ಬೆಂಗಳೂರು,ಮಾ.21-
ಯುವಕನೋರ್ವ ತನ್ನ ಸ್ನೇಹಿತೆಯನ್ನು ಭೇಟಿಯಾಗಲು ಬಂದು ಪೊಲೀಸರ ಅತಿಥಿಯಾಗಿದ್ದಾನೆ.
ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ರಮಾಬಾಯಿ ವಿಧ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿರುವ ತನ್ನ ಗೆಳತಿಯನ್ನು ಭೇಟಿಯಾಗಲು ಮಾಲೂರು ಮೂಲದ ಯುವಕ ಬಂದಿದ್ದಾನೆ.ಈ ವೇಳೆ ತನ್ನನ್ನು ಯಾರಾದರೂ ತಡೆಯಬಹುದು ಎಂದು ಭಾವಿಸಿದ ಆತ ಬುರ್ಖಾ ಧರಿಸಿ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ
ಬಂದಿದ್ದಾನೆ.
ರಾತ್ರಿ 7 ಗಂಟೆ ರ ವೇಳೆ ಯುವಕ ಬುರ್ಖಾ ಧರಿಸಿ ಪ್ರವೇಶಿಸಿದ್ದನ್ನು ಕಂಡ ವಿದ್ಯಾರ್ಥಿನಿಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.
ತಕ್ಷಣವೇ ಸ್ಥಳಕ್ಕಾಗಮಿಸಿದ ಜ್ಞಾನಭಾರತಿ ಠಾಣೆಯ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.
ಮಾಲೂರಿನಿಂದ ತನ್ನ ಸ್ನೇಹಿತೆಯನ್ನು ನೋಡಲು ಬಂದ ಆತನಿಗೆ ಉಳಿದುಕೊಳ್ಳಲು ಸ್ಥಳವಿಲ್ಲದ ಕಾರಣ ಆತನ ಸ್ನೇಹಿತೆಯೇ ಹಾಸ್ಟೆಲ್‌ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ.
ಇದಕ್ಕಾಗಿ ಸ್ನೇಹಿತೆಯಿಂದಲೇ ಬಟ್ಟೆ ತೆಗೆದುಕೊಂಡು ಅದನ್ನು ಧರಿಸಿಕೊಂಡು ಹಾಸ್ಟೆಲ್‌ಗೆ ಬಂದಿದ್ದಾನೆ.
ಈ ಘಟನೆಯ ನಂತರ ಮುಂಜಾಗ್ರತ ಕ್ರಮವಾಗಿ ಹುಡುಗಿಯರ ಹಾಸ್ಟೆಲ್‌ಗೆ ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Previous Articleಮಂತ್ರಿ ರಾಜಣ್ಣ ಪುತ್ರನಿಗೂ ಹನಿ ಟ್ರ್ಯಾಪ್
Next Article ರಣರಂಗವಾದ ವಿಧಾನಸಭೆ, ಬಿಜೆಪಿ ಸದಸ್ಯರು ಸಸ್ಪೆಂಡ