Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ದಿಂಗಾಲೇಶ್ವರ ಶ್ರೀಗಳು ಹೇಳಿದ್ದು ಏನು?
    ಸುದ್ದಿ

    ದಿಂಗಾಲೇಶ್ವರ ಶ್ರೀಗಳು ಹೇಳಿದ್ದು ಏನು?

    vartha chakraBy vartha chakraಏಪ್ರಿಲ್ 18, 2022Updated:ಏಪ್ರಿಲ್ 19, 2022ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಹುಬ್ಬಳ್ಳಿ : ರಾಜ್ಯದಲ್ಲಿ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ವ್ಯಾಪಕವಾಯಿತು. ಇದು ನಂತರದ ದಿನಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಗೂ ಕಾರಣವಾಯಿತು ಎಂದು ವಿಷ್ಲೇಶಿಸಲಾಯಿತು. ಆದರೆ ಅಂದು ಪ್ರತ್ಯೇಕ ಲಿಂಗಾಯತ ಹೋರಾಟದ ಮುಂಚೂಣಿಯಲ್ಲಿ ಗದಗಿನ ಲಿಂ. ತೋಂಟದ ಸಿದ್ಧಲಿಂಗ ಶ್ರೀಗಳಿದ್ದರು. ಆದರೆ ಇದಕ್ಕೆ ವಿರೋಧವಾಗಿದ್ದ ವೀರೈಶೈವ ಮಠಾಧೀಶರ ತಂಡಕ್ಕೆ ಮುಂಚೂಣಿಯಲ್ಲಿ ಈಗಿನ ಶಿರಹಟ್ಟಿ ಫಕೀರೇಶ್ವರ ಮಠದ ಫಕೀರ ದಿಂಗಾಲೇಶ್ವರ ಶ್ರೀಗಳಿದ್ದರು. ಆದರೆ ದಿಂಗಾಲೇಶ್ವರ ಶ್ರೀಗಳ ವಿರೋಧ ತೋಂಟದ ಸಿದ್ಧಲಿಂಗ ಶ್ರೀಗಳು ಲಿಂಗೈಕ್ಯರಾದರೂ ಇನ್ನು ಮುಗಿದಿಲ್ಲ ಎನ್ನುವುದು ಸ್ವತ: ದಿಂಗಾಲೇಶ್ವರ ಶ್ರೀಗಳ ಮಾತಿನಿಂದ ಗೊತ್ತಾಗುತ್ತಿದೆ.
    ಲಿಂಗೈಕ್ಯ ತೋಂಟದ ಸಿದ್ದಲಿಂಗ ಶ್ರೀಗಳ ದಿನವನ್ನು ಭಾವೈಕ್ಯತೆ ದಿನವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದು, ಯಾರದೋ ಮನವಿಗೆ ಬೆಲೆ ಕೊಟ್ಟು ಹೇಳಿಕೆ ನೀಡಿರುವುದು ಬಹಳ ನೋವಿನ ಸಂಗತಿಯಾಗಿದೆ ಎಂದು ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನಮಠದ ಜಗದ್ಗುರು ಫಕೀರ ದಿಂಗಾಲೇಶ್ವರ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದ್ದು ಇದಕ್ಕೆ ಕಾರಣವಾಗಿದೆ.
    ನಾಡಿನ ನೆಲ, ಜಲ, ಭಾಷೆ, ಭಾವೈಕ್ಯತೆ ವಿಚಾರವಾಗಿ ತೋಂಟದ ಸಿದ್ಧಲಿಂಗ ಶ್ರೀಗಳ ಕೊಡುಗೆ ಅಪಾರ ಹಾಗು ಅನನ್ಯ. ಆದಾಗ್ಯೂ ತಾತ್ವಿಕ ಭಿನ್ನಾಭಿಪ್ರಾಯಗಳು ಏನೇ ಇರಲಿ. ಲಿಂಗೈಕ್ಯರಾದ ಮೇಲೂ ಮುಖ್ಯ ಮಂತ್ರಿಗಳ ಹೇಳಿಕೆಗೆ ಒಂದು ಮಠದ ಭಕ್ತರಿಗೆ ಪ್ರಚೋದನೆ ನೀಡುವ ರೀತಿಯಲ್ಲಿ ಹೇಳಿದ್ದು ಎಷ್ಟು ಸರಿ? ಎನ್ನುವುದು ಸಾರ್ವಜನಿಕ ವಲಯದ ಪ್ರಶ್ನೆಯಾಗಿದೆ.
    ಇತ್ತಿಚೆಗಷ್ಟೆ ಸಿಎಂ ಅವರು ಗದಗನಲ್ಲಿ ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳ ಐಕ್ಯಮಂಟಪ ಲೋಕಾರ್ಪಣೆ ವೇಳೆ ಸಿದ್ದಲಿಂಗ ಶ್ರೀಗಳ ಹೆಸರಲ್ಲಿ ಭಾವೈಕ್ಯ ದಿನ ಆಚರಣೆ ಹೇಳಿಕೆ ನೀಡಿದ್ದರು.
