ಗದಗ: ದಿಂಗಾಲೇಶ್ವರ ಶ್ರೀ ಹಾಗೂ ಸಿ.ಸಿ. ಪಾಟೀಲರ ಮದ್ಯದ ವಾಕ್ಸಮರ ಇದೀಗ ಭಕ್ತರವರೆಗೂ ತಲುಪಿದೆ. ಶಿರಹಟ್ಟಿ ಹಾಗೂ ಬಾಳೆಹೊಸೂರ ಪೂಜ್ಯರಾದ ಶ್ರೀ ಫಕ್ಕಿರ ದಿಂಗಾಲೇಶ್ವರ ಮಹಾಸ್ವಾಮಿಗಳನ್ನು ಈ ರಾಜ್ಯದ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಬಹಳಷ್ಟು ಕೀಳುಮಟ್ಟದ ಪದಗಳನ್ನು ಶ್ರೀಗಳ ವಿರುದ್ದ ಬಳಸಿರುವುದು ದಿಂಗಾಲೇಶ್ವರ ಸ್ವಾಮಿಗಳ ಭಕ್ತರ ಅದಮಾಧಾನಕ್ಕೆ ಕಾರಣವಾಗಿದೆ.
ಶ್ರೀಗಳ ತೇಜೋವದೆಯನ್ನು ಮಾಡುವ ಕಾರ್ಯವನ್ನು ಸಿ. ಸಿ. ಪಾಟೀಲರು ಮಾಡಿದ್ದಾರೆ. ತಮ್ಮ ಹೇಳಿಕೆಯನ್ನು ಹಿಂಪಡೆದು ಪೂಜ್ಯರಲ್ಲಿ ಕ್ಷಮೆ ಕೊರಬೇಕು ಎಂಬುದು ಭಕ್ತರ ಒತ್ತಾಯವಾಗಿದೆ. ಜೊತೆಗೆ ಶ್ರೀಗಳ ನೈತಿಕತೆ ಬಗ್ಗೆ ಮಾತನಾಡಿದ ಸಿ.ಸಿ. ಪಾಟೀಲರೆ ನಿಮ್ಮ ನೈತಿಕತೆಯನ್ನು ರಾಜ್ಯದ ಜನ ನೋಡಿದ್ದಾರೆ. ನೀವೇ ಒಮ್ಮೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದನ್ನು ರಾಜ್ಯದ ಜನ ಮರಿತಿಲ್ಲ. ಶ್ರೀಗಳು ಸರಕಾರದ ವಿರುದ್ಧ ಮಾತನಾಡಿದ್ದಕ್ಕೆ ತಾಳ್ಮೆಯನ್ನು ಕಳೆದುಕೊಂಡು ಶ್ರೀಗಳ ಬಗ್ಗೆ ಮಾತನಾಡಿ ಲಕ್ಷಾಂತರ ಭಕ್ತರ ಸಮೂಹಕ್ಕೆ ನೂವುನ್ನುಂಟು ಮಾಡಿದ್ದೀರಿ. ಹೀಗಾಗಿ ಸಚಿವ ಸಿ.ಸಿ. ಪಾಟೀಲರು ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.