ಬೆಂಗಳೂರು,ಏ.1-
ಸಂಚಾರ ನಿಯಮ ಉಲ್ಲಂಘಿಸಿ ಅಪಾಯಕಾರಿ ವೀಲ್ಹೀ ನಡೆಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡಿರುವ ಸಂಚಾರ ಪೊಲೀಸರು ಒಂದೇ ತಿಂಗಳಲ್ಲಿ 398 ಪ್ರಕರಣಗಳನ್ನು ದಾಖಲಿಸಿದ್ದಾರೆ.
ವೀಲ್ಹಿ ನಡೆಸುತ್ತಿದ್ದ 398 ಪ್ರಕರಣ ದಾಖಲಿಸಿ, 324 ಮಂದಿ ಪುಂಡರನ್ನು ವಶಕ್ಕೆ ಪಡೆದು 397 ಬೈಕ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಅಪಾಯಕಾರಿ ವೀಲ್ಹಿ ನಡೆಸಿದ 40 ಮಂದಿ ಪುಂಡರ ಚಾಲನಾ ಪರವಾನಗಿ (ಡಿಎಲ್) ತಾತ್ಕಾಲಿಕ ರದ್ದುಗೊಳಿಸಲಾಗಿದೆ. 197 ಆರ್ಸಿ ರದ್ದತಿಗೆ ಪತ್ರ ಬರೆಯಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಅಪ್ರಾಪ್ತರ ಕೈಗೆ ಬೈಕ್ ಕೊಟ್ಟ 62 ಮಂದಿ ಪೋಷಕರ ವಿರುದ್ಧ ಕೇಸ್ ದಾಖಲಿಸಲಾಗಿದೆ. 82 ಮಂದಿ ಅಪ್ರಾಪ್ತರ ವಿರುದ್ಧವೂ ಕೇಸ್ ದಾಖಲಿಸಲಾಗಿದೆ. ಬಾಲ ನ್ಯಾಯ ಕಾಯ್ದೆ (ಜುವೈನಲ್ ಆ್ಯಕ್ಟ್) ಅಡಿ 32 ಪ್ರಕರಣ ದಾಖಲಿಸಲಾಗಿದೆ.
40 ಮಂದಿ ಪುಂಡರ ಚಾಲನಾ ಪರವಾನಗಿ (ಡಿಎಲ್) ತಾತ್ಕಾಲಿಕ ರದ್ದುಗೊಳಿಸಲಾಗಿದೆ. 197 ಆರ್ಸಿ ರದ್ದತಿಗೆ ಪತ್ರ ಬರೆಯಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಅಪ್ರಾಪ್ತರ ಕೈಗೆ ಬೈಕ್ ಕೊಟ್ಟ 62 ಮಂದಿ ಪೋಷಕರ ವಿರುದ್ಧ ಕೇಸ್ ದಾಖಲಿಸಲಾಗಿದೆ. 82 ಮಂದಿ ಅಪ್ರಾಪ್ತರ ವಿರುದ್ಧವೂ ಕೇಸ್ ದಾಖಲಿಸಲಾಗಿದೆ. ಬಾಲ ನ್ಯಾಯ ಕಾಯ್ದೆ (ಜುವೈನಲ್ ಆ್ಯಕ್ಟ್) ಅಡಿ 32 ಪ್ರಕರಣ ದಾಖಲಿಸಲಾಗಿದೆ.