    ಆದರೆ ದಿಂಗಾಲೇಶ್ವರ ಶ್ರೀಗಳ ಹೇಳಿಕೆ ನೀಡಿದ್ದು ಆಘಾತಕಾರಿ ವಿಷಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಭಾವೈಕ್ಯತೆಯ ಹೆಸರಾಗಿದ್ದ ಶಿರಹಟ್ಟಿ ಪರಂಪರೆಯನ್ನು ಸಿಎಂ ತಿಳಿದುಕೊಂಡಿಲ್ಲ. ರಾಜ್ಯದಲ್ಲಿ ಯಾವ ಮಠಗಳು ಭಾವೈಕ್ಯತೆಗೆ ಹೆಸರಾಗಿದೆ ಎಂಬುದನ್ನು ಸಿಎಂ ನೆನಪಿಟ್ಟುಕೊಳ್ಳಬೇಕಿದೆಯಂತೆ. ಸಿಎಂ ಅವರೇ ನೀವು ಶಿರಹಟ್ಟಿ ಮಠಕ್ಕೆ ಬಹಳ ಸಲ ಬಂದಿದ್ದೀರಿ. ಯಾವುದೋ ಒತ್ತಡಕ್ಕೆ ಮಣಿದು ಈ ನಿರ್ಧಾರ ಘೋಷಿರುವುದು ಸರಿಯಲ್ಲ. ಎರಡು ವರ್ಷದ ಹಿಂದೆ ವೀರಶೈವ, ಲಿಂಗಾಯತ ಸಮುದಾಯ ಎರಡು ಭಾಗ ಎಂದು ಹೇಳುತ್ತಿದ್ದರು. ಆದರೇ ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡಿದ್ದವರನ್ನು ನೀವು ಹೇಗೆ ಭಾವೈಕ್ಯತೆ ಮೂರ್ತಿ ಅಂತ ಹೇಳುತ್ತಿರಿ? ಅಷ್ಟೇ ಅಲ್ಲದೇ ಒಂದು ಸಮುದಾಯದವರನ್ನು ಇಬ್ಭಾಗ ಮಾಡಿದವರನ್ನು ಭಾವೈಕ್ಯತೆ ಎಂದು ಹೇಗೆ ಹೇಳುತ್ತಿರಿ ಎಂಬುದು ದಿಂಗಾಲೇಶ್ವರ ಶ್ರೀಗಳ ಪ್ರಶ್ನೆಯಾಗಿದೆ.
    ನೀವು ನೀಡಿದ ಹೇಳಿಕೆ ನಮ್ಮ ಸಮಾಜಕ್ಕೆ ಕೊಡಲಿ ಪೆಟ್ಟು ಕೊಟ್ಟಂತಿದೆ. ಸದಾಕಾಲವೂ ಆರ್.ಎಸ್.ಎಸ್ ಸಂಘ ಪರಿಹಾರ ವಿರೋಧ ಮಾಡುವ ಸ್ವಾಮೀಜಿಗೆ ಹೇಗೆ ಹೊಗಳುತ್ತಿರಿ?
    ಆ ಸ್ವಾಮಿಗಳು ಆರ್.ಆರ್. ಎಸ್ ಸಂಘಪರಿವಾರವನ್ನು ವಿರೋಧ ಮಾಡುತ್ತಾ ಬಂದಿದ್ದರು. ಹೀಗಾಗಿ ಈ ಹೇಳಿಕೆಯನ್ನು ವಾಪಸ್ ಪಡೆಯಬೇಕೆಂದು ಶ್ರೀಗಳು ನುಡಿದರು. ಹೇಳಿಕೆ ವಾಪಸ್ ಪಡೆಯದಿದ್ದರೆ ನಮ್ಮ ಮುಂದಿನ ನಡೆ ಬಗ್ಗೆ ನಿರ್ಧಾರ ಮಾಡುತ್ತೇವೆ.
    ಸಿಎಂ ನೀಡಿರುವ ಹೇಳಿಕೆ ಹಿಂಪಡೆಯದಿದ್ದರೆ ಅದರ ವಿರುದ್ಧ ಹೋರಾಟ ಮಾಡುತ್ತೇವೇಂದು ಎಚ್ಚರಿಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ಗೆ ಪತ್ರ ಬರೆಯುವುದಾಗಿ ಹೇಳಿದರು.
    ಆದರೆ ಕೋಮುಸೌಹಾರ್ಧತೆಗೆ ಹೆಸರಾದ ಶಿರಹಟ್ಟಿ ಮಠಕ್ಕೆ ಪೀಠಾಧಿಪತಿಯಾದ ಮೇಲೂ ದಿಂಗಾಲೇಶ್ವರ ಶ್ರೀಗಳಿಗೆ ಸಂಘಪರಿವಾರದ ಮೇಲೆ ವ್ಯಾಮೋಹ ಹೋಗಿಲ್ಲ. ಶಿರಹಟ್ಟಿ ಮಠ ಹಿಂದೂ-ಮುಸ್ಲೀಂ ಎರಡೂ ಧರ್ಮದ ಅಚರಣೆ ಭಾವೈಕ್ಯ ಮಠ. ಹೀಗಿದ್ದಾಗ್ಯೂ ಆರ್.ಎಸ್‌.ಎಸ್.ಗೆ ವಿರೋಧ ಮಾಡಿದ್ದರಿಂದ ಸಿಎಂ ದಿನಾಚರಣೆ ಘೋಷಿಸಿದ್ದು ತಪ್ಪು ಎಂದು ಹೇಳುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಉದ್ಭವವಾಗಿದೆ.

