ಬೆಳಗಾವಿ,ಡಿ.18:
ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಮಂತ್ರಿ ಹಾಗೂ ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಹೊಸ ಬೇಡಿಕೆ ಯೊಂದನ್ನು ಮಂಡಿಸುವ ಮೂಲಕ ವಿವಾದಕ್ಕೆ ಮತ್ತೊಂದು ಸ್ವರೂಪ ನೀಡಿದ್ದಾರೆ.
ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಂತೆ ನಡೆಯುತ್ತಿದ್ದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಿ ಎಂದು ನೀಡಿದ ಹೇಳಿಕೆಯನ್ನು ಬಲವಾಗಿ ಖಂಡಿಸಿದರು
ಮಹಾರಾಷ್ಟ್ರದ ಮತಿಹೀನರೊಬ್ಬರು ಒಂದು ಮಾತನ್ನು ಹೇಳಿದ್ದರು. ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಿ ಎಂದಿದ್ದರು. ಹಾಗಾದರೆ ಮುಂಬೈ ಮೇಲೆ ನಮ್ಮ ಹಕ್ಕನ್ನು ಮಂಡನೆ ಮಾಡಬೇಕಾಗುತ್ತದೆ,” ಎಂದು ಎಚ್ಚರಿಸಿದರು
ಮಹಾರಾಷ್ಟ್ರ ರಾಜಧಾನಿ ಮುಂಬೈ ಮೇಲೆ ನಮಗೂ ಹಕ್ಕಿದೆ ಅಲ್ಲಿ ಅನೇಕರು ಕನ್ನಡಿಗರಿದ್ದಾರೆ ಹೀಗಾಗಿ ಮುಂಬೈಯನ್ನು ಕರ್ನಾಟಕಕ್ಕೆ ಬಿಟ್ಟು ಬಿಡಿ, ಸದ್ಯಕ್ಕೆ ಅದನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆ ಮಾಡಬೇಕಿದೆ ಎಂದು ಆಗ್ರಹಿಸಿದರು
ರಾಜ್ಯ ಸರ್ಕಾರ ಈ ಕುರುತಂತೆ ನಿರ್ಣಯವನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಈ ಮನವಿ ಮಾಡಬೇಕು ಮುಂಬೈಯನ್ನು ಕರ್ನಾಟಕಕ್ಕೆ ಬಿಟ್ಟು ಬಿಡಿ ಎಂದು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸೋಣ. ಮುಂಬೈ ಬಗ್ಗೆ ನಮಗೂ ಹಕ್ಕು ಇದೆ ಎಂದು ಪ್ರತಿಪಾದಿಸಬೇಕಿದೆ ಆಗ ಇಂತಹ ತಂಟೆಗಳಿಗೆ ಪಕ್ಕ ಉತ್ತರ ದೊರಕಲಿದೆ ಎಂದು ಹೇಳಿದರು
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ನಾವು ಘೋಷಣೆ ಮಾಡಿದ್ದೇವೆ. ಮಹಾಜನ್ ಆಯೋಗ ವರದಿ ಕೂಡಾ ಒಪ್ಪಿದೆ ಆದರೂ ಕೂಡ ಕೆಲವು ಕಿಡಿಗೇಡಿಗಳು ಈ ವಿಷಯವನ್ನು ಪದೇಪದೇ ಪ್ರಸ್ತಾಪಿಸುವ ಮೂಲಕ ಗಡಿ ಪ್ರದೇಶದಲ್ಲಿ ಅಶಾಂತಿ ಮೂಡಿಸಲು ಆಪಾದಿಸಿದರು.
Previous Articleಸ್ವರ್ಗ ಸಿಗಬೇಕಾದರೆ ಏನು ಮಾಡಬೇಕೆಂದು ಅಮಿತ್ ಶಾ ಗೆ ಸಿಎಂ ಸಲಹೆ.
Next Article ಪ್ರಧಾನಿ ಮೋದಿ – ವಿಜಯೇಂದ್ರ ಮುಖಾಮುಖಿ.