ಬೆಂಗಳೂರು,ಡಿ.25-ಗ್ಯಾರಂಟಿ ಯೋಜನೆಗಳಿಗೆ ಅನುದಾನ ಹಂಚಿಕೆ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆಯ ಜೊತೆಗೆ ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ತಮ್ಮ ಕನಸಿನ ಬಜೆಟ್ ಮಂಡನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಯಾರಿ ಆರಂಭಿಸಿದ್ದಾರೆ.
ಹಣಕಾಸು ಮಂತ್ರಿಯಾಗಿ ದಾಖಲೆ ಬಜೆಟ್ ಗಳನ್ನು ಮಂಡಿಸಿರುವ ಅವರು ಇದೀಗ ಮಾರ್ಚ್ 14ರಂದು ತಮ್ಮ ಮತ್ತೊಂದು ಬಜೆಟ್ ಮಂಡಿಸಲು ತೀರ್ಮಾನಿಸಿದ್ದಾರೆ.
ಬರುವ ಫೆಬ್ರವರಿ ಒಂದರಂದು ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ .ಅದನ್ನು ನೋಡಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 14ರಂದು ರಾಜ್ಯ ಬಜೆಟ್ ಮಂಡಿಸುತ್ತಿದ್ದಾರೆ. ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶ ಮಾರ್ಚ್ 10 ರಿಂದ ಆರಂಭವಾಗಲಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಿಗಾಗಿ 56 ಸಾವಿರ ಕೋಟಿ ತೆಗೆದಿರಿಸಬೇಕಾದ ಒತ್ತಡಕ್ಕೆ ಸಿಲುಕಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಬಾರಿ 4 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸುವ ಸಾಧ್ಯತೆ ಇದೆ.
ಆದಷ್ಟು ಶೀಘ್ರ ಬಜೆಟ್ ಪೂರ್ವಭಾವಿ ಸಭೆಗಳನ್ನು ಆರಂಭಿಸಲು ನಿರ್ಧರಿಸಿದ್ದು ಸೋಮವಾರದಿಂದ ಇಲಾಖಾವಾರು ಪ್ರಗತಿಪರಿಸಿದನೆ ನಡೆಸಲಿದ್ದಾರೆ.
Previous Articleಸಿಟಿ ರವಿಯ ಕೊಳಕು ತೊಳೆಯಲು ಸಾಧ್ಯವಿಲ್ಲವಂತೆ.
Next Article ಮೊಟ್ಟೆ ಅಟ್ಯಾಕ್ ಚಿತ್ರಕತೆ ಯಾರದ್ದು ಗೊತ್ತಾ.