ಬೆಂಗಳೂರು – ರಾಜ್ಯದಲ್ಲಿ ಗೃಹಬಳಕೆ ವಿದ್ಯುತ್ ಗ್ರಾಹಕರಿಗೆ ಮಾಸಿಕ ಸರಾಸರಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಉಚಿತ ನೀಡುವ ಯೋಜನೆ ಜಾರಿಗೆ ಬರುತ್ತಿರುವ ಬೆನ್ನಲ್ಲೇ ವಿದ್ಯುತ್ ದರ ಹೆಚ್ಚಳಗೊಂಡಿದೆ.
ದರ ಹೆಚ್ಚಳದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಇದನ್ನೇ ಬಂಡವಾಳವಾಗಿಸಿಕೊಂಡ ಬಿಜೆಪಿ ಮತ್ತು ಸಂಘ ಪರಿವಾರ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಉಂಟಾಗುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಅಪಪ್ರಚಾರದಲ್ಲಿ ನಿರತವಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ವಾಸ್ತವವಾಗಿ ವಿದ್ಯುತ್ ದರ ಹೆಚ್ಚಳ ಎನ್ನುವುದು ಸರ್ಕಾರದ ತೀರ್ಮಾನವಲ್ಲ ಅದನ್ನು ಪ್ರತಿವರ್ಷ ವಿದ್ಯುತ್ ದರ ನಿಯಂತ್ರಣ ಆಯೋಗ ಮಾಡಲಿದೆ. ಸಂಸ್ಥೆಯಾದ ಆಯೋಗ ನ್ಯಾಯಾಂಗ ರೀತಿಯಲ್ಲಿ ಕೆಲಸ ಮಾಡಲಿದೆ. ವಿದ್ಯುತ್ ದರ ಪರಿಷ್ಕರಣೆ, ವಿದ್ಯುತ್ ಖರೀದಿ ಒಪ್ಪಂದ ಸಿರಿದಂತೆ ಎಲ್ಲಾ ಪ್ರಕ್ರಿಯೆಗಳನ್ನು ದರ ನಿಯಂತ್ರಣ ಆಯೋಗ ತೀರ್ಮಾನಿಸಲಿದೆ.
ವಿದ್ಯುತ್ ವಿತರಣಾ ಸಂಸ್ಥೆಗಳು ಪ್ರತಿ ವರ್ಷ ತಾವು ಗ್ರಾಹಕರಿಗೆ ಪೂರೈಸುವ ವಿದ್ಯುತ್ ಗೆ ಉತ್ಪಾದನಾ ಸಂಸ್ಥೆಗಳಿಗೆ ಯಾವ ಬೆಲೆ ನೀಡುತ್ತವೆ ಅದರ ಪೂರೈಕೆ ಮತ್ತು ವಿತರಣೆಗೆ ಆಗುವ ವೆಚ್ಚ ಸಿಬ್ಬಂದಿಯ ವೇತನ ಎಲ್ಲಾ ಅಂಶಗಳನ್ನು ಲೆಕ್ಕ ಹಾಕಿ ದರ ಪರಿಷ್ಕರಣೆ ಮಾಡುವಂತೆ ಆಯೋಗಕ್ಕೆ ಮಾಡುವಂತೆ ಮನವಿ ಸಲ್ಲಿಸುತ್ತವೆ.
ದರ ಪರಿಷ್ಕರಣೆಯ ಮನವಿಯನ್ನು ಗುಪ್ತವಾಗಿ ಸಲ್ಲಿಸಲು ಬರುವುದಿಲ್ಲ ಈ ಮನವಿಯ ಬಗ್ಗೆ ಎಲ್ಲಾ ವಿದ್ಯುತ್ ವಿತರಣಾ ಸಂಸ್ಥೆಗಳು ವೃತ್ತ ಪತ್ರಿಕೆಗಳಲ್ಲಿ ಜಾಹೀರಾತಿನ ಮೂಲಕ ಸಾರ್ವಜನಿಕರ ಅವಗಾಹನೆಗೆ ಪ್ರಕಟಿಸಬೇಕು. ಆನಂತರ ಆಯೋಗ ಈ ಮನವಿಯನ್ನು ವಿಚಾರಣೆಗೆ ನಿಗದಿ ಪಡಿಸುತ್ತದೆ ಯಾವುದೇ ನಾಗರೀಕರು ಸಂಘ ಸಂಸ್ಥೆಗಳು ರಾಜಕೀಯ ಪಕ್ಷಗಳು ಆಯೋಗದ ಮುಂದೆ ಹಾಜರಾಗಿ ತಮ್ಮ ವಾದ ಮಂಡಿಸಲು ಮುಕ್ತ ಅವಕಾಶ ಕಲ್ಪಿಸಲಾಗುತ್ತದೆ.
