ಬೆಂಗಳೂರು,ಜು.18-
ಸಾಮಾಜಿಕ ಜಾಲತಾಣ ಗೂಗಲ್ ಅನ್ನು ನಿರ್ವಹಿಸುತ್ತಿರುವ ಮೆಟಾ ಸಂಸ್ಥೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಕ್ಷಮೆ ಯಾಚಿಸಿದೆ.
ಕರ್ನಾಟಕದ ಊರುಗಳ ಹೆಸರುಗಳನ್ನು ಕನ್ನಡದಲ್ಲಿ ತಪ್ಪು ತಪ್ಪಾಗಿ ಉಲ್ಲೇಖಿಸಿರುವ ಗೂಗಲ್ ಮುಖ್ಯಮಂತ್ರಿಗಳ ಇಂಗ್ಲೀಷ್ ಹೇಳಿಕೆಯನ್ನು ತಪ್ಪು ತಪ್ಪಾಗಿ ಕನ್ನಡದಲ್ಲಿ ಭಾಷಾಂತರ ಮಾಡಿದೆ ಇದು ಹಲವು ರೀತಿಯ ಗೊಂದಲಗಳಿಗೆ ಕಾರಣವಾಗಿತ್ತು.
ಈ ಕುರಿತಂತೆ ಮೆಟಾ ಸಂಸ್ಥೆಗೆ ಪತ್ರ ಬರೆದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ಸಂವಹನಗಳನ್ನು ನಿಭಾಯಿಸುವಾಗ, ಸಾಮಾಜಿಕ ಮಾಧ್ಯಮ ವೇದಿಕೆಗಳು ಹೊಣೆಗಾರಿಕೆಯಿಂದ ವರ್ತಿಸಬೇಕು ಎಂದು ಹೇಳಿದ್ದರು.
ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುವ ಅನುವಾದಗಳು ಪದೇ ಪದೇ ತಪ್ಪಾಗಿರುತ್ತವೆ ಎಂಬುದರ ಬಗ್ಗೆ ನಾಗರಿಕರು ಎಚ್ಚರಿಕೆಯಿಂದಿರಬೇಕು ಎಂದು ಕರೆ ನೀಡಿದ್ದರು.
ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಸ್ವಯಂಚಾಲಿತ ಕನ್ನಡ ಅನುವಾದದಲ್ಲಿ ಕಂಡು ಬಂದಿದ್ದ ದೋಷಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಕ್ತಪಡಿಸಿದ್ದ ಕಳವಳಕ್ಕೆ ಉತ್ತರ ನೀಡಿರುವ ಮೆಟಾ ಆಗಿರುವ ತಪ್ಪಿಗಾಗಿ ಕ್ಷಮೆ ಯಾಚಿಸುತ್ತೇವೆ ಎಂದು ಹೇಳಿದೆ.
ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ರಕ್ಕೆ ಉತ್ತರಿಸಿರುವ ಮೆಟಾ ಸಂಸ್ಥೆಯ ವಕ್ತಾರರು, “ಕೆಲ ಕಾಲ ಅಸಮರ್ಪಕ ಕನ್ನಡ ಅನುವಾದಕ್ಕೆ ಕಾರಣವಾಗಿದ್ದ ಈ ಸಮಸ್ಯೆಯನ್ನು ನಾವು ಸರಿಪಡಿಸಿದ್ದೇವೆ. ಹೀಗಾಗಿದ್ದಕ್ಕೆ ನಾವು ಕ್ಷಮೆ ಕೋರುತ್ತೇವೆ” ಎಂದು ವಿಷಾದಿಸಿದ್ದಾರೆ.
Previous Articleವಂಚಕನ ವೈಭವ ಕಂಡು ಬೆಚ್ಚಿ ಬಿದ್ದ ಪೊಲೀಸ್ !
Next Article ರೌಡಿ ಬಿಕ್ಲು ಶಿವ ಹತ್ಯೆ – ಬೈರತಿ ಬಸವರಾಜ್ ಗೆ ಸಂಕಷ್ಟ !