ಬೆಂಗಳೂರು,ಏ.18-ರೀಲ್ಸ್ ಹುಚ್ಚಿಗಾಗಿ ನಡು ರಸ್ತೆಯಲ್ಲಿ ಚೇರ್ ಹಾಕಿ ಕುಳಿತುಕೊಂಡು ವಿಡಿಯೋ ಮಾಡುತ್ತಿದ್ದ ಯುವಕನನ್ನು ನಗರದ ಎಸ್.ಜೆ.ಪಾರ್ಕ್ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರು ವಶಕ್ಕೆ ಪಡೆದಿರುವ ವ್ಯಕ್ತಿಯನ್ನು ಪ್ರಶಾಂತ್ ಎಂದು ಗುರುತಿಸಲಾಗಿದೆ.ಈತ ವೃತ್ತಿಯಲ್ಲಿ ವಾಹನ ಚಾಲಕ , ರೀಲ್ಸ್ ವ್ಯಾಮೋಹ ಬೆಳೆಸಿಕೊಂಡಿದ್ದ. ಹೀಗಾಗಿ, ಎಸ್.ಜೆ.ಪಾರ್ಕ್ನ ಮುಖ್ಯರಸ್ತೆಯಲ್ಲಿ ಕುರ್ಚಿ ಹಾಕಿ ಕುಳಿತು ಟೀ ಕುಡಿಯುತ್ತ ರೀಲ್ಸ್ ಮಾಡಿದ್ದ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಂತೆ, ಕೆ.ಆರ್.ಮಾರ್ಕೆಟ್ ಠಾಣೆ ಸೋಷಿಯಲ್ ಮೀಡಿಯಾ ವಿಂಗ್ ಎಸ್.ಜೆ.ಠಾಣೆ ಪೊಲೀಸರಿಗೆ ಮಾಹಿತಿ ನೀಡಿತ್ತು.
ಇದರ ಆಧಾರದ ಮೇರೆಗೆ ಆರೋಪಿತನ ವಿರುದ್ಧ ಎನ್ಸಿಆರ್ ಪ್ರಕರಣ ದಾಖಲಿಸಿಕೊಂಡು, ವಶಕ್ಕೆ ಪಡೆಯಲಾಗಿದೆ. ಏಪ್ರಿಲ್ 12ರಂದು ರೀಲ್ಸ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Previous Articleನಕಲಿ ನೋಟಿನ ಸರದಾರ ಸಿಕ್ಕಿಬಿದ್ದ
Next Article ಕೆಎಸ್ಸಾರ್ಟಿಸಿ ಬಸ್ ನಲ್ಲಿ ಈ ಜಾಹೀರಾತು ನಿಷೇಧ