ಬೆಂಗಳೂರು,ಡಿ.7:
ವಿಧಾನ ಪರಿಷತ್ ಸಭಾಪತಿ ಹಾಗೂ ರಾಜ್ಯದ ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ
ಪರಿಶಿಷ್ಟ ಪಂಗಡದ ವಾಲ್ಮೀಕಿ ಮಠಕ್ಕೆ ಸೇರಿದ ಶಿಕ್ಷಣ ಸಂಸ್ಥೆಯನ್ನು ಅತಿಕ್ರಮಣ ಮಾಡಿರುವ ಆರೋಪ ಕೇಳಿಬಂದಿದೆ
ಹರಿಹರದ ವಾಲ್ಮೀಕಿ ಮಠಕ್ಕೆ ಸೇರಿದ ಸರ್ವೋದಯ ಶಿಕ್ಷಣ ಟ್ರಸ್ಟ್‌ನ್ನು ಬಸವರಾಜ ಹೊರಟ್ಟಿ ಅವರು ಅಕ್ರಮವಾಗಿ ನಡೆಸುತ್ತಿದ್ದಾರೆ ಎಂದು ಪೊಲೀಸರಿಗೆ 2022 ನವೆಂಬರ್‌ನಲ್ಲಿ ದೂರು ನೀಡಲಾಗಿದೆ.ಆದರೆ ಇಲ್ಲಿಯವರೆಗೆ ಎಫ್‌ಐಆರ್ ದಾಖಲಿಸಿಲ್ಲ ಎಂದು ಆರೋಪಿಸಿ ಅರುಣ್ ಎಸ್.ಹಿರೇಹಾಳ್ ಎಂಬುವರು ಕೇಂದ್ರ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಆಯೋಗಕ್ಕೆ ದೂರು ನೀಡಿದ್ದಾರೆ.
ಈ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗ ವಿಚಾರಣೆಗೆ ಬರುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸಮನ್ಸ್ ನೀಡಿದೆ.
ನವದೆಹಲಿಯ ಎನ್‌ಸಿ-ಎಸ್‌ಟಿ ಕೇಂದ್ರ ಕಚೇರಿಯಲ್ಲಿ ಡಿಸೆಂಬರ್ 12ರಂದು ವಿಚಾರಣೆ ನಡೆಯಲಿದೆ. ಆಯೋಗದ ಸದಸ್ಯ ಜತೊತು ಹುಸೇನ್ ಅವರು ವಿಚಾರಣೆ ನಡೆಸುವರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬೇಕು ಎಂದು ಡಿಜಿಪಿ ಅಲೋಕ್ ಮೋಹನ್ ಮತ್ತು ಎಸ್‌ಪಿ ಗೋಪಾಲ ಬ್ಯಾಕೋಡ ಅವರಿಗೆ ಸೂಚಿಸಲಾಗಿದೆ.
Previous Articleಬೆಳಗಾವಿಗೆ ಪೊಲೀಸ್ ಸರ್ಪಗಾವಲು.
Next Article ಅದಾನಿ ವಿರುದ್ಧ ರಾಜ್ಯದಲ್ಲಿ ಯಾಕಿಲ್ಲ ಕ್ರಮ