ನಿಗದಿಪಡಿಸಿದ ದಿನದಂದು ಆಯೋಗದ ಮುಖ್ಯಸ್ಥರು ಸಾರ್ವಜನಿಕ ವಿಚಾರಣೆ ನಡೆಸಲಿದ್ದಾರೆ ಈ ವೇಳೆ ಪರ ಮತ್ತು ವಿರೋಧದ ಅಭಿಪ್ರಾಯ ಆಲಿಸಿ ಆಯೋಗ ತನ್ನ ತೀರ್ಪು ಪ್ರಕಟಿಸಲಿದೆ ಈ ತೀರ್ಪು ಪ್ರತಿ ವರ್ಷ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.
ಅದೇ ರೀತಿಯಲ್ಲಿ ಈ ವರ್ಷವೂ ದರ ನಿಯಂತ್ರಣ ಆಯೋಗ ತನ್ನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಏಪ್ರಿಲ್ ಒಂದರಿಂದ ಜಾರಿಗೆ ಬರುವಂತೆ ವಿದ್ಯುತ್ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ ಆದರೆ ಅಂದು ಆಡಳಿತ ನಡೆಸುತ್ತಿದ್ದ ಬಿಜೆಪಿ ನೇತೃತ್ವದ ಸರ್ಕಾರ ಚುನಾವಣೆಯ ಹಿನ್ನೆಲೆಯಲ್ಲಿ ಈ ಆದೇಶವನ್ನು ಜೂನ್ ಒಂದರವರೆಗೆ ಜಾರಿಗೊಳಿಸದಂತೆ ಎಲ್ಲಾ ವಿದ್ಯುತ್ ವಿತರಣಾ ಸಂಸ್ಥೆಗಳಿಗೆ ಆದೇಶ ನೀಡಿತ್ತು.
ಅದರಂತೆ ಇದೀಗ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಿದ್ದು ಈ ಹಿಂದಿನ ಸರ್ಕಾರ ನೀಡಿದ ಸೂಚನೆ ಅನ್ವಯ ಜೂನ್ ಒಂದರಿಂದ ದರ ಹೆಚ್ಚಳ ಆದೇಶ ಜಾರಿಗೆ ವಿದ್ಯುತ್ ವಿತರಣಾ ಸಂಸ್ಥೆಗಳು ಮುಂದಾಗಿವೆ ಈ ವೇಳೆ ಆದೇಶವನ್ನು ಏಪ್ರಿಲ್ ಒಂದರಿಂದ ಜಾರಿಗೆ ತಂದಿದ್ದು ಅಂದಿನ ವಿದ್ಯುತ್ ಬಳಕೆಯನ್ನು ಇಂದಿನ ದರ ಹೆಚ್ಚಳದ ಆದೇಶಕ್ಕೆ ಲೆಕ್ಕಾಚಾರ ಮಾಡಿ ಗ್ರಾಹಕರಿಗೆ ವಿತರಣೆ ಮಾಡಿವೆ.
