ಬೆಂಗಳೂರು.
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸ ಅಭಿನಯಿಸಿರುವ ಯುಐ’ ಸಿನಿಮಾ ಡಿಸೆಂಬರ್ 20ರಂದು ಬಿಡುಗಡೆ ಆಗುತ್ತಿದೆ. ಸಿನಿಮಾದ ಟ್ರೇಲರ್ ಹಾಗೂ ಹಾಡುಗಳು ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಸುದ್ದಿ ಮಾಡಿವೆ.
ಉಪೇಂದ್ರ ಅವರ ಅಭಿಮಾನಿಗಳಂತೂ ಈ ಸಿನಿಮಾವನ್ನು ವೀಕ್ಷಿಸಲು ಅತ್ಯಂತ ಕಾತುರದಿಂದ ಕಾಯುತ್ತಿದ್ದಾರೆ.ಈ ಪ್ಯಾನ್ ಇಂಡಿಯಾ ಸಿನಿಮಾವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲು ಉಪೇಂದ್ರ ಸಜ್ಜಾಗಿದ್ದು ಅದಕ್ಕಾಗಿ ವಿನೂತನ ಪ್ರಚಾರ ತಂತ್ರದ ಮೊರೆ ಹೋಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಉಪೇಂದ್ರ ಅವರ ಯಾವುದೇ ಹೊಸ ಸಿನಿಮಾ ತೆರೆಯ ಮೇಲೆ ಬಾರದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಈ ನೂತನ ಸಿನಿಮಾ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಉಪೇಂದ್ರ ಸಿನಿಮಾ ಬಿಡುಗಡೆ ಮತ್ತು ಪ್ರಚಾರದಲ್ಲಿ ನಿರತರಾಗಿದ್ದಾರೆ ಇತ್ತೀಚೆಗೆ ಅವರು ಬಾಲಿವುಡ್ ಪ್ರತಿಭಾವಂತ ನಟ ಅಮೀರ್ ಖಾನ್ ಅವರನ್ನು ಭೇಟಿ ಮಾಡಿ ತಮ್ಮ ಸಿನಿಮಾದ ಟ್ರೇಲರ್ ತೋರಿಸಿದ್ದಾರೆ.
ಅದನ್ನು ನೋಡಿ ಅಭಿಪ್ರಾಯ ವ್ಯಕ್ತಪಡಿಸಿರುವ ಅಮೀರ್ ಖಾನ್ ನಾನು ಉಪೇಂದ್ರ ಅವರ ದೊಡ್ಡ ಅಭಿಮಾನಿ. ಈ ಸಿನಿಮಾದ ಟ್ರೇಲರ್ ಅದ್ಭುತವಾಗಿದೆ. ಅದನ್ನು ಕಂಡು ನಾನು ಆಶ್ವರ್ಯಚಕಿತನಾದೆ. ನನ್ನ ಸ್ನೇಹಿತ ಉಪೇಂದ್ರ ಅವರು ಎಂಥ ಅದ್ಭುತವಾದ ಟ್ರೇಲರ್ ಮಾಡಿದ್ದಾರೆ’ ಎಂದು ಬಣ್ಣಿಸಿದ್ದಾರೆ
ಅಮೀರ್ ಖಾನ್ ಅವರು ಉಪೇಂದ್ರ ಅವರ ಬಾರಿ ನಿರೀಕ್ಷೆಯ ಈ ಸಿನಿಮಾದ ಬಗ್ಗೆ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