ಬೆಂಗಳೂರು,ಆ.4-
ಸ್ಯಾಂಡಲ್ ವುಡ್ ನಟಿ ಮೋಹಕ ತಾರೆ ರಮ್ಯಾ ಅವರಿಗೆ ಅಶ್ಲೀಲ ಸಂದೇಶಗಳನ್ನು ಪೋಸ್ಟ್ ಮಾಡಿದ್ದವರ ಬೆನ್ನು ಹತ್ತಿರುವ ಸಿಸಿಬಿ ಪೊಲೀಸರು
ಮತ್ತಿಬ್ಬರು ಕಿಡಿಗೇಡಿಗಳನ್ನು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಚಿಕ್ಕಂಗಲದ ರಾಜೇಶ್(23) ಹೊಸಕೋಟೆಯ ಸೂಲಿಬೆಲೆಯ ಭುವನ್ ಗೌಡ(24) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿ ರಾಜೇಶ್ ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ಅವರಿಗೆ ಖಾಸಗಿ ಅಂಗಾಂಗದ ಪೋಟೋ ಕಳುಹಿಸಿ ಅಶ್ಲೀಲ ವರ್ತನೆ ತೋರಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಖಾಸಗಿ ಭಾಗದ ಅಂಗಾಂಗಗಳ ವಿಡಿಯೋ ರಮ್ಯಾ ಗೆ ಕಳುಹಿಸಿರುವ ಆರೋಪಿ ರಾಜೇಶ್ ಮೊಬೈಲ್ ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಕೆಲ ದಿನಗಳ ಹಿಂದೆಯಷ್ಟೇ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿದ್ದು,ಇಲ್ಲಿಯವರೆಗೆ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿದ್ದು,ಉಳಿದವರ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ಹೇಳಿದರು.
ನಟ ದರ್ಶನ್ ಅಭಿಮಾನಿಗಳ ವಿರುದ್ದ ನಟಿ ರಮ್ಯಾ ನೀಡಿರುವ ದೂರಿನ ಬಗ್ಗೆ ಸಿಸಿಬಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಟ್ಟಾರೆ ನಾಲ್ವರು ಕಿಡಿಗೇಡಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ದರ್ಶನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿಗೆ ಸಂಬಂಧಿಸಿದಂತೆ ರಮ್ಯಾ ಪೋಸ್ಟ್ ಮಾಡಿದ್ದರು. ತೀರ್ಪಿನಿಂದ ನ್ಯಾಯ ಸಿಗುವ ಭರವಸೆ ಮೂಡುತ್ತಿದೆ ಎಂದು ಬರೆದಿದ್ದರು.
ಇದರಿಂದ ರೊಚ್ಚಿಗೆದ್ದ ಕೆಲವರು ಡಿ ಬಾಸ್ ಅಭಿಮಾನಿಗಳ ಹೆಸರಿನಲ್ಲಿ ರಮ್ಯಾಗೆ ಅಶ್ಲೀಲ ಸಂದೇಶಗಳ ಮೂಲಕ ದಾಳಿ ನಡೆಸಿದ್ದರು.ಈ ಸಂಬಂಧ 43 ಇನ್ ಸ್ಟಾಗ್ರಾಮ್ ಗ ಅಕೌಂಟ್ ಗಳ ಬೆನ್ನತ್ತಿರುವ ಸಿಸಿಬಿ ಪೊಲೀಸರು, ನಟಿ ರಮ್ಯಾ ಬಳಿ ಅಶ್ಲೀಲ ಮೆಸೇಜ್ ಅಕೌಂಟ್‌ಗಳ ಕುರಿತು ಮಾಹಿತಿ ಪಡೆದಿದ್ದಾರೆ.
ಯಾವ ಪೇಜ್‌ಗಳಿಂದ ಅಶ್ಲೀಲ ಮೆಸೇಜ್‌ಗಳು ಬಂದಿದ್ದವು? ಯಾವ ನಂಬರ್‌ಗಳಿಂದ ಬೆದರಿಕೆ ಕರೆ ಬಂದಿತ್ತು ಇತ್ಯಾದಿ ಎಲ್ಲದರ ಕುರಿತು ಪೊಲೀಸರು ಮಾಹಿತಿ ಸಂಗ್ರಹಿದ್ದಾರೆ.
ಮಾಜಿ ಸಂಸದೆಯು ಆಗಿರುವ ರಮ್ಯಾ (ದಿವ್ಯ ಸ್ಪಂದನ) ರವರು ತಮ್ಮ ಅಧಿಕೃತ ಇನ್‍ಸ್ಟಾಗ್ರಾಂ ಮತ್ತು ಘಿ (ಹಿಂದಿನ ಟ್ವಿಟರ್) ಖಾತೆಗಳಲ್ಲಿ ಹಂಚಿಕೊಂಡರು. ಈ ಖಾತೆಗಳಿಗೆ 11 ಲಕ್ಷಕ್ಕಿಂತ ಹೆಚ್ಚು ಅನುಯಾಯಿಗಳಿದ್ದಾರೆ.
ಖಾಸಗಿ ವ್ಯಕ್ತಿಗಳ, ವಿಶೇಷವಾಗಿ ಮಹಿಳೆಯರು ಮತ್ತು ಸಾರ್ವಜನಿಕ ವ್ಯಕ್ತಿಗಳ ಗೌರವ ಮತ್ತು ಸುರಕ್ಷತೆ ನಮಗೆ ಅತ್ಯಂತ ಮುಖ್ಯವಾಗಿದೆ.
ನಗರ ಪೊಲೀಸರು ಸುರಕ್ಷಿತ ಮತ್ತು ಗೌರವಯುತ ಡಿಜಿಟಲ್ ವಾತಾವರಣವನ್ನು ಕಾಪಾಡಲು ಬದ್ಧವಾಗಿದೆ. ತನಿಖೆ ಮುಂದುವರಿದಿದ್ದು, ಈ ಅಪರಾಧಗಳಲ್ಲಿ ತೊಡಗಿರುವ ಎಲ್ಲರನ್ನು ಗುರುತಿಸಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
Previous Articleಧರ್ಮಸ್ಥಳದಲ್ಲಿ ಮತ್ತೊಂದು ಶವ ಹೂತುಹಾಕಲಾಗಿದೆ !
Next Article ನೇಮಕಾತಿ, ಭಡ್ತಿ ಗೆ ಇದ್ದ ಆತಂಕ ದೂರ !