ಬಾಗಲಕೋಟೆ: ಮೃತಪಟ್ಟ ಪತಿ ಹಾವಿನ ರೂಪದಲ್ಲಿ ಬಂದಿದ್ದಾನೆಂದು ನಂಬಿದ ಪತ್ನಿ ನಾಲ್ಕು ದಿನಗಳ ಕಾಲ ಆ ಹಾವಿನೊಂದಿಗೆ ವಾಸವಿದ್ದ ವಿಚಿತ್ರ ಘಟನೆಯೊಂದು ಬಾಗಲಕೋಟೆ ಜಿಲ್ಲೆಯ ರಬಕವಿ- ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶಾರದಾ ಕಂಬಾರ ಎಂಬುವರ ಪತಿ ಮೌನೇಶ್ 2 ವರ್ಷದ ಹಿಂದೆ ಸಾವನ್ನಪ್ಪಿದ್ದರು. ನಾಲ್ಕು ದಿನಗಳ ಹಿಂದೆ ಕೇರೆ ಹಾವೊಂದು ಶಾರದಾ ಮನೆಗೆ ಬಂದಿದೆ. ಇದನ್ನೇ ಪತಿಯೆಂದು ನಂಬಿದ ಶಾರದಾ ಅದರೊಂದಿಗೆ ವಾಸಿಸಲು ಆರಂಭಿಸಿದ್ದಾರೆ. ಹರಸಾಹಸಪಟ್ಟು ಶಾರದಾ ಮನವೊಲಿಸಿದ ಗ್ರಾಮಸ್ಥರು ಹಾವನ್ನು ಕಾಡಿಗೆ ಬಿಟ್ಟು ಬಂದಿದ್ದಾರೆ.
Previous Articleಮದುವೆ ಬೇಡ ಅಂದಿದ್ದಕ್ಕೆ..!!??
Next Article ನವಜೋತ್ ಸಿಂಗ್ ಸಿಧು ಅಸ್ವಸ್ಥ: ಆಸ್ಪತ್ರೆಗೆ ದಾಖಲು