ಬೆಂಗಳೂರು:ಬೆಂಗಳೂರು ವಕೀಲರ ಸಂಘದ (ಎಎಬಿ) ಅಧ್ಯಕ್ಷರಾಗಿ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಸತತ ಎರಡನೇ ಅವಧಿಗೆ ಪುನರಾಯ್ಕೆಯಾಗಿದ್ದಾರೆ.
ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಹಿರಿಯ ವಕೀಲ ವಿವೇಕ್ ರೆಡ್ಡಿ ಅವರು 6,820 ಮತಗಳನ್ನು ಪಡೆಯುವ ಮೂಲಕ ಅಭೂತಪೂರ್ವ ಗೆಲುವು ದಾಖಲಿಸಿದ್ದಾರೆ.
ವಿವೇಕ್ ರೆಡ್ಡಿ ಅವರಿಗೆ 4,518 ಮತ ಪಡೆಯುವ ಮೂಲಕ ಮಾಜಿ ಅಧ್ಯಕ್ಷ ಎ ಪಿ ರಂಗನಾಥ್ ಅವರು ತೀವ್ರ ಪೈಪೋಟಿ ನೀಡಿ ಸೋಲು ಕಂಡಿದ್ದಾರೆ.
ಉಳಿದಂತೆ ಆರ್ ರಾಜಣ್ಣ ಅವರು 1,473 ಮತ ಪಡೆದಿದ್ದು, ಎಎಬಿ ಮಾಜಿ ಪ್ರಧಾನ ಕಾರ್ಯದರ್ಶಿ ಟಿ ಜಿ ರವಿ ಕೇವಲ 378 ಮತ ಪಡೆದಿದ್ದಾರೆ. 123 ಮತ ಪಡೆದಿರುವ ನಂಜಪ್ಪ ಕಾಳೇಗೌಡ ಮತ್ತು 90 ಮತ ಪಡೆದಿರುವ ಟಿ ಎ ರಾಜಶೇಖರ್ ಸ್ಪರ್ಧೆ ಔಪಚಾರಿಕವಾಗಿತ್ತು.
ಬೆಂಗಳೂರು ವಕೀಲರ ಸಂಘದ 38 ಹುದ್ದೆಗಳಿಗೆ 180 ಮಂದಿ ಸ್ಪರ್ಧೆ ಮಾಡಿದ್ದು ಭಾನುವಾರ ರಾತ್ರಿ ವೇಳೆಗೆ ಫಲಿತಾಂಶ ಪ್ರಕಟಗೊಂಡಿದೆ.
ಮತ ಎಣಿಕೆಯ ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ವಿವೇಕ್ ಸುಬ್ಬಾರೆಡ್ಡಿ ಅವರು ಅಂತಿಮವಾಗಿ ಗೆಲುವಿನ ನಗೆ ಬೀರಿದ್ದಾರೆ.
ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ, ಆಡಳಿತ ಮಂಡಳಿ ಸದಸ್ಯತ್ವ ಹಾಗೂ ಹೈಕೋರ್ಟ್, ಸಿಟಿ ಸಿವಿಲ್ ಕೋರ್ಟ್, ಮೆಯೊ ಹಾಲ್ ಮತ್ತು ಮ್ಯಾಜಿಸ್ಟ್ರೇಟ್ ಘಟಕಗಳಲ್ಲಿನ ಸದಸ್ಯರ ಸ್ಥಾನಕ್ಕೂ ಚುನಾವಣೆ ನಡೆದಿದ್ದು, ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಮತ ಎಣಿಕೆ ನಡೆಯಿತು.
Previous Articleಮಗನ Instagram ನಿಂದ ಸಿಕ್ಕಿ ಬಿದ್ದ ಖದೀಮ
Next Article ಪೊಲೀಸ್ ಅಧಿಕಾರಿಯೇ ದರೋಡೆ ರೂವಾರಿ