿಯೆ ಹೇಗಿತ್ತು?

    2006 ಮತ್ತು 2010ರ ನಡುವೆ ಯುಕೆ ಬಯೋಬ್ಯಾಂಕ್‌ನಿಂದ ಸಂಗ್ರಹಿಸಿದ 4,27,000 ಕ್ಕೂ ಹೆಚ್ಚು ಬ್ರಿಟಿಷ್ ವಯಸ್ಕರ ದತ್ತಾಂಶವನ್ನು ಸಂಶೋಧನೆ ಆಧರಿಸಿದೆ. ಸಂಶೋಧನೆಗೆ ಒಳಪಡಿಸಿದ ವ್ಯಕ್ತಿಗಳ ನೇಮಕಾತಿ ಸಂದರ್ಭದಲ್ಲಿ ಅವರಿಗೆ ಕ್ಯಾನ್ಸರ್ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ.  ಅಲ್ಲದೇ, ಅವರ ಆಹಾರ ಪದ್ಧತಿಗಳಿಗೆ ಅನುಗುಣವಾದ ಪ್ರಶ್ನೆಗಳನ್ನು ಕೇಳಿ ಆ ಆಧಾರದಲ್ಲೇ ಭಾಗವಹಿಸುವವರನ್ನು 4 ವರ್ಗವಾಗಿ  ವರ್ಗೀಕರಿಸಲಾಗಿತ್ತು.

    ಗುಂಪು 1: ನಿಯಮಿತ ಮಾಂಸ ಸೇವನೆ (ವಾರಕ್ಕೆ ಐದು ಬಾರಿ)

    ಗುಂಪು 2: ಕಡಿಮೆ ಪ್ರಮಾಣದ ಮಾಂಸ ಸೇವನೆ (ವಾರಕ್ಕೆ ಐದು ಬಾರಿಗಿಂತ ಕಡಿಮೆ)

    ಗುಂಪು 3: ಪೆಸ್ಕಟೇರಿಯನ್ಸ್ (ಮೀನು ಮತ್ತು ಸಸ್ಯ ಆಧಾರಿತ ಆಹಾರ ಸೇವಿಸುವವರು)

    ಗುಂಪು 4: ಸಸ್ಯಾಹಾರಿಗಳು (ಮಾಂಸ ಮುಕ್ತ ಆಹಾರ)

    ಸಂಶೋಧನೆ ಹೇಳಿದ್ದೇನು?

     ಸತತ 11.4 ವರ್ಷಗಳ ಅನುಸರಣೆಯ ಬಳಿಕ 54.961 ಕ್ಯಾನ್ಸರ್ ಪ್ರಕರಣಗಳನ್ನು ಗುರುತಿಸಲಾಗಿದ್ದು ಇದರಲ್ಲಿ  5882 ಕರುಳು ಸಂಬಂಧಿತ ಕ್ಯಾನ್ಸರ್ ಪ್ರಕರಣಗಳು, 7537 ಸ್ತನ ಕ್ಯಾನ್ಸರ್, 9501 ಪ್ರಾಸ್ಟೇಟ್ ಕ್ಯಾನ್ಸರ್‌ಗಳು ಸೇರಿವೆ ಎಂದು ಸಂಶೋಧನೆ ಬಹಿರಂಗಪಡಿಸಿದೆ.

    ಯಾರಿಗೆ ಎಷ್ಟು ಅಪಾಯ ?