ಇದರ ಜೊತೆಯಲ್ಲಿ ಇದರ ಜೊತೆಯಲ್ಲಿ ಅಂದು ಆಡಳಿತ ನಡೆಸುತ್ತಿದ್ದ ಸರ್ಕಾರ ಹೆಚ್ಚಳದ ಮನವಿಯ ಕುರಿತಂತೆ ಸರಿಯಾಗಿ ಅಧ್ಯಯನ ಮಾಡದೆ ಆಯೋಗದ ಮುಂದೆ ತಪ್ಪು ಮನವಿಯನ್ನು ಸಲ್ಲಿಸಿದ ಪರಿಣಾಮ ಗ್ರಾಹಕರು ದರ ಏರಿಕೆಯ ಬರೆ ಹಾಕಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ವಿದ್ಯುತ್ ದರ ನಿಯಂತ್ರಣ ಆಯೋಗ ನೀಡಿರುವ ಆದೇಶದ ಅನ್ವಯ ಗೃಹಬಳಕೆ ಗ್ರಾಹಕರು ಬಳಸಿದ ಮೊದಲ ನೂರು ಯೂನಿಟ್ ವರೆಗೆ ಪ್ರತಿ ಯೂನಿಟ್ ವಿದ್ಯುತ್ ಗೆ ನಾಲ್ಕು ರೂಪಾಯಿ 75 ಪೈಸೆ ಶುಲ್ಕ ವಿಧಿಸಲಾಗುತ್ತದೆ ಆನಂತರದನ್ನು ಎರಡನೇ ಸ್ಲಾಬ್ ಎಂದು ಪರಿಗಣಿಸಿ ಪ್ರತಿ ಯೂನಿಟ್ ಗೆ ಏಳು ರೂಪಾಯಿ ದರ ನಿಗದಿಪಡಿಸಲಾಗಿದೆ ಇದು ಹಿಂದಿನ ಸರ್ಕಾರ ಆಯೋಗಕ್ಕೆ ನೀಡಿದ ತಪ್ಪು ಮಾಹಿತಿ ಅನ್ವಯ ಹೊರಡಿಸಲಾಗಿರುವ ಆದೇಶವಾಗಿದೆ.
ನೆರವಿಗೆ ಬಂದ ಮಂತ್ರಿ ಜಾರ್ಜ್:
ಈ ಬಗ್ಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಅಸಮಾಧಾನಗಳು ಮತ್ತು ದೂರಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಇಂಧನ ಸಚಿವ ಕೆ ಜೆ ಜಾರ್ಜ್ ಅವರು ದರ ಹೆಚ್ಚಳ ಆದೇಶದ ಕುರಿತಂತೆ ಉಂಟಾಗಿರುವ ಲೋಪಗಳನ್ನು ಸರಿಪಡಿಸುವಂತೆ ಕೋರಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ.
ಇದಕ್ಕೂ ಮುನ್ನ ದರ ನಿಯಂತ್ರಣ ಆಯೋಗದ ತೀರ್ಪಿನಲ್ಲಿ ಇರುವ ಲೋಪ ದೋಷಗಳ ಬಗ್ಗೆ ಅಧ್ಯಯನ ನಡೆಸಲು ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಅಧಿಕಾರಿಯ ವರದಿ ಬಂದ ನಂತರ ಆಯೋಗಕ್ಕೆ ಮೇಲ್ಮನವಿ ಸಲ್ಲಿಸುವ ಜೊತೆಗೆ ನೂತನ ದರ ಹೆಚ್ಚಳದ ಆದೇಶ ಜಾರಿ ಕುರಿತಂತೆಯೂ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ವಿದ್ಯುತ್ ದರ ಹೆಚ್ಚಳ ಯಾರು, ಹೇಗೆ ಮಾಡಿದ್ದು ಗೊತ್ತಾ!
Previous Articleತಾಯಿಯನ್ನು ಕೊಂದು ಸೂಟ್ ಕೇಸ್ ಗೆ ತುಂಬಿದ ಮಗಳು
Next Article ಅಂಬರೀಶ್ ಪುತ್ರನ ಬೀಗರ ಊಟಕ್ಕೆ 17 ಟನ್ ಮಾಂಸ!
2 ಪ್ರತಿಕ್ರಿಯೆಗಳು
i-tec.ru https://multimedijnyj-integrator.ru .
Психология цвета в дизайне натяжных потолков
ціна натяжної стелі https://naryazhnistelifrtg.kiev.ua/ .