ಚೆನ್ನೈ.ಸೆ.,12- ಬೆಕ್ಕನ್ನು ಹುಲಿಮರಿಯನ್ನಾಗಿ ಪರಿವರ್ತಿಸಿ ಮಾರಾಟಕ್ಕಿಟ್ಟ ಖತರ್ನಾಕ್ ಖದೀಮನೊಬ್ಬ
ನಗರ ಪೊಲೀಸರ ಅತಿಥಿಯಾಗಿದ್ದಾನೆ!
ಬೆಕ್ಕಿಗೆ ಹುಲಿಮರಿಯ ಬಣ್ಣ ಬಳಿದು ಖತರ್ನಾಕ್ ಐಡಿಯಾ ಮಾಡಿ ಮಾರಾಟ ಮಾಡಲು ಹೋದ ತಿರುವಣ್ಣಾಮಲೈ ಗ್ರಾಮದ ಅರ್ನಿ ನಿವಾಸಿ ಪಾರ್ಥಿಬನ್ (24) ಬಂಧಿತ ಆರೋಪಿಗಳಾಗಿದ್ದಾನೆ.
ತನ್ನ ಬಳಿ ಇದ್ದ ಬೆಕ್ಕಿನ ಮರಿಗಳಿಗೆ ಬಣ್ಣ ಬಳಿದ ಈತ ಅದನ್ನು ಹುಲಿಮರಿಗಳಂತೆಯೇ ಕಾಣಿಸುವಂತೆ ಮಾಡಿದ್ದ.
ಮೂರು ತಿಂಗಳ ಮೂರು ಹುಲಿಮರಿಗಳು ಮಾರಾಟಕ್ಕಿವೆ ಎಂದು ಪಾರ್ಥಿಬನ್ ವಾಟ್ಸ್ಆ್ಯಪ್ನಲ್ಲಿ ಸ್ಟೇಟಸ್ ಹಾಕಿದ್ದ. ಅದನ್ನು ಪಕ್ಕದ ಆಂಧ್ರಪ್ರದೇಶಕ್ಕೆ ಮಾರಲು ಯತ್ನಿಸುತ್ತಿದ್ದ. ಪ್ರತಿ ಮರಿಗೆ 25 ಲಕ್ಷ ರೂಪಾಯಿ ಬೆಲೆ ನಿಗದಿ ಮಾಡಿದ್ದ. ಹುಲಿಮರಿಗಳು ಬೇಕೆಂದರೆ ತನಗೆ ಸಂಪರ್ಕಿಸುವಂತೆ ಆತ ಅದರಲ್ಲಿ ಹೇಳಿದ್ದ. ಖುದ್ದಾಗಿ ಬಂದು ಹುಲಿಮರಿಗಳನ್ನು ಖರೀದಿಸುವವರ ಮನೆಗೆ ತಲುಪಿಸುವುದಾಗಿ ತಿಳಿಸಿದ್ದ. ಸ್ಟೀಲ್ಬೌಲ್ನಲ್ಲಿ ಹುಲಿ ಮರಿಗಳಿಗೆ ಆಹಾರ ನೀಡುತ್ತಿರುವ ಚಿತ್ರವನ್ನೂ ಹಾಕಿದ್ದ.
ಹುಲಿಮರಿಗಳನ್ನು ಮಾರಾಟ ಮಾಡುವುದು ಕಾನೂನುಬಾಹಿರವಾಗಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈತನ ಮೇಲೆ ಕಣ್ಣು ಇಟ್ಟಿತ್ತು. ಇದು ತಿಳಿಯುತ್ತಲೇ ಪಾರ್ಥಿಬನ್ ತಲೆಮರೆಸಿಕೊಂಡಿದ್ದ. ನಂತರ ಅರಣ್ಯಾಧಿಕಾರಿಗಳು ಇವರ ಮನೆಯಲ್ಲಿ ಹುಡುಕಾಟ ನಡೆಸಿದ್ದರೂ ಹುಲಿ ಮರಿಗಳು ಮಾತ್ರ ಸಿಗಲಿಲ್ಲ. ನಂತರ ಸ್ಥಳೀಯ ಪೊಲೀಸರ ನೆರವಿನಿಂದ ಆತನನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ.
ಇದೇ ವ್ಯಕ್ತಿ ಈ ಹಿಂದೆ ನಕ್ಷತ್ರ ಆಮೆಗಳನ್ನು ಅಕ್ರಮವಾಗಿ ಮಾರಾಟ ಮಾಡಿರುವುದೂ ತಿಳಿದಿದೆ.
ಬೆಕ್ಕಿಗೆ ಹುಲಿ ಬಣ್ಣ ಬಳಿದು ಮಾರಲೆತ್ನಿಸಿದ ವಂಚಕ
Previous Articleಈಜಲು ತೆರಳಿದವರು ಬರಲೇ ಇಲ್ಲ
Next Article ಚಿತ್ರಕಲಾ ಪರಿಷತ್ ನಲ್ಲಿ India-Italy ಕಲಾ ಪ್ರದರ್ಶನ