    Verbattle
    Verbattle
    Verbattle
    #bommayi #CM #Dingaleshwara #karnataka
    Share. Facebook Twitter Pinterest LinkedIn Tumblr Email WhatsApp
    Previous Articleಕರ್ನಾಟಕ ಭ್ರಷ್ಟಾಚಾರದ ರಾಜಧಾನಿ ಆಯ್ತಾ…?
    Next Article ಎಚ್.ಡಿ.ಕೆ ಗೆ ತಿರುಗೇಟು ನೀಡಿದ ಕೇಂದ್ರ ಸಚಿವ ಜೋಶಿ
    vartha chakra
    • Website

    Related Posts

    ಅತ್ತೆಯ ಸಾವಿಗೆ ದೇವರ ಮೊರೆ ಹೋದ ಸೊಸೆ! ಹುಂಡಿಯಲ್ಲಿ ಸಿಕ್ಕ ಪತ್ರ ವೈರಲ್!!

    ಫೆಬ್ರವರಿ 24, 2026

    ನಾಯಿ ಕಚ್ಚಿದ್ದಕ್ಕೆ ಹೀಗಾ ಮಾಡಿಕೊಳ್ಳೋದು..?!

    ಫೆಬ್ರವರಿ 24, 2026

    ಬಿಜೆಪಿಯ ಅಂತಿಮ ದಿನಗಳು ಹತ್ತಿರವಾಗಿವೆ: ಚಿಕ್ಕಬಳ್ಳಾಪುರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

    ಫೆಬ್ರವರಿ 23, 2026

    Comments are closed.

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಗ್ಯಾರಂಟಿ ಯೋಜನೆಗಳ ಭರ್ಜರಿ ಯಶಸ್ಸು: ರಾಜ್ಯದಲ್ಲಿ ಗಣನೀಯವಾಗಿ ಇಳಿಕೆಯಾದ ರೈತರ ಆತ್ಮಹತ್ಯೆ ಪ್ರಕರಣ!

    ಅಮೆರಿಕದಲ್ಲಿ ಹಿಂದೂಗಳೇ ಅತ್ಯಂತ ಹೆಚ್ಚು ಸುಶಿಕ್ಷಿತರು: ಪ್ಯೂ ಸಂಶೋಧನಾ ಸಂಸ್ಥೆಯ ವರದಿಯಲ್ಲಿ ಬಹಿರಂಗ

    ಹಿಂದುಳಿದ ವರ್ಗಗಳ ಬೇಡಿಕೆ ಗೊತ್ತಾ..?

    ಅತ್ತೆಯ ಸಾವಿಗೆ ದೇವರ ಮೊರೆ ಹೋದ ಸೊಸೆ! ಹುಂಡಿಯಲ್ಲಿ ಸಿಕ್ಕ ಪತ್ರ ವೈರಲ್!!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Mwqmdb ರಲ್ಲಿ ಮಾನವೀಯತೆ ಮೆರೆದ ಮಂತ್ರಿ ಹೆಬ್ಬಾಳ್ಕರ್ | Lakshmi Hebbalkar
    • Edwardwromi ರಲ್ಲಿ ಜನವರಿ 26ಕ್ಕೆ ಬದಲಾವಣೆ ಮುನ್ಸೂಚನೆ ನೀಡಿದ ಪರಮೇಶ್ವರ್!
    • Tayloradvag ರಲ್ಲಿ ಬಾಲಿವುಡ್ ಬೆಡಗಿ ತಮನ್ನಾ ಗೆ 6.2 ಕೋಟಿ !
    Latest Kannada News

    ಗ್ಯಾರಂಟಿ ಯೋಜನೆಗಳ ಭರ್ಜರಿ ಯಶಸ್ಸು: ರಾಜ್ಯದಲ್ಲಿ ಗಣನೀಯವಾಗಿ ಇಳಿಕೆಯಾದ ರೈತರ ಆತ್ಮಹತ್ಯೆ ಪ್ರಕರಣ!

    ಫೆಬ್ರವರಿ 24, 2026

    ಅಮೆರಿಕದಲ್ಲಿ ಹಿಂದೂಗಳೇ ಅತ್ಯಂತ ಹೆಚ್ಚು ಸುಶಿಕ್ಷಿತರು: ಪ್ಯೂ ಸಂಶೋಧನಾ ಸಂಸ್ಥೆಯ ವರದಿಯಲ್ಲಿ ಬಹಿರಂಗ

    ಫೆಬ್ರವರಿ 24, 2026

    ಹಿಂದುಳಿದ ವರ್ಗಗಳ ಬೇಡಿಕೆ ಗೊತ್ತಾ..?

    ಫೆಬ್ರವರಿ 24, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.