ಬೆಂಗಳೂರು,ಅ.7-
ಹಲವು ಅಪರಾಧ ಪ್ರಕರಣಗಳಲ್ಲಿ ಬೆಂಗಳೂರು ನಗರದ ಪೊಲೀಸರು ಜಪ್ತಿ ಮಾಡಿರುವ
ಸುಮಾರು 5 ಕೋಟಿ ಮೌಲ್ಯದ ಹಳೆಯ ನೋಟುಗಳಿಗೆ ಬೆಲೆ ಇಲ್ಲಂದತಾಗಿದೆ.
ಬೇರೆ ದಾರಿ ಕಾಣದೆ ಈ ಎಲ್ಲಾ ನೋಟುಗಳನ್ನು ನಾಶಪಡಿಸಲು ನಗರ ಪೊಲೀಸರು ಮುಂದಾಗಿದ್ದಾರೆ.
ಈ ಹಳೇ ನೋಟುಗಳನ್ನು ಆರ್ಬಿಐಗೆ ನೀಡಿ ಬದಲಾವಣೆಗೆ ಮನವಿ ಮಾಡಿದ್ದರು. ಆದರೆ ನೋಟು ಬದಲಾವಣೆಗೆ ನೀಡಲಾಗಿದ್ದ ಗಡುವು ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಆರ್ಬಿಐ ಹಳೇ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಹಳೆಯ ನೋಟುಗಳಿಗೆ ಬೆಂಕಿ ಇಡಲು ಪೊಲೀಸರು ತೀರ್ಮಾನಿಸಿ ಇದಕ್ಕಾಗಿ ಅನುಮತಿ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ನಗರ ಪೊಲೀಸರ ಬಳಿ ಐದು ಕೋಟಿಗೂ ಅಧಿಕ ಹಳೆಯ ನೋಟಿನ ಕಂತೆಗಳಿವೆ. 1 ಸಾವಿರ ಹಾಗೂ 500 ಮುಖಬೆಲೆಯ ಹಳೇ ನೋಟುಗಳಿಗೆ ನಯಾಪೈಸೆ ಬೆಲೆ ಇಲ್ಲ. ಆ ನೋಟುಗಳೀಗ ಕೇವಲ ಕಾಗದದ ಚೂರಷ್ಟೇ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.
ಹಲವು ಪ್ರಕರಣದಲ್ಲಿ 5 ಕೋಟಿಗೂ ಅಧಿಕ ಹಳೆಯ ನೋಟುಗಳನ್ನು ಸೀಜ್ ಮಾಡಲಾಗಿದೆ. ಬೇರೆ ಬೇರೆ ಪ್ರಕರಣದಲ್ಲಿ ಹಳೇ ನೋಟುಗಳು ಪತ್ತೆಯಾಗಿವೆ. ನೋಟು ಅಮಾನ್ಯೀಕರಣ ಬಳಿಕ ಹಳೇ ನೋಟುಗಳು ಬೆಲೆ ಕಳೆದುಕೊಂಡಿವೆ.
ನೋಟು ಅಮಾನ್ಯೀಕರಣ ಬಳಿಕ ಬದಲಾವಣೆಗೆ ಕಾಲಾವಕಾಶ ನೀಡಲಾಗಿತ್ತು. ಇದೀಗ ಕೊಟ್ಟ ಕಾಲಾವಕಾಶ ಕೂಡ ಮುಗಿದು ಹೋಗಿದೆ. ಹೀಗಾಗಿ ಹಳೇ ನೋಟುಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಆರ್ ಬಿಐ ತಿಳಿಸಿದೆ.
ಹಳೇ ನೋಟು ಹಿನ್ನೆಲೆಯಲ್ಲಿ ಪೊಲೀಸರು ಬ್ಯಾಂಕ್ ನಲ್ಲಿ ಡೆಪಾಸಿಟ್ ಮಾಡಲಾಗುತ್ತಿಲ್ಲ. ಅತ್ತ ಆರ್ ಬಿಐ ಕೂಡ ಈ ಹಣವನ್ನ ಸ್ವೀಕಾರ ಮಾಡ್ತಿಲ್ಲ. ಹೀಗಾಗಿಯೇ ಹಳೇ ನೋಟುಗಳನ್ನ ಸುಟ್ಟು ಹಾಕಲು ಪೊಲೀಸರು ನಿರ್ಧರಿಸಿದ್ದಾರೆ. ಕೋರ್ಟ್ ಅನುಮತಿ ಪಡೆದ ಬಳಿಕ ಪೊಲೀಸರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಕೋರ್ಟ್ ಅನುಮತಿ ಕೊಟ್ಟರೆ ಪೊಲೀಸರು ಹಳೇ ನೋಟು ನಾಶಪಡಿಸಲಿದ್ದಾರೆ
Previous Articleಮೈಸೂರು ದಸರಾ ವೀಕ್ಷಣೆಗೆ ಟಿಕೆಟ್ ಬುಕಿಂಗ್
Next Article ಮುರುಘಾಶ್ರೀ ಬಿಡುಗಡೆಗೆ ಕೋರ್ಟ್ ಆದೇಶ