    ನಿಯಮಿತ ಮಾಂಸ ಸೇವನೆ (ವಾರಕ್ಕೆ 5 ಬಾರಿ) ಮಾಡುವವರಿಗೆ ಹೋಲಿಸಿದರೆ ಕಡಿಮೆ ಮಾಂಸ ತಿನ್ನುವವರು, ಮೀನು ತಿನ್ನುವವರು ಮತ್ತು ಸಸ್ಯಾಹಾರಿಗಳಿಗೆ ಕ್ಯಾನ್ಸರ್ ಅಪಾಯ ಕಡಿಮೆ ಇದೆ. ಅಲ್ಲದೇ, ಕಡಿಮೆ ಮಾಂಸ ಸೇವನೆ ಮಾಡುವವರಲ್ಲಿ ಕರುಳು ಸಂಬಂಧ ಕ್ಯಾನ್ಸರ್ ಅಪಾಯವೂ ಕಡಿಮೆ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇದಲ್ಲದೇ ಸಸ್ಯಹಾರಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ವರದಿಯಾಗಿರುವುದು ಕಡಿಮೆ ಆದಾಗ್ಯೂ ತೂಕ ಅಥವಾ ಬೊಜ್ಜು ಹೊಂದಿರುವವರು ಸಸ್ಯಹಾರಿಯಾಗಿದ್ದರೂ ಅವರಿಗೆ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ. ಆದಾಗ್ಯೂ ಯಾವುದೇ ವ್ಯಕ್ತಿಯ ದೇಹದ ತೂಕ ಕೂಡ ಕ್ಯಾನ್ಸರ್‌ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದು ಹೇಳಲಾಗಿದೆ. ಇನ್ನು ಪುರುಷರಲ್ಲಿ ವರದಿಯಾಗುವ ಪ್ರಾಸ್ಟೇಟ್ ಕ್ಯಾನ್ಸರ್ ಮೀನು ಹಾಗೂ ಸಸ್ಯಹಾರಿಗಳಲ್ಲಿ ಕಡಿಮೆ ವರದಿಯಾಗುತ್ತಿದೆ. ಈ ಕ್ಯಾನ್ಸರ್‌ಗೆ ಆಹಾರ ಪದ್ಧತಿಯ ಜತೆಗೆ ಧೂಮಪಾನದಂತಹ ಇತರ ಅಂಶಗಳು ಕೂಡ ಕಾರಣವಾಗಬಹುದು ಎಂದು ಸಂಶೋಧನೆ ಹೇಳಿದೆ.

    ಪರಿಹಾರವೇನು?      

    •ನಿರ್ದಿಷ್ಟ ಆಹಾರ ಪದ್ಧತಿ, ಕಡಿಮೆ ಮಾಂಸಹಾರ ಸೇವನೆ ಅಥವಾ ಸಸ್ಯಾಹಾರಿ ಆಹಾರವನ್ನು ಅನುಸರಿಸುವುದು, ಕೆಲ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    •ಕೆಂಪು ಮತ್ತು ಸಂಸ್ಕರಿಸಿದ ಮಾಂಸದ ಸೇವನೆಯನ್ನು ಸೀಮಿತಗೊಳಿಸುವುದು ಮತ್ತು ತಾಜಾ ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಬೇಳೆಕಾಳುಗಳಂತಹ ಸಂಪೂರ್ಣ ಆಹಾರವನ್ನು ಹೆಚ್ಚು ಸೇವಿಸುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಮತ್ತು ರೋಗ ಮುಕ್ತ ಜೀವನವನ್ನು ನಡೆಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ

    ಭಾರತೀಯರಲ್ಲಿ ಕ್ಯಾನ್ಸರ್ ಕಡಿಮೆ !

