ಮಂಡ್ಯ: ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ಒಂದು ಕಡೆ ಸರಗಳ್ಳತನ ನಡೆದರೆ, ಮತ್ತೊಂದೆಡೆ ಸರಗಳ್ಳತನ ಯತ್ನ ನಡೆದು ಸರಗಳ್ಳನಿಗೆ ಗೂಸಾ ಕೊಟ್ಟಿರುವ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಶೀರಬಿಲ್ಲೇನಹಳ್ಳಿಯಲ್ಲಿ ಮಹಿಳೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಕಿತ್ತು ಪರಾರಿಯಾಗುತ್ತಿದ್ದ ಕಳ್ಳರನ್ನ ಹಿಡಿದು ಥಳಿಸಲಾಗಿದೆ. ಮತ್ತೊಂದೆಡೆ, ಪಾಂಡವಪುರ ತಾಲೂಕಿನ ಬಳಘಟ್ಟದಲ್ಲಿ ಮಹಿಳೆ ಬಳಿ ಕುಡಿಯಲು ನೀರು ಕೇಳಿದ ಕಳ್ಳನಿಗೆ ನೀರು ಕುಡಿಯಲು ಹೋದಾಗ ಸರ ಕಸಿದು ಪರಾರಿಯಾಗಲು ಯತ್ನ ನಡೆಸಿದ್ದಾನೆ. ರುಚಿತಾ ಎಂಬಾಕೆಯ ಮಹಿಳೆಯ ಕತ್ತಿನಲ್ಲಿದ್ದ 40 ಗ್ರಾಂ ಮಾಂಗಲ್ಯ ಸರ ಕಿತ್ತು ಎಸ್ಕೇಪ್ ಆಗಿದ್ದಾರೆ.
ಕೆ.ಆರ್.ಪೇಟೆಯ ಶಿರಬಿಲ್ಲೇನಹಳ್ಳಿಯಲ್ಲಿ ಸರ ಕಸಿದು ಪರಾರೊಯಾಗುವ ವೇಳೆ ತಕ್ಷಣ ಗ್ರಾಮಸ್ಥರು ಅಕ್ಕ ಪಕ್ಕದ ಗ್ರಾಮಸ್ಥರಿಗೆ ಪೋನ್ ಮೂಲಕ ಮಾಹಿತಿ ರವಾನೆ ಮಾಡಿದ್ದಾರೆ. ಈ ವೇಳೆ ಸರಗಳ್ಳರಿಗಾಗಿ ಕಾದು ಕುಳಿತಿದ್ದ ಶೀರಬಿಲ್ಲೇನಹಳ್ಳಿ ಗ್ರಾಮಸ್ಥರು ಕಳ್ಳರನ್ನ ಹಿಡಿದು ಥಳಿಸಿದ್ದಾರೆ.
ಈ ವೇಳೆ ಇಬ್ಬರ ಪೈಕಿ ಓರ್ವ ಕಳ್ಳ ಬೈಕ್ ಬಿಟ್ಟು ಕದ್ದಿದ್ದ ಚಿನ್ನದ ಸರದೊಂದಿಗೆ ಅರಣ್ಯ ನುಗ್ಗಿ ಎಸ್ಕೇಪ್ ಆಗಿದ್ದಾನೆ. ಈ ವೇಳೆ ಸಿಕ್ಕಿಬಿದ್ದ ಓರ್ವ ಕಳ್ಳನಿಗೆ ಹಿಗ್ಗಾ ಮುಗ್ಗ ಥಳಿಸಲಾಗಿದೆ. ಸಿಕ್ಕಿಬಿದ್ದ ಕಳ್ಳ, ತಾನು ಹಾಸ ಜಿಲ್ಲೆ ಚನ್ನರಾಯಪಟ್ಟಣದ ಅಗ್ರಹಾರದ ನಿವಾಸಿ ಎಂದು ಹೇಳಿದ್ದಾನೆ.ಬಳಿಕ ಆತನನ್ನ ದೇವಾಲಯದಲ್ಲಿ ಕೂಡಿ ಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.