ಹುಬ್ಬಳ್ಳಿ; ಸರಳ ವಾಸ್ತುವಿನ ಮೂಲಕ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶಾದ್ಯಂತ ಚಿರಪರಿಚಿತರಾಗಿದ್ದ ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಅವರನ್ನು ಇಂದು (ಜು.5) ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಆಸ್ತಿ ವಿಷಯವಾಗಿ ಅವರೊಂದಿಗೆ ಕೆಲಸ ಮಾಡಿದ್ದ ಆಪ್ತರೇ ಹತ್ಯೆಗೈದಿದ್ದು, ಗುರೂಜಿ ದುರಂತ ಅಂತ್ಯ ಕಂಡಿದ್ದಾರೆ. ವಾಸ್ತು ಹೇಳುವುದು ಮಾತ್ರವಲ್ಲದೆ ರಿಯಲ್ ಎಸ್ಟೇಟ್ ಉದ್ಯಮದಲ್ಲೂ ಸಾವಿರಾರು ಕೋಟಿ ವ್ಯವಹಾರ ಮಾಡುತ್ತಿದ್ದ ಚಂದ್ರಶೇಖರ ಗುರೂಜಿ ದೇಶದ ವಿವಿಧ ರಾಜ್ಯಗಳಲ್ಲಿ ಸಾಕಷ್ಟು ಆಸ್ತಿಯನ್ನು ಸಂಪಾದಿಸಿದ್ದರು.
ಬೆಂಗಳೂರಿನಲ್ಲೇ ಅನೇಕ ನಿವೇಶನಗಳು ಹಾಗೂ ಕಟ್ಟಡಗಳನ್ನು ಖರೀದಿಸಿದ್ದ ಅವರು ಮಹಾರಾಷ್ಟ್ರ, ಗುಜರಾತ್, ದೆಹಲಿ ಆಂಧ್ರಪ್ರದೇಶದಲ್ಲಿಯೂ ಒಂದೊಂದು ಕಚೇರಿ ಹೊಂದಿದ್ದರು. ಇವರ ಕಚೇರಿಯಲ್ಲಿ 300 ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದರು.
ಬರೋಬ್ಬರಿ 1000 ಕೋಟಿಗೂ ಹೆಚ್ಚು ಆಸ್ತಿ ಸಂಪಾದನೆ ಮಾಡಿದ್ದ ಚಂದ್ರಶೇಖರ ಗುರೂಜಿ, ಹುಬ್ಬಳ್ಳಿ ಜೆಪಿ ನಗರದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಅಪಾರ್ಟ್ಮೆಂಟ್ ಕೂಡ ನಿರ್ಮಾಣ ಮಾಡಿದ್ದರು ಎನ್ನಲಾಗಿದೆ.
ಬೇನಾಮಿ ಆಸ್ತಿ ಸಂಪಾದನೆ ಮಾಡಿದ್ದ ಗುರೂಜಿಗೆ ಅದುವೇ ದಾರುಣ ಸಾವಿಗೆ ಕಾರಣವಾಗಿದೆ. ಹತ್ಯೆಯಾದ ನಾಲ್ಕು ಗಂಟೆಯೊಳಗೆ ಪೊಲೀಸರು ಮಹಾಂತೇಶ್ ಹಾಗೂ ಮಂಜುನಾಥ್ ಎಂಬ ಹಂತಕರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಒಟ್ಟಿನಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿ ಕೋಟಿ ಒಡೆಯ ಚಂದ್ರಶೇಖರ ಗುರೂಜಿಯ ಸಾವಿನ ನೆತ್ತರಿಗೆ ಬೆಚ್ಙಿಬಿದ್ದಿದೆ.
ಬುಧವಾರ ಅಂತ್ಯಕ್ರಿಯೆ:
ಭೀಕರವಾಗಿ ಸಾವನ್ನಪ್ಪಿದ ಚಂದ್ರಶೇಖರ ಗುರೂಜಿಯ ಅಂತ್ಯಕ್ರಿಯೆ ಹುಬ್ಬಳ್ಳಿಯ ಸುಳ್ಳ ರಸ್ತೆಯಲ್ಲಿನ ಅವರ ಹೊಲದಲ್ಲಿ ನಾಳೆ (ಜುಲೈ 6) ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಹುಬ್ಬಳ್ಳಿಯಲ್ಲಿದೆ 28 ಕೋಟಿ ಮೊತ್ತದ ಗುರೂಜಿ ಅಪಾರ್ಟ್ಮೆಂಟ್!
Previous Articleಗೃಹಬಳಕೆ ಸಿಲಿಂಡರ್ ದರ ಮತ್ತೆ ಹೆಚ್ಚಳ
Next Article ಸಾವಿರ ಕೋಟಿ ಒಡೆಯ ಚಂದ್ರಶೇಖರ ಗುರೂಜಿ ಅಂತ್ಯದ ಸುತ್ತ…