ಬೆಂಗಳೂರು – ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಮಾಜಿ ಸಂಸದ ಅಂಬರೀಶ್ ಹಾಗೂ ನಟಿ ಮಂಡ್ಯ ಕ್ಷೇತ್ರದ ಸಂಸತ್ ಸದಸ್ಯೆ ಸುಮಲತಾ ಅಂಬರೀಶ್ ಅವರ ಪುತ್ರ ಅಭಿಷೇಕ್ ಗೌಡ ಅವರ ಮದುವೆ ಬೀಗರ ಔತಣಕೂಟಕ್ಕೆ ಮಂಡ್ಯ ಜಿಲ್ಲೆಯ ಗೆಜ್ಜಲಗೆರೆ ಸಜ್ಜುಗೊಳ್ಳುತ್ತಿದೆ.
ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಅಭಿಷೇಕ್ ಗೌಡ ಅವರು ಫ್ಯಾಷನ್ ಗುರು ಪ್ರಸಾದ್ ಬಿದ್ದಪ ಅವರ ಪುತ್ರಿ ಅವಿಭಾ ಅವರೊಂದಿಗೆ ಸಪ್ತಪದಿ ತುಳಿದಿದ್ದರು ಕುಟುಂಬ ಸದಸ್ಯರು ಮತ್ತು ಅತ್ಯಾಪ್ತರ ಸಮ್ಮುಖದಲ್ಲಿ ಈ ಮದುವೆ ನಡೆದಿತ್ತು ಆನಂತರ ಬೆಂಗಳೂರು ಅರಮನೆ ಮೈದಾನದಲ್ಲಿ ಅದ್ದೂರಿ ಆರತಕ್ಷತೆ ಸಮಾರಂಭ ನೆರವೇರಿತ್ತು.
ಇದೀಗ ರೆಬೆಲ್ ಸ್ಟಾರ್ ಅವರ ಹುಟ್ಟೂರು ಮಂಡ್ಯ ಜಿಲ್ಲೆಯ ಗೆಜ್ಜಲಗೆರೆಯಲ್ಲಿ ಅದ್ದೂರಿ ಬೀಗರ ಔತಣಕೂಟ ಏರ್ಪಡಿಸಲಾಗಿದೆ ಈ ಮೂಲಕ ಸಂಸತ್ ಸದಸ್ಯೆ ಸುಮಲತಾ ಅಂಬರೀಶ್ ಅವರು ತಮ್ಮನ್ನು ಸಂಸತ್ ಸದಸ್ಯರನ್ನಾಗಿ ಆಯ್ಕೆ ಮಾಡಿದ ಜಿಲ್ಲೆಯ ಜನತೆಗೆ ಕೃತಜ್ಞತೆ ಅರ್ಪಿಸುವ ಜೊತೆಗೆ ಅಂಬರೀಶ್ ಅವರ ನಂತರದ ಸ್ಥಾನವನ್ನು ಅವರ ಮಗ ಅಭಿಷೇಕ್ ಗೌಡ ಅವರಿಗೆ ನೀಡುವಂತೆ ಮತದಾರರಿಗೆ ಮನವಿ ಮಾಡುವ ಉದ್ದೇಶದೊಂದಿಗೆ ಇದನ್ನು ಏರ್ಪಡಿಸಿದ್ದಾರೆ.
ಊಟಕ್ಕೆ ಊಟಕ್ಕೆ ಬನ್ನಿ ಎಂದು ಜಿಲ್ಲೆಯ ಎಲ್ಲ ಜನರನ್ನ ಸುಮಲತಾ ಅಂಬರೀಶ್ ಮತ್ತು ಅಭಿಷೇಕ್ ಗೌಡ ಅವರು ಆಹ್ವಾನಿಸಿದ್ದಾರೆ ಇದಕ್ಕಾಗಿ ಗೆಜ್ಜಲಗೆರೆ ಆಟದ ಮೈದಾನದಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿದ್ದು ಸುಮಾರು 50 ಸಾವಿರ ಮಂದಿ ಊಟ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಅಂಬರೀಶ್ ಅವರ ಇಷ್ಟದ ನಾನ್‌ವೆಜ್ ಐಟಂಗಳನ್ನು ಬೀಗರ ಔತಣಕೂಟಕ್ಕೆ ಮಾಡಿಸಲಾಗುತ್ತಿದೆ.
ಚಿತ್ರನಟ ನಿರ್ಮಾಪಕ ಹಾಗೂ ಅಂಬರೀಶ್ ಕುಟುಂಬದ ಆಪ್ತ ರಾಕ್ ಲೈನ್ ವೆಂಕಟೇಶ್ ಬೀಗರ ಔತಣಕೂಟದ ಉಸ್ತುವಾರಿ ವಹಿಸಿದ್ದಾರೆ ಊಟದ
ಮೆನುವಿನಲ್ಲಿ ಮಟನ್ ಕರಿ, ರಾಗಿ ಮುದ್ದೆ, ಬೋಟಿ ಗೊಜ್ಜು, ಕೈಮಾ, ಪಾಯಸ, ಚಿಕನ್ ಫ್ರೈ, ಕಬಾಬ್, ಗೀ ರೈಸ್, ಅನ್ನ ರಸಂ, ಬೀಡ, ಐಸ್‌ಕ್ರೀಂ ಇರಲಿದೆ. ಪಕ್ಕಾ ನಾಟಿ ಸ್ಟೈಲ್‌ನಲ್ಲಿ ಬೀಗರೂಟ ಸಿದ್ಧವಾಗಲಿದೆ.
ಇದಕ್ಕಾಗಿ ಬರೋಬ್ಬರಿ ಏಳು ಮಟನ್ ಮತ್ತು 10 ಟನ್ ಚಿಕನ್ ವ್ಯವಸ್ಥೆ ಮಾಡಲಾಗಿದೆ
ಆ ದಿನ ಅಭಿ ಹಾಗೂ ಅವಿವಾ ಕುಟುಂಬಸ್ಥರು, ಆಪ್ತರು ಹಾಗೂ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಕನ್ನಡ ಚಿತ್ರರಂಗದ ಕೆಲಸ ತಾರೆಯರು ಕೂಡ ಅಂಬಿ ಮನೆಯ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.
ಅಂಬರೀಶ್ ಪುತ್ರನ ಬೀಗರ ಊಟಕ್ಕೆ 17 ಟನ್ ಮಾಂಸ!
Previous Articleವಿದ್ಯುತ್ ದರ ಹೆಚ್ಚಳ ಯಾರು, ಹೇಗೆ ಮಾಡಿದ್ದು ಗೊತ್ತಾ!
Next Article Congressನಿಂದ BJPಗೆ Burnol ಭಾಗ್ಯ!