    ವಿಶ್ವದಲ್ಲಿ ಭಾರತೀಯರು ಏಕೆ ಕಡಿಮೆ ಮಟ್ಟದ ಕ್ಯಾನ್ಸರ್ ಪ್ರಕರಣಗಳನ್ನು ಹೊಂದಿದ್ದಾರೆಂದು ಪಾಶ್ಚಿಮಾತ್ಯರು ಸಂಶೋಧೀಸಿದ್ದಾರೆ ಮತ್ತು ನಮ್ಮ ಪೂರ್ವಜರು ಸೂಚಿಸಿದ ಮತ್ತು ನಾವು ಸೇವಿಸಿದ ಆಹಾರವೇ ನಮ್ಮ ಆರೋಗ್ಯಕ್ಕೆ ಪ್ರಮುಖ ಕಾರಣ ಎಂದು ಕಂಡುಕೊಂಡಿದ್ದಾರೆ. ಅಲ್ಲದೇ, ಭಾರತದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಪದಾರ್ಥ ಎನ್ನಲಾಗಿರುವ ಅರಿಶಿಣ ಹೆಚ್ಚು ಪರಿಣಾಮಕಾರಿಯಾಗಿದ್ದು, ಅರಿಶಿಣವನ್ನು ಆಹಾರದಲ್ಲಿ ವ್ಯಾಪಕವಾಗಿ ಬಳಸುವ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಕೂಡ ಕ್ಯಾನ್ಸರ್ ಪ್ರಮಾಣ ಕಡಿಮೆ ಇದೆ ಎಂದು ಜನಸಂಖ್ಯೆ ಆಧರಿತ ದತ್ತಾಂಶ ಬಹಿರಂಗ ಪಡಿಸಿದೆ.

    Verbattle
    Verbattle
    Verbattle
    Share. Facebook Twitter Pinterest LinkedIn Tumblr Email WhatsApp
    Previous Articleಗರ್ಭಿಣಿಯರ ಕಾಡುವ ಹೈಪರ್‌ಮೆಸಿಸ್‌ ಗ್ರಾವಿಡಾರಮ್‌
    Next Article ಮದ್ಯ ಸೇವನೆ ಮಿದುಳಿಗೆ ರೋಧನೆ!
    vartha chakra
    • Website

    Related Posts

    IPL ಇತಿಹಾಸದಲ್ಲೇ ಮೆಗಾ ಡೀಲ್!

    ಮಾರ್ಚ್ 27, 2026

    ಎದುರಾಳಿಗಳಿಗೆ ಅಸ್ತ್ರ ಸಿಗದಂತೆ ಮಮತಾ ಬ್ಯಾನರ್ಜಿ ಮಾಸ್ಟರ್ ಪ್ಲಾನ್!

    ಮಾರ್ಚ್ 26, 2026

    ಯೋಧನಿಗೆ ಬಂತು ಸಂಕಷ್ಟ!

    ಮಾರ್ಚ್ 25, 2026

    Comments are closed.

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ನೇಪಾಳ ಮಾಜಿ ಪ್ರಧಾನಿ ಬಂಧನ

    ಶಾಲೆಯ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಸ್ಥಳೀಯರು!

    15ರ ಹರೆಯದ ವೈಭವ್ ಸೂರ್ಯವಂಶಿ: ಭಾರತೀಯ ಕ್ರಿಕೆಟ್‌ನ ಹೊಸ ಸಂಚಲನ!

    ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬಿಗ್ ಅಪ್ಡೇಟ್!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • RalphUnoto ರಲ್ಲಿ ವಲಸಿಗರ ನಡುವೆ ಜಿದ್ದಾಜಿದ್ದಿನ ಪೈಪೋಟಿ (ಚಿತ್ರದುರ್ಗ ಲೋಕಸಭಾ ಕ್ಷೇತ್ರ) | Chitradurga
    • Williamdix ರಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ್ ಗೆ ಪೊಲೀಸ್ ಹುಡುಕಾಟ
    • Betsson ರಲ್ಲಿ ಹುಡುಕಿಕೊಟ್ಟರೆ 10 ಲಕ್ಷ ರೂಪಾಯಿ ಬಹುಮಾನ | Rameshwaram Cafe Blast
    Latest Kannada News

    ನೇಪಾಳ ಮಾಜಿ ಪ್ರಧಾನಿ ಬಂಧನ

    ಮಾರ್ಚ್ 28, 2026

    ಶಾಲೆಯ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಸ್ಥಳೀಯರು!

    ಮಾರ್ಚ್ 28, 2026

    15ರ ಹರೆಯದ ವೈಭವ್ ಸೂರ್ಯವಂಶಿ: ಭಾರತೀಯ ಕ್ರಿಕೆಟ್‌ನ ಹೊಸ ಸಂಚಲನ!

    ಮಾರ್ಚ್ 28, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.