ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಹೀಗಾಗಿ ಇವುಗಳನ್ನು ಕುರಿತು ತಾಂತ್ರಿಕ ಸಲಹಾ ಸಮಿತಿ ಅಧ್ಯಯನ ನಡೆಸುತ್ತಿದೆ. ಅವರು ನೀಡುವ ಶಿಫಾರಸ್ಸುಗಳನ್ನು ಸರ್ಕಾರ ಚಾಚೂತಪ್ಪದೆ ಪಾಲನೆ ಮಾಡುತ್ತದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ತಜ್ಞರ ಸಮಿತಿಯ ವರದಿಯನ್ನಾಧರಿಸಿ ಸಡಿಲಗೊಳಿಸಿರುವ ನಿಯಮಗಳನ್ನು ಮತ್ತೆ ಬಿಗಿಗೊಳಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಮಗೆ ಒಂದು ಮತ್ತು 2ನೇ ಕೋವಿಡ್ ಅಲೆಯಲ್ಲಿ ಸಾಕಷ್ಟು ಅನುಭವಗಳಾಗಿವೆ. ಆ ವೇಳೆ ಆಸ್ಪತ್ರೆ, ಬೆಡ್, ಔಷಧಿ ಸೇರಿದಂತೆ ಹಲವಾರು ಸಮಸ್ಯೆಗಳು ಎದುರಾದವು ನಾವು ಅತ್ಯುತ್ತಮವಾಗಿ ನಿರ್ವಹಣೆ ಮಾಡಿದ್ದರಿಂದ ನಿಯಂತ್ರಕ್ಕೆ ಬಂದಿತ್ತು.ಪ್ರತಿದಿನ ಈಗಲೂ ನಾವು ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ. 4ನೇ ಅಲೆಯ ಮುನ್ಸೂಚನೆ ಸದ್ಯಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
[wp-video-popup video=”https://www.youtube.com/watch?v=YlUKcNNmywk”]
10.50 ಕೋಟಿ ಲಸಿಕೆಯನ್ನು ಜನತೆಗೆ ನೀಡಿದ್ದೇವೆ. ಮಕ್ಕಳಿಗೂ ಸಹ ಗಣನೀಯವಾಗಿ ಲಸಿಕೆ ಹಾಕಲಾಗಿದೆ. ಕೆಲವರು ಈಗಲೂ ಕೂಡ 29ರಿಂದ 30 ಲಕ್ಷ ಮಂದಿ 2ನೇ ಲಸಿಕೆಯನ್ನು ಪಡೆದಿಲ್ಲ. ಅಗತ್ಯ ಇರುವವರು 3ನೇ ಲಸಿಕೆಯನ್ನು ತೆಗೆದುಕೊಳ್ಳಿ. ದಯವಿಟ್ಟು ಮೈಮರೆಯಬೇಡಿ ಎಂದು ಮನವಿ ಮಾಡಿಕೊಂಡರು.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರುವುದು ಮತ್ತು 4ನೇ ಅಲೆ ನಮಗೆ ಬಾರದಿರುವುದಕ್ಕೆ ನಾವು ತೆಗೆದುಕೊಂಡ ಪರಿಣಾಮಕಾರಿಯಾದ ನಿರ್ವಹಣೆಯಿಂದ ಇದು ಸಾಧ್ಯವಾಗಿದೆ. 4ನೇ ಅಲೆ ಬರುವುದೇ ಇಲ್ಲ ಎಂದು ಹೇಳಲು ಕಷ್ಟಸಾಧ್ಯ ಎಂದರು.
ಜನರು ಮೈಮರೆಬಾರದು. ಮಾಸ್ಕ್ ಹಾಕುವುದು, ಸಾಮಾಜಿಕ ಅಂತರ ಹಾಗೂ ಲಸಿಕೆ ತೆಗೆದುಕೊಳ್ಳುವುದನ್ನು ಮರೆಯಬಾರದು. ಮನೆಯಿಂದ ಆಚೆ ಹೋಗುವಾಗ, ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದರಿಂದ ಸಮಸ್ಯೆಯಾಗುತ್ತದೆಯೇ ಎಂದು ಸುಧಾಕರ್ ಪ್ರಶ್ನಿಸಿದರು.